ಪುತ್ತೂರು: ಟೋಯ್ಸ್, ಸೈಕಲ್, ಬ್ಯಾಟರಿ ಚಾಲಿತ ಜೀಪು, ಸ್ಕೂಟರ್, ವಾಚ್, ಗಿಫ್ಟ್ಐಟಂ, ಬ್ಯಾಗ್ ಸೇರಿದಂತೆ ಮಕ್ಕಳ ಸಂಪೂರ್ಣ ಆಟಿಕೆಗಳ ಮಳಿಗೆ ‘ಟೋಯ್ ಗ್ಯಾಲರಿ’ ಡಿ.18ರಂದು ದರ್ಬೆ ಲಿಟ್ಲ್ ಫ್ಲವರ್ ಶಾಲಾ ಮುಂಭಾಗದಲ್ಲಿ ಶುಭಾರಂಭಗೊಳ್ಳಲಿದೆ.
ಪುತ್ತೂರು ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಆಂಜನೇಯ ರೆಡ್ಡಿಯವರು ಮಳಿಗೆಯನ್ನು ಉದ್ಘಾಟಿಸಲಿದ್ದು ಅತಿಥಿಗಳಾಗಿ ಸರ್ವೆ ಎಸ್.ಜಿ.ಎಂ ಪ್ರೌಢ ಶಾಲೆಯ ನಿವೃತ್ತ ಮುಖ್ಯಗುರು ಶ್ರೀನಿವಾಸ್ ಎಚ್.ಬಿ, ಚಾರ್ಟರ್ಡ್ ಅಕೌಂಟೆಂಟ್ ಸಿದ್ದೀಕ್, ವೀರಮಂಗಲ ಖತೀಬ್ ನಿಯಾಝ್ ದಾರಿಮಿ, ಯಾಕೂಬ್ ದಾರಿಮಿ ಸೋಂಪಾಡಿ ಭಾಗವಹಿಸಲಿದ್ದಾರೆ ಎಂದು ಟೋಯ್ ಗ್ಯಾಲರಿಯ ಮಾಲಕರು ತಿಳಿಸಿದ್ದಾರೆ.
