ಸಿರಿಬಾಗಿಲು ಗ್ರಾಮ

ಗುಂಡ್ಯ ಶ್ರೀ ಲಕ್ಷ್ಮೀವೆಂಕಟರಮಣ ಮಠ ದುರ್ಗಾ ಸನ್ನಿಧಿ, ಸಿರಿಬಾಗಿಲುಮೊ: 9483240743

ಧರ್ಮಸ್ಥಳ-ಸುಬ್ರಹ್ಮಣ್ಯ ಕ್ಷೇತ್ರಗಳ ನಡುವಣ ಮಾರ್ಗದಿಂದ ಅರ್ಧ ಕಿ.ಮೀ. ದೂರದಲ್ಲಿ ಈ ಕ್ಷೇತ್ರವಿದೆ. ಇಲ್ಲಿಗೆ ಧರ್ಮಸ್ಥಳದಿಂದ ೩೬ ಕಿ.ಮೀ. ಹಾಗೂ ಸುಬ್ರಹ್ಮಣ್ಯದಿಂದ ೨೨ ಕಿ.ಮೀ. ಉಪ್ಪಿನಂಗಡಿಯಿಂದ ೪೦ ಕಿ.ಮೀ., ಸಕಲೇಶಪುರದಿಂದ ೩೦ ಕಿ.ಮೀ. ದೂರವಿದೆ. ಸಿರಿಬಾಗಿಲು ಗ್ರಾಮದ ಶ್ರೀ ಲಕ್ಷ್ಮೀ ವೆಂಕಟರಮಣ ಮಠ ದುರ್ಗಾ ಸನ್ನಿಧಿ, ಲಕ್ಷ್ಮೀವೆಂಕಟ್ರಮಣ, ವಿಷ್ಣು, ಗಣಪತಿ, ಈಶ್ವರ, ದುರ್ಗೆ ಇತ್ಯಾದಿ ದೇವರ ವಿಗ್ರಹಗಳಿರುವ ಸುಂದರ ಮಠ. ಉಳ್ಳಾಕುಲು ದೈವಸ್ಥಾನ, ಶಿರಾಡಿ ಭೂತದ ಗುಡಿ, ಚಾಮುಂಡಿ ಗುಡಿ, ಪಂಜುರ್ಲಿ, ಗುಳಿಗ ಇತ್ಯಾದಿ ದೈವಗಳ ಸನ್ನಿಧಿ ಸ್ಥಾನಗಳೂ ನಿರ್ಮಾಣಗೊಂಡಿವೆ. ವಿಶಾಲವಾದ ನಾಗಬನದಲ್ಲಿ ನಾಗಪ್ರತಿಷ್ಠೆಯಾಗಿದ್ದು, ಪವಿತ್ರವಾದ ಗುಂಡ್ಯ ತೀರ್ಥ (ನಿಮ್ನಾ ತೀರ್ಥ) ಎಂಬ ಕೆರೆಯೂ ನಿರ್ಮಲ ಜಲದಿಂದ ಶೋಭಿಸುತ್ತಿದೆ. ಲಕ್ಷ್ಮೀವೆಂಕಟರಮಣ ಮಠದಿಂದ ಒಂದು ಕಿ.ಮೀ. ದೂರದಲ್ಲಿ ದೈವಗಳ ಮಾಡವಿದೆ. ಹಿಂದೆ ಹೆಬ್ಬಾರರ ಆಡಳಿತ ಕಾಲದಲ್ಲಿ ಇಲ್ಲಿಯ ದೇವಳದ ನಿತ್ಯಪೂಜೆಯು ನವರಾತ್ರಿ, ದೀಪಾವಳಿ ಇತ್ಯಾದಿ ಪರ್ವ ದಿನಗಳಲ್ಲಿ ವಿಶೇಷ ಪೂಜೆಗಳೂ ಇಲ್ಲಿ ನಡೆಯುತ್ತಿದ್ದವು. ದೈವಗಳ ಮಾಡದಲ್ಲಿ ಭೂತಗಳ ಕೋಲ, ತಂಬಿಲ ಇತ್ಯಾದಿ ಸೇವೆಗಳು ನೆರವೇರುತ್ತಿದ್ದವು.

ವ್ಯವಸ್ಥಾಪನಾ ಸಮಿತಿ: ಮೊಕ್ತೇಸರರು-ವೈಕುಂಠ ಹೆಬ್ಬಾರ್ ಅರಸಿನಮಕ್ಕಿ, ಅಧ್ಯಕ್ಷರು ರಾಮಚಂದ್ರ ಗೌಡ ದೇರಣೆ ಆಮಡ್ಕ, ಉಪಾಧ್ಯಕ್ಷರು – ಪೂವಪ್ಪ ಗೌಡ ಬೇರಿಕೆ, ಕಾರ್ಯದರ್ಶಿ – ಜಯನ್ ಗುಂಡ್ಯತೋಟ, ಜೊತೆ ಕಾರ್ಯದರ್ಶಿ – ರವಿ ಗುಂಡ್ಯತೋಟ, ಕೋಶಾಧಿಕಾರಿ – ಉಮೇಶ್ ರೆಂಜಾಳ, ಸದಸ್ಯರು-ದೇವಮ್ಮ ಗುಂಡ್ಯತೋಟ, ಬಾಲಕೃಷ್ಣ ಗುಂಡ್ಯತೋಟ, ಜಗದೀಶ ರೆಂಜಾಳ, ಗಂಗಾ ಪ್ರಸಾದ್ ಪಿಲಿಕಜೆ, ವೆಂಕಟ್ರಮಣ ಅನಿಲ.

Copy Protected by Chetan's WP-Copyprotect.