ಕಾಂಚನ ಪೆರ್ಲ ಶ್ರೀಷಣ್ಮುಖ ದೇವಸ್ಥಾನ ಅಂಚೆ: ಗೋಳಿತ್ತೊಟ್ಟು. ಫೋನ್: 08251-255001, 9448465299
ಉಪ್ಪಿನಂಗಡಿಯಿಂದ ನೆಲ್ಯಾಡಿ ರಸ್ತೆಯಲ್ಲಿ 13ಕಿ.ಮೀ. ದೂರ ಸಾಗಿ ಗೋಳಿತ್ತೊಟ್ಟು ಎಂಬಲ್ಲಿಂದ ಬಲಕ್ಕೆ ತಿರುಗಿ 4ಕಿ.ಮೀ. ಸಾಗಿದರೆ ಸಿಗುವುದೇ ಕಾಂಚನ ಪೆರ್ಲ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ. ಶಿವಪುತ್ರ ಕುಮಾರ ಸ್ವಾಮಿ ಸಹೋದರ ಸಿದ್ಧಿವಿನಾಯಕನೊಂದಿಗೆ ಪರಿವಾರ ದೈವಗಳಾದ ಪಿಲಿಚಾಮುಂಡಿ, ಕಲ್ಲುರ್ಟಿ, ಪಂಜುರ್ಲಿ ದೈವಗಳಿಂದ ಪರಿವೃತನಾಗಿ ಷಣ್ಮುಖ ಅಭಿದಾನದಿಂದ ಕರೆಯಲ್ಪಡುವ ಈ ಕ್ಷೇತ್ರದಲ್ಲಿ ಅಭಿಷ್ಟ ಸಿದ್ಧಿ, ಮನೋರೋಗ ಶಮನ, ಸಂತತಿ ಪ್ರಾಪ್ತಿಯೇ ಮೊದಲಾದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡ ಅನೇಕ ದೃಷ್ಟಾಂತಗಳಿವೆ. ಶ್ರೀ ಕ್ಷೇತ್ರದ ಆಗ್ನೇಯ ದಿಕ್ಕಿನಲ್ಲಿ ಶ್ರೀ ಭದ್ರಕಾಳಿಯ ಸನ್ನಿಧಿಯಿದೆ.
ದೇವಸ್ಥಾನದ ಸಮೀಪವಿರುವ ಎತ್ತರವಾದ ಸುಂದರ ಶಿಖರಾಗ್ರವೇ ದೇವರಗುಡ್ಡೆ (ದೇಲಗುಡ್ಡೆ). ಇದು ಷಣ್ಮುಖ ಸ್ವಾಮಿಯ ಮೂಲಸ್ಥಾನ. ಇಲ್ಲಿ ಈಗ ಗುಹೆ, ನಾಗಬನಗಳು ಇವೆ. ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಂತೆ ಶ್ರೀ ಕ್ಷೇತ್ರಕ್ಕೆ ೭೫೦ ವರ್ಷಗಳ ಇತಿಹಾಸವಿದೆ. ಜೈನ ಕ್ಷೇತ್ರಕರು ಸಂತತಿ ಪ್ರಾಪ್ತಿಗಾಗಿ ಪ್ರತಿದಿನ ಆರಾಧನೆಗಾಗಿ ಈ ದೇವಾಲಯವನ್ನು ಸ್ಥಾಪಿಸಿದರೆಂದು ತಿಳಿದು ಬಂದಿದೆ. ದೇವಾಲಯದಲ್ಲಿರುವ ಶಿಲಾಶಾಸನದ ಶಿಲೆಯನ್ನು ಕೈಯಿಂದ ಸ್ಪರ್ಶಿಸಿದಾಗ ಕೈ ಮತ್ತು ಕಲ್ಲು ಹಳದಿ ಬಣ್ಣವಾಗಿ ಈ ಸ್ಥಳದ ಹೆಸರು ‘ಪೆರ್ರಾಳ’ ಎನ್ನುವುದಾಗಿದ್ದು ಕಾಲ ಸರಿದಂತೆ ‘ಪೆರ್ಲ ಎಂಬುದಾಗಿ ಬದಲಾಗಿರಬೇಕೆಂದು ಕಂಡುಬರುತ್ತದೆ. ಸುಮಾರು ನೂರೈವತ್ತು ವರ್ಷಗಳಿಂದೀಚೆಗೆ ಸದ್ರಿ ದೇವಾಲಯವು ಕಾಂಚನ ಅಯ್ಯರ್‌ರವರ ಆಡಳಿತಕ್ಕೊಳಪಟ್ಟಿತ್ತು.
ಪ್ರಸ್ತುತ ಧನ್ಯಕುಮಾರ್ ರೈ ಬಿಳಿಯೂರುಗುತ್ತು ಆಡಳಿತ ಮೊಕ್ತೇಸರರಾಗಿ, ಜಿನೇಂದ್ರ ಕುಮಾರ್ ಪಾಳೇರಿ – ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ, ರಮೇಶ್ ಬಿ.ಜಿ. – ಕಾರ್ಯದರ್ಶಿ, ನೇಮಣ್ಣ ಪೂಜಾರಿ ಪಾಳೇರಿ – ಕೋಶಾಧಿಕಾರಿ, ವೆಂಕಪ್ಪ ಗೌಡ ಪೆರ್ಲ – ಉಪಾಧ್ಯಕ್ಷರು, ಶ್ರೀನಿವಾಸ ಬಡೆಕಿಲ್ಲಾಯ – ಪ್ರಧಾನ ಅರ್ಚಕ, ಕೃಷ್ಣಪ್ಪ ನಾಯ್ಕ್, ನಾರಾಯಣ ಡೆಂಬಲೆ, ಗುಲಾಬಿ ಶೆಟ್ಟಿ, ವೇದಕುಮಾರ್ ಪಿ., ಚಲ್ಲ ಮುಗೇರ ಬೋರ್‍ಜಾಲ್ – ದೇವಳದ ಆಡಳಿತ ನಿರ್ವಹಿಸುತ್ತಿದ್ದಾರೆ.
ಇತರ ದೇವಸ್ಥಾನ/ದೈವಸ್ಥಾನ/ಮಂದಿರಗಳು :-
* ಶ್ರೀ ರಾಮ ಭಜನಾ ಮಂದಿರ ಆಲಂತಾಯ
* ಶ್ರೀ ಶಿರಾಡಿ ದೈವಸ್ಥಾನ ಪಾಲೇರಿಕಟ್ಟೆ ೯೫೩೫೮೪೬೨೨೫
* ಶ್ರೀ ರಾಜನ್ ದೈವ ಶಿವಾರ್ ಆಲಂತಾಯ
* ಶ್ರೀ ಶಿರಾಡಿ ದೈವಸ್ಥಾನ ಚಿಲ್ಮೆ
* ಶ್ರೀ ರಾಜನ್ ಭಜನಾ ಮಂದಿರ ಶಿವಾರ್ ಆಲಂತಾಯ