ಪುತ್ತೂರು: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ಪುತ್ತೂರು ಮತ್ತು ಕಡಬ ತಾಲೂಕು-ಮಟ್ಟದ ಪ್ರತಿಭಾ ಕಾರಂಜಿ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿಯಲ್ಲಿ ನಡೆದಿದ್ದು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಮೆತ್ತಡ್ಕ ಇಲ್ಲಿನ 5ನೇ ತರಗತಿ ವಿದ್ಯಾರ್ಥಿನಿ ಶಜ್ಮಾ ಫಾತಿಮಾ ಹಿರಿಯರ ವಿಭಾಗದ ಅರೇಬಿಕ್ ಧಾರ್ಮಿಕ ಪಠಣದಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಮರಿಯಾ ಅಶ್ರಫ್ ತಿಳಿಸಿದ್ದಾರೆ.
ಈಕೆ ಕೂರ್ನಡ್ಕ ನಿವಾಸಿ ಸಮೀರ್ ನಾಜೂಕ್, ಪೌಝಿಯಾ ದಂಪತಿಯ ಪುತ್ರಿ.
