ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನ ಪುತ್ತೂರು, ಫೋನ್: 08251-230467, 230708

ಪುತ್ತೂರು ಮುಖ್ಯ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಾಲಯದ ಇತಿಹಾಸವು ಸುಮಾರು ೧೧೪ ವರ್ಷಗಳದ್ದಾಗಿದೆ. ೧೮೯೯ರಲ್ಲಿ ಮಾಳ ಪೈ ಎಂಬ ಗೌಡ ಸರಸ್ವತ ಬ್ರಾಹ್ಮಣ ಸಂಪ್ರದಾಯದ ಗೃಹಸ್ಥರಿಂದ ಈ ದೇವಾಲಯವು ಸ್ಥಾಪಿಸಲ್ಪಟ್ಟು ಕಾಶಿಮಠ, ಕವಳೆ ಮಠ ಹಾಗೂ ಗೋಕರ್ಣ ಮಠಾಧೀಶರುಗಳಿಂದ ಪ್ರತಿಷ್ಠಾಪನೆ ಗೊಂಡಿತು. ಇಲ್ಲಿ ಲಕ್ಷ್ಮೀವೆಂಕಟ್ರಮಣ ಪ್ರಧಾನ ದೇವರು. ದೇವಾಲಯದ ಒಳಾಂಗಣದಲ್ಲಿ ಆಂಜನೇಯ, ಗಣಪತಿ, ಲಕ್ಷ್ಮೀ, ಗರುಡ ದೇವರ ಗುಡಿಗಳಿದ್ದರೆ ಹೊರಭಾಗದಲ್ಲಿ ನಾಗನ ಗುಡಿ ಹಾಗೂ ಕೃಷ್ಣ ದೇವರ ಗುಡಿಗಳಿವೆ. ದೇವಸ್ಥಾನದಲ್ಲಿ ಕಾರ್ತಿಕ ಮಾಸದಲ್ಲಿ ಒಂದು ತಿಂಗಳು ನಗರ ಭಜನೆ ನಡೆದು ಕೊನೆಯಲ್ಲಿ ದೀಪೋತ್ಸವ, ಹನುಮ ಜಯಂತಿ, ಪ್ರತಿಷ್ಠಾ ಮಹೋತ್ಸವ ಮೊದಲಾದ ಕಾರ್ಯಕ್ರಮಗಳು ವರ್ಷಂಪ್ರತಿ ನಡೆಯುತ್ತಿವೆ. ಅಲ್ಲದೆ ದಶಮಿ ದಿಂಡು ಉತ್ಸವ, ವಸಂತಪೂಜೆ, ಪಶ್ಚಿಮ ಜಾಗರ ಪೂಜೆ, ಕಾರ್ತಿಕ ಪೂಜೆ, ಸ್ವರ್ಣಕಿರೀಟಾಲಂಕಾರ ಪೂಜೆ, ಪುಳಕಾಭಿಷೇಕ, ಪಂಚಾಮೃತ ಕ್ಷೀರಾಭಿಷೇಕ, ಹಾಲು ಪಾಯಸ, ವಿಷ್ಣು ಸಹಸ್ರನಾಮ, ಗಂಗಾಭಿಷೇಕ, ಹರಿವಾಣ ನೈವೇದ್ಯ, ಸತ್ಯನಾರಾಯಣ ಪೂಜೆ, ಲಕ್ಷ್ಮೀಗೆ ಅಲಂಕಾರ ಪೂಜೆ, ದುರ್ಗಾನಮಸ್ಕಾರ, ಲಕ್ಷ್ಮೀ ನಾರಾಯಣ ಹೃದಯ ಪಾರಾಯಣ, ಹನುಮಂತ ದೇವರಿಗೆ ವಾಯಸ್ತುತಿ, ಪಂಚಾಮೃತ ಹಾಗೂ ಗರುಡನಿಗೆ ಪಂಚಾಮೃತ ಪೂಜೆ ಅಲಂಕಾರ ಸೇವೆಗಳು ನಡೆಯುತ್ತಿವೆ. ದೇವಾಲಯದ ಆಡಳಿತ ಮೊಕ್ತೇಸರರಾಗಿ ಅನಂತ ಶೆಣೈ, ಸದಸ್ಯರಾಗಿ ರಾಧಾಕೃಷ್ಣ ಭಕ್ತ, ಜಿ. ಜಗನ್ನಾಥ ಪೈ, ವರದರಾಯ ಕಾಮತ್, ಕೆ. ಅಚ್ಚುತ ಪ್ರಭು, ಜಿ. ಸುರೇಂದ್ರ ಕಿಣಿ, ಎಂ. ರಾಮಾನಾಥ ಶೆಣೈ ಕಾರ್ಯನಿರ್ವಹಿಸುತ್ತಿದ್ದಾರೆ.

Copy Protected by Chetan's WP-Copyprotect.