ನೂಜಿಬಾಳ್ತಿಲ ಗ್ರಾಮ

ಶ್ರೀ ಉಮಾಮಹೇಶ್ವರ ದೇವಸ್ಥಾನ ಒರುಂಬಾಲು, ನೂಜಿಬಾಳ್ತಿಲ ಗ್ರಾಮ & ಅಂಚೆ, ಪುತ್ತೂರು ತಾ., ದ.ಕ. – 574221

ಪುತ್ತೂರು ತಾಲೂಕಿನ ನೂಜಿಬಾಳ್ತಿಲ ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನ ಪಶ್ಚಿಮ ಘಟ್ಟದ ತಪ್ಪಲಿನ ಸುಂದರ ಪ್ರಕೃತಿಯ ಮಡಿಲಿನಲ್ಲಿದೆ. ಸುಮಾರು ೩೬೦ ವರ್ಷಗಳ ಇತಿಹಾಸವಿರುವ ದೇವಾಲಯವು ಇತ್ತೀಚೆಗೆ ನವೀಕರಣಗೊಂಡು ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ನೆರವೇರಿದೆ.
ಈಗ ದಿನನಿತ್ಯ ಪೂಜಾ ಕೈಂಕರ್ಯಗಳು ಸುಸೂತ್ರವಾಗಿ ನಡೆದುಕೊಂಡು ಬರುತ್ತಿದ್ದು, ಜನರ ಇಷ್ಟಾರ್ಥಗಳನ್ನು ಸದಾ ನೆರವೇರಿಸುತ್ತಾ ಒರುಂಬಾಲಿನಲ್ಲಿ ನೆಲೆಸಿದ್ದಾರೆ. ಕ್ಷೇತ್ರದಲ್ಲಿ ದಿನನಿತ್ಯ ಬೇರೆ ಬೇರೆ ಸೇವಾ ಕಾರ್ಯಗಳು ನಡೆಯುತ್ತಿದೆ. ಪ್ರತಿಷ್ಠಾ ದಿನದಲ್ಲಿ ಪ್ರತಿ ವರ್ಷವೂ ವಾರ್ಷಿಕ ಮಹೋತ್ಸವ, ಮಹಾ ಶಿವರಾತ್ರಿಯಂದು ವಿಶೇಷ ಕಾರ್ಯಕ್ರಮ, ನಾಗರಪಂಚಮಿ, ದೀಪಾವಳಿ, ಪತ್ತನಾಜೆ ಮುಂತಾದ ದಿನಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ.
ವ್ಯವಸ್ಥಾಪನಾ ಸಮಿತಿ: ಪುಟ್ಟಣ್ಣ ಗೌಡ ಮಿತ್ತಂಡೇಲು (ಆಡಳಿತ ಮೊಕ್ತೇಸರ), ಶ್ರೀಧರ ಕಂಪ (ಅಧ್ಯಕ್ಷರು) ೯೪೮೦೪೦೩೪೦೧, ಪುರಂದರ ಮಿತ್ತಂಡೇಲು (ಕಾರ್ಯದರ್ಶಿ), ಅಭಿಲಾಷ್ ಪಳಯಮಜಲು (ಜತೆ ಕಾರ್ಯದರ್ಶಿ), ಸದಸ್ಯರು – ಕೆ. ಮಹಾವೀರ ಡೆಪ್ಪುಣಿಗುತ್ತು, ಬಾಲಕೃಷ್ಣ ಬಳ್ಳೇರಿ, ವಸಂತ ಪೂಜಾರಿ ಬದಿಬಾಗಿಲು, ತಮ್ಮಯ್ಯ ಗೌಡ ಬಳ್ಳೇರಿ, ಸತ್ಯಾನಂದ ಬೊಳ್ಳಾಜೆ, ಬೇಬಿ ಬಂಗೇರ ನಡುವಾಲು, ಹೊನ್ನಪ್ಪ ಗೌಡ ಶಾಂತಿಗುರಿ, ಯೋಗೀಶ್ ಮಿತ್ತಂಡೇಲು, ದೇವಪ್ಪ ಗೌಡ ಬಸ್ತಿ, ಧರ್ಣಪ್ಪ ಶೆಟ್ಟಿ ಸೌತೆಗದ್ದೆ, ವಿ. ರಮಣನ್ ಮಂಜೋಳಿ, ಪೂವಪ್ಪ ಗೌಡ ಮಿತ್ತಂಡೇಲು, ಉಮೇಶ್ ಗೌಡ ಮಿತ್ತಂಡೇಲು, ಶಿವಪ್ರಸಾದ್ ಕಾಡುಮನೆ, ಶಕುಂತಳಾ ಪಳಮಜಲು, ಜಯಂತಿ ಗುಣಪಾಲ ನಡುವಾಲು, ನೀರಜ ಎನ್. ನಡುವಾಲು, ಅರ್ಚಕರು – ಸುಬ್ರಹ್ಮಣ್ಯ ಭಟ್ ಚಾಕೊಟೆ ಕೋಡಿಂಬಾಳ, ಸಹಾಯಕರು – ಜಯಂತಿ ಕಂಪ.

ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನ ಕುರಿಯಾಳ ಕೊಪ್ಪ, ಅಂಚೆ: ನೂಜಿಬಾಳ್ತಿಲ, ಪುತ್ತೂರು ತಾಲೂಕು, ದ.ಕ.

ಗುಂಡ್ಯ ಹೊಳೆಯ ಸನಿಹದಲ್ಲಿರುವ ನೂಜಿಬಾಳ್ತಿಲ ಗ್ರಾಮ ದಲ್ಲಿರುವ ಅತೀ ಪುರಾತನವಾದ ದೇವಸ್ಥಾನವೇ ಕುರಿಯಾಳ ಕೊಪ್ಪದ ಶ್ರೀ ಲಕ್ಷ್ಮೀ ಜನಾದನ ದೇವಸ್ಥಾನ. ಈ ದೇವರ ಸಾನಿಧ್ಯಕ್ಕೆ ಸುಮಾರು ೬೦೦ ವರ್ಷಗಳ ಇತಿಹಾಸ ವಿದೆ ಎಂದು ಅಷ್ಟಮಂಗಲದಿಂದ ತಿಳಿದುಬಂದಿದೆ. ಶ್ರೀ ದೇವರ ಹೆಸರಿನಲ್ಲಿ ೨.೨೬ ಎಕ್ರೆ ಜಾಗವಿರುತ್ತದೆ.
ಶ್ರೀ ದೇವರ ಮೂಲ ಮೂರ್ತಿಯನ್ನು ದೇವಾಲಯ ಶಿಥಿಲಾವಸ್ಥೆಯಲ್ಲಿದ್ದ ಕಾರಣ ಶ್ರೀ ಸುಬ್ರಹ್ಮಣ್ಯ ಮಠದ ಮುಖೇನ ಶ್ರೀ ಧರ್ಮಸ್ಥಳದ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿದೆ ಎಂದು ಅಷ್ಟಮಂಗಲದಿಂದ ತಿಳಿದುಬಂದಿದೆ.
ಅಷ್ಟಮಂಗಲ ಪ್ರಶ್ನೆಯಲ್ಲಿ ತೋರಿ ಬಂದ ದೋಷಗಳ ಪರಿಹಾರ ಕಾರ್ಯವನ್ನು ಮಾಡಿ, ಒಂದು ಬಾಲಾಲಯವನ್ನು ಕಟ್ಟಿ, ಅದರಲ್ಲಿ ಶ್ರೀ ದೇವರ ಪ್ರತಿಮೂರ್ತಿಯೊಂದನ್ನು ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ಮುಖೇನ ಪ್ರತಿಷ್ಠಾಪಿಸಿ, ನಿತ್ಯ ಪೂಜೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಪ್ರತೀದಿನ ಶ್ರೀ ದೇವರ ನಿತ್ಯ ಪೂಜೆಯು ಬೆಳಗ್ಗೆ ಗಂಟೆ ೮.೩೦ರಿಂದ ೯.೩೦ರ ಒಳಗೆ ನಡೆಯುತ್ತಿದೆ. ಜೀರ್ಣೋದ್ಧಾರಕ್ಕೆ ಆರಂಭ ಎಂಬಂತೆ ಶ್ರೀ ನಾಗದೇವರ ಪ್ರತಿಷ್ಠಾಪನೆಯನ್ನು ಮಾಡಲಾಗಿದೆ.
ಸದ್ರಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಬೇಕೆಂದು ತೀರ್ಮಾನಿಸಿ, ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಮಾರ್ಗದರ್ಶನದೊಂದಿಗೆ, ಶಾಸಕರಾದ ಎಸ್. ಅಂಗಾರರವರ ಗೌರವಾಧ್ಯಕ್ಷತೆಯಲ್ಲಿ ಜೀರ್ಣೋದ್ಧಾರ ಸಮಿತಿಯನ್ನು ರಚಿಸಲಾಗಿದೆ.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು – ಕೆ. ಮಹಾವೀರ ಜೈನ್  (9731150548)

* ನೂಜಿಬಾಳ್ತಿಲ ಕುರಿಯಾಳ ಕೊಪ್ಪ ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನ 

ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು:
* ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನ ಅಡೆಂಜ ನೂಜಿ ಬಾಳ್ತಿಲ ಪುತ್ತೂರು. 8762552169, 9945262931
* ಶ್ರೀ ಉಮಾಮಹೇಶ್ವರ ದೇವಸ್ಥಾನ ಒರುಂಬಾಳು ನೂಜಿಬಾಳ್ತಿಲ
* ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನ ಕುರಿಯಾಳ ಕೊಪ್ಪ ನೂಜಿಬಾಳ್ತಿಲ
* ಶ್ರೀ ಶಿರಾಡಿ ದೈವಸ್ಥಾನ ಅಂಕದಮಜಲು ನೂಜಿಬಾಳ್ತಿಲ
* ಶ್ರೀ ರಾಜನ್ ದೈವಸ್ಥಾನ ಕಣ್ಣಾರೆ ನೂಜಿಬಾಳ್ತಿಲ
* ಶ್ರೀ ಅನಂತನಾಥ ಸ್ವಾಮಿ ಬಸದಿ ನೂಜಿ ಬಾಳ್ತಿಲ
* ಶ್ರೀ ಪಿಲಿಚಾಮುಂಡಿ ದೈವ ದೈವಸ್ಥಾನ ಬದಿಬಾಗಿಲು ನೂಜಿಬಾಳ್ತಿಲ
* ಶ್ರೀ ನಾರಾಯಣ ಗುರುಮಂದಿರ ಕಟ್ಟತಡ್ಕ ನೂಜಿಬಾಳ್ತಿಲ
* ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನ ಅಡೆಂಜ ನೂಜಿಬಾಳ್ತಿಲ

Copy Protected by Chetan's WP-Copyprotect.