ನೆಲ್ಯಾಡಿ ಗ್ರಾಮ

ಶ್ರೀ ಶಾಸ್ತಾರೇಶ್ವರ ದೇವಸ್ಥಾನ ಹಾರ್ಪಳ, ನೆಲ್ಯಾಡಿ

 ಕೊಕ್ಕಡ ಸೀಮೆಗೊಳಪಟ್ಟ ನೆಲ್ಯಾಡಿ ಗ್ರಾಮದ ಹಾರ್ಪಳ, ಕುತ್ರಾಡಿಯ ಶ್ರೀ ಶಾಸ್ತಾರೇಶ್ವರ ದೇವಸ್ಥಾನಕ್ಕೆ ಸುಮಾರು ೮೦೦ ವರ್ಷಗಳ ಇತಿಹಾಸವಿದೆ. ಅಜೀರ್ಣಾವಸ್ಥೆಯಲ್ಲಿದ್ದ ದೇವಸ್ಥಾನ ನಿರ್ಮಾಣಕ್ಕೆ ಊರವರು ಪ್ರಶ್ನಾ ಚಿಂತನೆ ನಡೆಸಿ ಇದೀಗ ಜೀರ್ಣೋದ್ಧಾರಗೊಳ್ಳುತ್ತಿದೆ. ಕಲ್ಲಿನ ರೂಪದಲ್ಲಿ ಶಾಸ್ತಾರೇಶ್ವರ ಇದ್ದು ಜತೆಗೆ ಸತ್ಯಕ, ಭಾಮ (ಹೆಂಡತಿ-ಮಗ) ಕಲ್ಲುಗಳೂ ಇವೆ.
ಪಶ್ಚಿಮ ದಿಕ್ಕಿಗೆ ಮುಖ ಮಾಡಿ ದೇವಸ್ಥಾನ ನಿರ್ಮಾಣವಾಗುತ್ತಿದೆ. ಸ್ಥಳದಲ್ಲಿ ಪಂಜುರ್ಲಿ, ಗುಳಿಗ, ರಕ್ತೇಶ್ವರಿ, ನಾಗ ಸಾನಿಧ್ಯವಿದೆ. ಮೂಲತಃ ಜೈನ ಮನೆತನದ ವಶದಲ್ಲಿದ್ದು ಬಳಿಕ ಬ್ರಾಹ್ಮಣ ವರ್ಗದಲ್ಲಿದ್ದು ಇದೀಗ ಗ್ರಾಮ ದೇವಸ್ಥಾನವಾದ್ದರಿಂದ ಶ್ರೀ ಶಾಸ್ತಾರೇಶ್ವರ ದೇವಸ್ಥಾನ ಹಾರ್ಪಳ, ಕುತ್ರಾಡಿ ಹೆಸರಿನಲ್ಲಿ ಟ್ರಸ್ಟ್ ರಚನೆಯಾಗಿದೆ. ಆಡಳಿತ ಸಮಿತಿ ಅಧ್ಯಕ್ಷರಾಗಿ ಸೂರ್ಯನಾರಾಯಣ ಜೋಗಿತ್ತಾಯರು, ಗೌರವಾಧ್ಯಕ್ಷರಾಗಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ, ಉಪಾಧ್ಯಕ್ಷರಾಗಿ ಸುಂದರ ಗೌಡ ಅತ್ರಿಜಾಲು, ಕಾರ್ಯದರ್ಶಿ ಬಾಲಕೃಷ್ಣ ಹಾರ್ಪಳ, ಕೋಶಾಧಿಕಾರಿ ಸೀತಾರಾಮ ಕಾನಮನೆ, ಚಂದ್ರಹಾಸ ಅತ್ರಿಜಾಲು-ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ಚಂದ್ರಹಾಸ ಅತ್ರಿಜಾಲು, ಸುಂದರ ಗೌಡ ಕಾರ್ಯಾಧ್ಯಕ್ಷರು, ಕಾರ್ಯದರ್ಶಿ ಶಿವರಾಮ ಗೌಡ ಮಕ್ಕಿಗದ್ದೆ, ಜತೆ ಕಾರ್ಯದರ್ಶಿ ಸುರೇಶ್ ಪಡಿಪಂಡ, ದೈವಜ್ಞ ಶ್ರೀಧರ ಗೋರೆ ಗೌರವ ಸಲಹೆಗಾರರಾಗಿದ್ದಾರೆ. ದೇವಸ್ಥಾನಕ್ಕೆ ಸಂಜೀವ ಗೌಡ ಹಾರ್ಪಳ ೪೦ ಸೆಂಟ್ಸ್ ಸ್ಥಳ ದಾನವಾಗಿ ನೀಡಿದ್ದಾರೆ.

ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪಡುಬೆಟ್ಟು ಮೊ: 9481765340

ನೆಲ್ಯಾಡಿ ಪೇಟೆಯಿಂದ 1.5 ಕಿ.ಮೀ. ದೂರದಲ್ಲಿ ಕೊಪ್ಪ ಮಾದೇರಿ ಬೆಟ್ಟಗಳ ತಪ್ಪಲಿನ ಪಡುಬೆಟ್ಟು ಎಂಬಲ್ಲಿ ಸುಮಾರು ೫೦೦ ವರ್ಷಗಳ ಇತಿಹಾಸವಿರುವ ಶ್ರೀ ವಿಷ್ಣುಮೂರ್ತಿ, ಸುಬ್ರಹ್ಮಣ್ಯ, ಭದ್ರಕಾಳಿ ದೇವಸ್ಥಾನವಿದೆ. ಇದು ‘ಸಂತಾನ ಗೋಪಾಲಕೃಷ್ಣ’ ಎಂದೇ ಖ್ಯಾತಿಯನ್ನು ಹೊಂದಿದ್ದು ನಂಬಿದವರ ವಂಶೋದ್ಧಾರವನ್ನು ಮಾಡಿದ ಮಹಿಮೆಯನ್ನು ತೋರುತ್ತಿದೆ.
ಪುತ್ಯೆ ಹಳ್ಳದಿಂದ ನೆಲ್ಯಾಡಿ, ಹೊಸವಕ್ಲು, ಪಟ್ಟೆ, ಪಡುಬೆಟ್ಟು, ಬೊನ್ಯ ಸಾಗು, ಹುಣಿಸೇಬೆಟ್ಟು, ಬಲ್ಯ, ಕುಡ್ತಾಜೆ, ಇಚ್ಚೂರು, ಪುಚ್ಚೇರಿ, ಕೊಪ್ಪ ಮಾದೇರಿ, ಕರಂದಲ, ಕೊಲೊಟ್ಟುವರೆಗಿನ ಎಡಬಲಗಳ ಬಯಲುಗುಡ್ಡಗಳ ಭಗದ್ಭಕ್ತರ ಚೈತನ್ಯ ಶಕ್ತಿಯಾಗಿ ಶ್ರೀ ದೇವರು ಜನಮನದಲ್ಲಿ ನೆಲೆನಿಂತಿದ್ದಾರೆ. ಜೊತೆಗೆ ರಕ್ತೇಶ್ವರಿ, ಪಂಜುರ್ಲಿ, ಗುಳಿಗ, ಕಲ್ಲುರ್ಟಿ, ಬಾವನ ದೈವಗಳು ಇಲ್ಲಿ ನೆಲೆ ನಿಂತಿವೆ. ಮಾ.೮ರಂದು ಪ್ರತಿಷ್ಠಾ ವಾರ್ಷಿಕೋತ್ಸವ, ದೈವಗಳಿಗೆ ನೇಮೋತ್ಸವ ನಡೆಯುತ್ತದೆ. ಕೆ. ಸುಬ್ರಹ್ಮಣ್ಯ ಶಬರಾಯ-ಆಡಳಿತ ಮೊಕ್ತೇಸರರು, ಬಿ.ಕೆ. ಶ್ರೀನಿವಾಸ ರಾವ್ ಅರ್ಚಕರಾಗಿದ್ದಾರೆ.

ನೆಲ್ಯಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ

ನೆಲ್ಯಾಡಿಯಲ್ಲಿ ೩೫ ವರ್ಷದ ಹಿಂದೆ ಗುಡಿಯಲ್ಲಿ ಭಕ್ತರಿಂದ ಅಯ್ಯಪ್ಪ ಆರಾಧನೆ ನಡೆಯುತ್ತಿತ್ತು. ಸುಬ್ರಹ್ಮಣ್ಯ ಆಚಾರ್ಯ ನೇತೃತ್ವದಲ್ಲಿ ಅಯ್ಯಪ್ಪ ದೇವಾಲಯ ನಿರ್ಮಾಣಕ್ಕೆ ತೊಡಗಿ ೧೯೯೯ರ ಡಿ.೩೦ರಂದು ಅಷ್ಟಬಂಧ ಬ್ರಹ್ಮಕಲಶ ನೆರವೇರಿತು. ಪ್ರತೀದಿನ ಬೆಳಗಿನ ಹೊತ್ತು ಪೂಜೆ ನಡೆಯುತ್ತಿದೆ. ಮಂಡಲ ಪೂಜೆ, ಮಕರಜ್ಯೋತಿ ಡಿ.೩೦ಕ್ಕೆ ಪ್ರತಿಷ್ಠಾ ವಾರ್ಷಿಕ ಮಹೋತ್ಸವ, ಶನೀಶ್ಚರ ಪೂಜೆ, ಸಾರ್ವಜನಿಕ ಸತ್ಯನಾರಾಯಣ ಪೂಜೆ, ಸಂಕ್ರಮಣಕ್ಕೆ ವಿಶೇಷ ಪೂಜೆ, ರಂಗಪೂಜೆ, ಭಜನೆ ನಡೆಯುತ್ತದೆ. ಭಕ್ತರಿಂದ ಮೆಟ್ಟಿಲು ರಚನೆಯಾಗಿದೆ.
ಪ್ರಕೃತ ಶಿವದಾಸನ್ ನೆಲ್ಯಾಡಿ ಅಧ್ಯಕ್ಷರಾಗಿದ್ದು, ರವೀಂದ್ರ ಟಿ. ಕಾರ್ಯದರ್ಶಿಯಾಗಿದ್ದಾರೆ.

ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :-

* ಶ್ರೀ ಶಾಸ್ತಾರೇಶ್ವರ ದೇವಸ್ಥಾನ, ಹಾರ್ಪಳ, ಕುತ್ಯಾಡಿ
* ನಡುಗುಡ್ಡೆ ದೊಂಪದ ಬಲಿ ನೇಮ-ಗಂಗಾಧರ ಶೆಟ್ಟಿ ಟರಾಜನ್ ದೈವಸ್ಥಾನ ಬೊನ್ಯಸಾಗು-9686014916
* ಶ್ರೀ ಕಾಳಿಕಾಂಬಾ ಭಜನಾ ಮಂದಿರ ಕುರುಬರಕೇರಿ
* ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ ಕುರುಬರಕೇರಿ- 9591180574

Copy Protected by Chetan's WP-Copyprotect.