ಕೋಡಿಂಬಾಳ ಗ್ರಾಮ

ಶ್ರೀ ಮಹಾಬಲೇಶ್ವರ ಸ್ವಾಮಿ ಮತ್ತು ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ ಮಾಲೇಶ್ವರ

ಕಡಬ ಸೀಮೆಗೊಳಪಟ್ಟ ಕೋಡಿಂಬಾಳ ಗ್ರಾಮದ ಮಾಲೇಶ್ವರ ಒಂದು ಚಿಕ್ಕ ಹಳ್ಳಿಯಾಗಿದ್ದು ಇಲ್ಲಿ ಸಾವಿರಾರು ವರ್ಷಗಳ ಪುರಾತನ ಇತಿಹಾಸವಿರುವ ಶ್ರೀ ಮಹಾಬಲೇಶ್ವರ ದೇವಸ್ಥಾನ ಮತ್ತು ಶ್ರೀ ವೀರಭದ್ರ ದೇವಸ್ಥಾನವಿದ್ದು ಹಿಂದೆ ರಾಜವಂಶದವರಿಂದ ಸ್ಥಾಪಿಸಲ್ಪಟ್ಟು ಜೈನ ಹಾಗೂ ಲಿಂಗಾಯಿತ ವಂಶದವರ ಅಧೀನದಲ್ಲಿ ಇತ್ತು. ಮಕರ ಸಂಕ್ರಮಣದಂದು ಸಾಯಂಕಾಲ ಕುಕ್ಕೆರೆಬೆಟ್ಟನಿಂದ ಶ್ರೀ ಕಡಂಬಳಿತ್ತಾಯ ಸ್ವಾಮಿ, ಕಡಬ ಗುತ್ತಿನ ಮನೆಯಿಂದ ಶ್ರೀ ಪುರುಷದೈವ ಮತ್ತು ಪೊಟ್ಟ ದೈವ ಹಾಗೂ ಉದ್ರಾಂಡಿ ದೈವದ ಭಂಡಾರವು ಕ್ರಮ ಪ್ರಕಾರವಾಗಿ ಶ್ರೀ ವೀರಭದ್ರ ದೇವಸ್ಥಾನಕ್ಕೆ ಬಂದು ಶ್ರೀ ದೇವಳದ ಎದುರುಗದ್ದೆಯಲ್ಲಿ ನಡೆಯುವ ನೇಮೋತ್ಸವವನ್ನು ಸೋಣ ನಡಾವಳಿ ಎಂದು ಕರೆಯುತ್ತಾರೆ. ಈ ಸ್ಥಳವು ಹಿಂದೆ ಅರಸರ ಕಾಲದಲ್ಲಿ ಮಾಲೇಶ್ವರ ಎಂದೂ, ಪುರ ಪೊರಂತು ಎಂದೂ ಕರೆಯಲ್ಪಡುತ್ತಿತ್ತು.
ಆಡಳಿತ ಸಮಿತಿ: ಅಧ್ಯಕ್ಷರು-ವಿಶ್ವೇಶ್ವರ ಭಟ್ ಎಲಿಯೂರು ಮೊ: ೯೪೪೮೭೨೬೦೧೧, ಕಾರ್ಯದರ್ಶಿ-ರಮೇಶ್ ಮೊ: ೯೪೪೯೭೪೨೩೩೬, ಉಪಾಧ್ಯಕ್ಷರು-ಧರನೇಂದ್ರ ಜೈನ್, ಕೋಶಾಧಿಕಾರಿ-ಸೋಮಪ್ಪ ಕೆ, ಜತೆ ಕಾರ್ಯದರ್ಶಿ-ಉಮೇಶ್ ರೈ, ಸದಸ್ಯರು-ಮಂಜಪ್ಪ ಕನಡ, ಶಾಂತಪ್ಪ ಪಟ್ಟೆ, ಕುಸುಮಾವತಿ ರೈ, ಪದ್ಮಯ್ಯ ಪೂಜಾರಿ, ಕರುಣಾಕರ ಪಾಟಾಳಿ, ಭಾಸ್ಕರ ದೇವಾಡಿಗ, ಎನ್. ಲಕ್ಷ್ಮಣ ರಾವ್, ಈಶ್ವರ ಭಟ್ (ಅರ್ಚಕರು) ಸಿದ್ಧಯ್ಯ (ಅರ್ಚಕರು).

ಶ್ರೀ ಮಹಾವಿಷ್ಣು ದೇವಸ್ಥಾನ ಕೋಡಿಂಬಾಳ ಹಾಗೂ ಶ್ರೀ ಉಳ್ಳಾಕ್ಲು ರಾಜನ್ ದೈವಸ್ಥಾನ, ಮಜ್ಜಾರು, ಕೋಡಿಂಬಾಳ ಗ್ರಾಮ, ಅಂಚೆ: ಕಡಬ, ಪುತ್ತೂರು ತಾಲೂಕು. ಮೊ: 9663419123

ಕೋಡಿಂಬಾಳಮೀಪ ಕುಮಾರಧಾರ ನದಿ ತಟದಲ್ಲಿರುವ ಕೋಡಿಂಬಾಳ ಶ್ರೀ ಮಹಾವಿಷ್ಣು ದೇವರ ಕ್ಷೇತ್ರ ಹಾಗೂ ಮಜ್ಜಾರು.
ಶ್ರೀ ಉಳ್ಳಾಕ್ಲು ರಾಜನ್ ದೈವಸ್ಥಾನ ಬಹಳ ಪುರಾತನ ಹಾಗೂ ಕಾರಣಿಕ ಕ್ಷೇತ್ರ. ಹಲವಾರು ಶತಮಾನಗಳ ಇತಿಹಾಸ ಇರುವ ಈ ಕ್ಷೇತ್ರ ಊರ ಪರವೂರ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸುವ ಕ್ಷೇತ್ರವಾಗಿದೆ.
ವಿಶೇಷ ಕಾರಣಿಕದ ದೈವಗಳು: ಮಜ್ಜಾರು ಶ್ರೀ ಉಳ್ಳಾಕ್ಲು ರಾಜನ್ ಸಪರಿವಾರ ದೈವಗಳು ವಿಶೇಷ ಕಾರ್ನಿಕದ ದೈವಗಳು. ಊರು ಹಾಗೂ ಪರವೂರಿನಿಂದ ಭಕ್ತರು ಆಗಮಿಸಿ ತಮ್ಮ ಕಷ್ಟ ಕಾರ್ಪಣ್ಯಗಳ ಬಗ್ಗೆ ಹರಕೆ ಹೇಳಿಕೊಂಡು ಇದಕ್ಕೆ ಪರಿಹಾರ ಕಂಡುಕೊಳ್ಳುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಪಾಜೋವುನಲ್ಲಿ ಶ್ರೀ ಉಳ್ಳಾಕ್ಲು ದೈವದ ಮೂಲಸ್ಥಾನ, ಎಡಪತ್ಯ ಪಾಲೆ ಮಂಟಪದಲ್ಲಿರುವ ಶ್ರೀ ಉಳ್ಳಾಲ್ತಿ ಸಾನಿಧ್ಯ. ಪಟ್ರಡ್ಕ ಪಡೆಜ್ಜಾರುವಿನಲ್ಲಿ ಪಟ್ಟನ್ ದೈವ ವ್ಯಾಘ್ರ ಚಾಮುಂಡಿಯ ಮೂಲ ಸ್ಥಾನ. ಕೆದಿಲಾಯ ವಂಶಸ್ಥರ ರಾಜನ್ ದೈವ, ಅಣ್ಣಪ್ಪ ಪಂಜುರ್ಲಿ ಸಪರಿವಾರ ದೈವಗಳು. ಈ ರೀತಿ ಪ್ರಧಾನ ನಾಲ್ಕು ಸಾನಿಧ್ಯಗಳ ದೈವಗಳನ್ನು ಆರಾಧಿಸಲ್ಪಡುವ ಮಜ್ಜಾರು ಕ್ಷೇತ್ರಕ್ಕೆ ವಿಶಿಷ್ಠವಾದ ಕಾರಣಿಕವಿದೆ.
ಪ್ರತಿ ಮಂಗಳವಾರ ಹಾಲು ಅರ್ಚನೆ, ಹರಕೆ, ತಂಬಿಲ, ದೀಪಾವಳಿ, ಪತ್ತನಾಜೆ, ಈ ರೀತಿ ವಿಶೇಷ ಪಂಚ ಪರ್ವಾದಿಗಳು ನಿಯಮಿತವಾಗಿ ಕ್ಷೇತ್ರದಲ್ಲಿ ನಡೆಯುತ್ತಿದ್ದು ಊರ ಪರವೂರ ಸಾವಿರಾರು ಮಂದಿ ತಮ್ಮ ಹಲವಾರು ರೀತಿಯ ಸಮಸ್ಯೆಗಳನ್ನು ನಿವೇದಿಸಿಕೊಂಡಲ್ಲಿ ಕ್ಷಿಪ್ರ ಪರಿಹಾರಗಳು ದೊರೆಯುತ್ತಿರುವುದು ಈ ಕ್ಷೇತ್ರದ ಮಹಿಮೆಯಾಗಿದೆ. ಪ್ರತಿ ನಿತ್ಯ ಪೂಜೆಗೊಳ್ಳುತ್ತಿರುವ ಶ್ರೀ ಮಹಾವಿಷ್ಣು ದೇವರು, ಗಣಪತಿ ದೇವರು ಭಕ್ತರ ಇಷ್ಟಾರ್ಥ ನೆರವೇರಿಸುವ ಕಾಮದೇನು ಸದೃಶವಾಗಿದ್ದಾರೆ.
ಮೊಕ್ತೇಸರರು-ಕೆ. ಕೃಷ್ಣಪ್ರಸಾದ್ ಭಟ್ ಎಡಪತ್ಯ, ಅಧ್ಯಕ್ಷರು-ಕೆ. ಪ್ರಸಾದ್ ಕೆದಿಲಾಯ, ಕಾರ್ಯದರ್ಶಿ-ಸುದರ್ಶನ್ ಗೌಡ ಕೋಡಿಂಬಾಳ, ಕೋಶಾಧಿಕಾರಿ-ವಸಂತ ಗೌಡ ಪಡೆಜ್ಜಾರು, ಉಪಾಧ್ಯಕ್ಷರುಗಳು-ತಮ್ಮಯ್ಯ ಗೌಡ ಕುತ್ಯಾಡಿ, ಕೃಷ್ಣ ಭಟ್ ಚಂಪಕವನ ಮತ್ತು ಊರಿನ ಹತ್ತು ಸಮಸ್ತರು.

ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :-
* ಶ್ರೀ ಮಜ್ಜಾರು ಉಳ್ಳಾಕ್ಲು ದೈವಸ್ಥಾನ ಕೋಡಿಂಬಾಳ ಗ್ರಾಮ ಕಡಬ ಅಂಚೆ ಪುತ್ತೂರು. 9663419123
* ಶ್ರೀ ಮಹಾವಿಷ್ಣು ದೇವಸ್ಥಾನ ಮಜ್ಜಾರು ಕೋಡಿಂಬಾಳ ಗ್ರಾಮ ಕಡಬ ಅಂಚೆ ಪುತ್ತೂರು 9663419123
* ಶ್ರೀ ರಾಮ ಭಜನಾ ಮಂದಿರ ರಾಮನಗರ
* ಶ್ರೀ ಆದಿಬ್ರಹ್ಮ ಮೊಗೆರ್ಕಳ ದೈವಸ್ಥಾನ ಕೋಡಿಂಬಾಳ
* ಶ್ರೀ ಅಯ್ಯಪ್ಪ ಭಜನಾ ಮಂದಿರ ಕೋಡಿಂಬಾಳ
* ಶ್ರೀ ಅಯ್ಯಪ್ಪ ಭಜನಾ ಮಂದಿರ ಮೂರಾಜೆ ದೊಡ್ಡಕೊಪ್ಪ

Copy Protected by Chetan's WP-Copyprotect.