ಬ್ರಹ್ಮಶ್ರೀ ನಾರಾಯಣ ಗುರುಮಂದಿರ, ಬಪ್ಪಳಿಗೆ, ಪುತ್ತೂರು ಫೋ: 08251-235188

ಪುತ್ತೂರು ಬಪ್ಪಳಿಗೆಯಲ್ಲಿರುವ ತಾಲೂಕು ಬಿಲ್ಲವ ಸಂಘದ ಆಶ್ರಯದಲ್ಲಿ 2006ರಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಮಂದಿರ ಪ್ರತಿಷ್ಠಾಪನೆಗೊಂಡಿತು. ಇಲ್ಲಿ ತಿಂಗಳ ಶತಭಿಷ ನಕ್ಷತ್ರದಂದು ಸಂಜೆ ಭಜನೆ, ಪ್ರತಿಷ್ಠಾ ವಾರ್ಷಿಕೋತ್ಸವ, ಗುರು ಜಯಂತಿ ಆಚರಣೆ ಹಾಗೂ ತ್ರಿಕಾಲ ಪೂಜೆ ಸೇವೆಗಳು ನಡೆಯುತ್ತಿದೆ. ಗುರು ಮಂದಿರದ ಅಧ್ಯಕ್ಷರಾಗಿ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲು, ಸದಸ್ಯರಾಗಿ ಮುತ್ತಪ್ಪ ಬಿ.ಎನ್ ತೆಂಕಿಲ, ಕೇಶವ ಪೂಜಾರಿ ಬೆದ್ರಾಳ, ಕಾರ್ಯನಿರ್ವಹಣಾಧಿಕಾರಿಯಾಗಿ ಯತೀಂದ್ರನಾಥ ಹಾಗೂ ಮಂದಿರದ ಅರ್ಚಕರಾಗಿ ಜಗದೀಶ್ ಶಾಂತಿ ಮತ್ತು ಅಶ್ವಥ್ ಶಾಂತಿ ಕಾರ್ಯನಿರ್ವಹಿಸುತ್ತಿದ್ದಾರೆ

Copy Protected by Chetan's WP-Copyprotect.