





ಪುತ್ತೂರು: ಪುತ್ತೂರಿನ ಎಪಿಎಂಸಿ ರಸ್ತೆಯ ಮಾನೈ ಆರ್ಕ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಪ್ರಗತಿ ವಿಸ್ತಾರ ಕಾಲೇಜ್ ಫಾರ್ ಏವಿಯೇಶನ್ ಆಂಡ್ ಮ್ಯಾನೇಜ್ಮೆಂಟ್ನ ವಿದ್ಯಾರ್ಥಿ ಮಹಮ್ಮದ್ ತಮ್ಜೀರ್ ಏರ್ ಇಂಡಿಯಾ SATS ನಲ್ಲಿ ಕಸ್ಟಮರ್ ಸರ್ವಿಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೇಮಕಗೊಂಡಿರುತ್ತಾರೆ.


ಒಂದು ವರ್ಷದ ಅವಧಿಯೊಳಗೆ ಏರ್ ಇಂಡಿಯಾ SATS (AISATS)ನಲ್ಲಿ ಕೆಲಸ ಪಡೆಯುವುದು ಸಂಸ್ಥೆಯ ಗುಣಮಟ್ಟದ ತರಬೇತಿ, ವಿದ್ಯಾರ್ಥಿಗಳ ಸಿದ್ದತೆ ಹಾಗೂ ವೃತ್ತಿಪರ ಮಾರ್ಗದರ್ಶನಕ್ಕೆ ಸಾಕ್ಷಿಯಾಗಿದೆ. ಆಯ್ಕೆಯಾದ ವಿದ್ಯಾರ್ಥಿಗೆ ಹಾಗೂ ತರಬೇತುದಾರರಿಗೆ ಸಂಸ್ಥೆಯ ಆಡಳಿತ ಮಂಡಳಿಯಿಂದ ಮತ್ತು ಉಪನ್ಯಾಸಕರ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.






2024 ಅ.3ರಂದು ಅಧಿಕೃತವಾಗಿ ಪ್ರಾರಂಭಗೊಂಡ ಈ ಸಂಸ್ಥೆ ಒಂದು ವರ್ಷ ಪೂರೈಸಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಸೀಮಿತ ಕ್ಷೇತ್ರಗಳ ಕಡೆ ಒಲವುತೋರುತ್ತಿದ್ದು, ಇದಕ್ಕೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯೂ ಹೊರತಲ್ಲ. ಈ ಸವಾಲನ್ನು ಸ್ವೀಕರಿಸಿ ಗ್ರಾಮೀಣ ಪ್ರದೇಶದ ವಿರ್ದ್ಯಾಥಿಗಳಿಗೆ ಏವಿಯೇಶನ್ ಕ್ಷೇತ್ರದ ಬಗ್ಗೆ ಆಸಕ್ತಿ ಮೂಡಿಸಲು ಹಾಗೂ ಏವಿಯೇಶನ್ ಶಿಕ್ಷಣದ ಮೂಲಕ ಉಜ್ವಲ ಭವಿಷ್ಯ ನಿರ್ಮಿಸುವ ಉದ್ದೇಶದಿಂದ ಶ್ರೀ ಪ್ರಗತಿ ವಿಸ್ತಾರ ಸಂಸ್ಥೆಯನ್ನು ಆರಂಭಿಸಲಾಗಿದೆ.
ಪ್ರಸ್ತುತ ಸಂಸ್ಥೆಯಲ್ಲಿ ಎರಡು ಡಿಪ್ಲೋಮ ಬ್ಯಾಚುಗಳು ಮತ್ತು ಬಿಬಿಎ ಇನ್ ಎವಿಯೇಶನ್ ಪದವಿ ತರಗತಿಗಳನ್ನು ದೆಹಲಿ ಹಾಗೂ ಮುಂಬೈ ವಿಮಾನ ನಿಲ್ದಾಣಗಳಲ್ಲಿ Cabin Crew ಆಗಿ 17 ವರ್ಷಗಳ ಅನುಭವವನ್ನು ಹೊಂದಿರುವ ಬಿಂದು ಸಾಗರ್ ಶೆಟ್ಟಿ, ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ
Air India Sats ನ Ground handling ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಕುಮಾರಿ ಚ್ಯೆತನ್ಯ ಹಾಗೂ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ Air India Sats ನ Ground handling ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಕುಮಾರಿ ಅಶ್ವಿತಾ ರೈ, ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿ ಪ್ರಾರಂಭಗೊಳ್ಳುವ ಹೊಸ ಡಿಪ್ಲೋಮ ಬ್ಯಾಚುಗಳಿಗೆ ದಾಖಲಾತಿ ಪ್ರಕ್ರಿಯೆಗಳು ಆರಂಭಗೊಂಡಿದೆ.








