ನಿಡ್ಪಳ್ಳಿ ಗ್ರಾಮ

ಶ್ರೀ ಶಾಂತದುರ್ಗಾ ದೇವಸ್ಥಾನ ನಿಡ್ಪಳ್ಳಿ, ಅಂಚೆ : ನಿಡ್ಪಳ್ಳಿ, ಪುತ್ತೂರು, ದ.ಕ. ಮೊ: 9972388321

ನೂರಾರು ವರ್ಷ ಗಳ ಇತಿಹಾಸವುಳ್ಳ ಒಂದು ಕಾರಣಿಕ ಕ್ಷೇತ್ರ ನಿಡ್ಪಳ್ಳಿ ಶ್ರೀ ಮುಂಡೂರು ದೇವರು, ಶ್ರೀ ಶಾಂತಾದುರ್ಗಾ ದೇವಾಲಯ, ಶ್ರೀ ಪೂಮಾಣಿ-ಕಿನ್ನಿಮಾಣಿ, ಶ್ರೀ ಮಲರಾಯ, ಶ್ರೀ ವ್ಯಾಘ್ರ ಚಾಮುಂಡಿ, ಶ್ರೀ ಧೂಮಾವತಿ ಮತ್ತು ಉಪದೈವಗಳ ದಿವ್ಯ ಸಾನಿಧ್ಯವಿರುತ್ತದೆ.
ಪುರಾತನ ಕಾಲದಿಂದಲೂ ಪ್ರತಿಷ್ಠಿತ ಜೈನ ಮನೆತನದವರು ಮತ್ತು ಗ್ರಾಮಸ್ಥರ ಕೂಡುವಿಕೆಯಲ್ಲಿ, ಗ್ರಾಮದ ದೈವ ದೇವರುಗಳ ನೇಮ ನಡಾವಳಿಗಳನ್ನು ವರ್ಷಂಪ್ರತಿ ತಪ್ಪದೆ ನಡೆಸಿಕೊಂಡು ಬರುತ್ತಿದ್ದರು. ನಿಡ್ಪಳ್ಳಿ ಗ್ರಾಮದ ಗುತ್ತು ಚಾವಡಿಯಿಂದ ದೈವಗಳ ಭಂಡಾರ ತೆಗೆದು, ರಾಜಾಂಗಣದಲ್ಲಿ ಒಂದು ವಾರದ ಜಾತ್ರೆಯು ವೈಭವದಿಂದ ನಡೆಯುತ್ತಿತ್ತು.
ಸುಮಾರು ೪೦ ವರ್ಷಗಳ ಹಿಂದೆ ಭೂಸುಧಾರಣೆಯು ಜಾರಿಗೆ ಬಂದ ಕಾಲಕ್ಕೆ ಕಾರಣಾಂತರದಿಂದ ಜಾತ್ರೆಯು ನಿಂತು ಹೋಯಿತು. ಅದಾಗಿ ೩೦ ವರ್ಷಗಳ ನಂತರ ಅಂದರೆ ೧೨ ವರ್ಷಗಳ ಹಿಂದೆ ಗ್ರಾಮದ ಗಣ್ಯವ್ಯಕ್ತಿಗಳು ನಿಡ್ಪಳ್ಳಿಯ ಗುತ್ತು ಚಾವಡಿಯಲ್ಲಿ ಗ್ರಾಮಸ್ಥರನ್ನು ಸೇರಿಸಿ, ದೇವರು ಮತ್ತು ದೈವಗಳ ಸಾನಿಧ್ಯದ ಜೀರ್ಣೋದ್ಧಾರದ ಕುರಿತು ಚಿಂತನೆ ನಡೆಸಿದರು ಮತ್ತು ಈ ಕುರಿತಾದ ಸಂಕಲ್ಪ ಮಾಡಿ ಒಂದು ಜೀರ್ಣೋದ್ಧಾರ ಸಮಿತಿಯನ್ನೂ ರಚಿಸಲಾಯಿತು. ಸಮಿತಿಯಲ್ಲಿ ಮಾಡಿದ ನಿರ್ಣಯದಂತೆ ಚಾವಡಿಯಲ್ಲಿ ದೇಲಂಪಾಡಿಯ ವೇದಮೂರ್ತಿ ಬಾಲಕೃಷ್ಣ ತಂತ್ರಿಗಳ ಮಾರ್ಗದರ್ಶನದಲ್ಲಿ ‘ಅಷ್ಟಮಂಗಲ ಪ್ರಶ್ನೆ’ಯನ್ನು ಇಟ್ಟು ಚಿಂತಿಸಲಾಗಿ ಕಂಡುಬಂದ ಸಾನಿಧ್ಯಗಳು ಇಂತಿವೆ-
ಟಶ್ರೀ ಮುಂಡೂರು ದೇವರು, ಶ್ರೀ ಶಾಂತಾದುರ್ಗಾ ದೇವಾಲಯ ಟಇರ್ವೆರ್ ಉಳ್ಳಾಕುಲು (ಶ್ರೀ ಪೂಮಾಣಿ-ಕಿನ್ನಿಮಾಣಿ ದೈವಗಳು) ಟಮೂವೆರ್ ಪ್ರಧಾನಿಕುಲು (ಮಲರಾಯ, ವ್ಯಾಘ್ರ ಚಾಮುಂಡಿ, ಧೂಮಾವತಿ) ಟಹಲವಾರು ಉಪದೈವಗಳು.
ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರು – ಪ್ರಮೋದ್ ಅರಿಗ, ಗಣೇಶ್ ರೈ ಆನಾಜೆ, ಅಧ್ಯಕ್ಷ – ಕೆ.ಎನ್. ಕೃಷ್ಣ ಶೆಟ್ಟಿ ನುಲಿಯಾಲು, ಉಪಾಧ್ಯಕ್ಷರು – ಪದ್ಮನಾಭ ಬೋರ್ಕರ್ ಬ್ರಹ್ಮರಗುಂಡ, ಶಿವಪ್ಪ ಪೂಜಾರಿ ನುಳಿಯಾಲು, ಪ್ರಧಾನ ಕಾರ್ಯದರ್ಶಿ – ನಾಗೇಶ್ ಗೌಡ ಪುಳಿತ್ತಡಿ, ಜತೆ ಕಾರ್ಯದರ್ಶಿ – ಶ್ರೀನಿವಾಸ ಭಟ್ ವಾಲ್ತಾಜೆ, ಖಜಾಂಜಿ – ವಿಷ್ಣು ಭಟ್ ಬುಳೆನಡ್ಕ, ಅರ್ಚಕರು-ರಾಜರಾಮ ಭಟ್ ನಾಕುಡೇಲು.

ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :-
* ಕರ್ನಪ್ಪಾಡಿ ದೈವಸ್ಥಾನ
* ಶ್ರೀ ಬ್ರಹ್ಮಬೈದರ್ಕಳ ಗರಡಿ, ಕರ್ನಪ್ಪಾಡಿ ನಿಡ್ಪಳ್ಳಿ (ಶಿವಪ್ಪ ಪೂಜಾರಿ ನುಳಿಯಾಲು) 9741669159
* ಶ್ರೀ ಅಣ್ಣಪ್ಪ ಪಂಜುರ್ಲಿ ಮತ್ತು ಶ್ರೀ ರುದ್ರಾಂಡಿ ದೈವಗಳ ದೈವಸ್ಥಾನ ಚೆಲ್ಯರಮೂಲೆ ನಿಡ್ಪಳ್ಳಿ (ಶಿವಪ್ಪ ಗೌಡ) 08251-288569
* ಶ್ರೀಕೃಷ್ಣ ಭಜನಾ ಮಂದಿರ ಮುಡಿಪಿನಡ್ಕ ನಿಡ್ಪಳ್ಳಿ ಪುತ್ತೂರು (ನಾಗೇಶ್ ಗೌಡ ಪುಳಿತ್ತಡಿ) 9972388321
* ಶ್ರೀ ದುರ್ಗಾ ಭಜನಾಮಂದಿರ ಮಾರ್ಲ ಕುಮೇರು (ಜಯಂತ ನಾಯ್ಕ) 9449469159
* ನುಳಿಯಾಲು ಧರ್ಮಚಾವಡಿ ಶ್ರೀ ಬೀರ್ನಾಳ್ವ, ರಕ್ತೇಶ್ವರಿ ದೈವಸ್ಥಾನ ನಿಡ್ಪಳ್ಳಿ ಮುಖ್ಯಸ್ಥರು-ಜಗನ್ನಾಥ ರೈ ನುಳಿಯಾಲು
* ಮಲರಾಯ-ಹುಲಿಭೂತ ದೈವಸ್ಥಾನ ಗುತ್ತುಚಾವಡಿ ನಿಡ್ಪಳ್ಳಿ (ಪ್ರಮೋದ್ ಆರಿಗ, ಪ್ರವೀಣ್ ಆರಿಗ) 9845404388
* ಶ್ರೀ ಜಠಾಧಾರಿ ದೈವಸ್ಥಾನ ದೇರ್ಲ (ಶ್ರೀನಿವಾಸ ಪೂಜಾರಿ) 9901371739
* ಶ್ರೀ ರಕ್ತೇಶ್ವರಿ, ಧೂಮಾವತಿ ಮತ್ತು ನಾಗ ಸಾನಿಧ್ಯ ಕಂಬ್ಲತ್ತಡ್ಡ ನಿಡ್ಪಳ್ಳಿ ಪುತ್ತೂರು (ಶಿವಪ್ಪ ಗೌಡ) 7259912397

Copy Protected by Chetan's WP-Copyprotect.