ಬಜತ್ತೂರು ಗ್ರಾಮ

ಶ್ರೀ ಪಾರಂತಿ ಪಂಚಲಿಂಗೇಶ್ವರ ದೇವಸ್ಥಾನ ಮುದ್ಯ, ಬಜತ್ತೂರು ಅಂಚೆ. ಮೊ: 9740964859, 9449529215

ಪಾರಂತಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಮುದ್ಯ, ಇದು ದ.ಕ. ಜಿಲ್ಲೆ ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದಲ್ಲಿ ಪರ್ವತದ ಉನ್ನತ ಭಾಗದಲ್ಲಿ ಭಕ್ತರ ಅಭೀಷ್ಠಪ್ರದಾಯಕ ಶ್ರೀ ಪಂಚಲಿಂಗೇಶ್ವರನ ಸನ್ನಿಧಾನವಿದೆ.


ಸುಮಾರು ಐದು ನೂರು ವರ್ಷಕ್ಕಿಂತಲೂ ಹೆಚ್ಚಿನ ಇತಿಹಾಸವನ್ನು ಹೊಂದಿರುವ ಈ ದೇವಾಲಯವು ಪಾಂಡವರ ಕಾಲದಲ್ಲಿ ದ್ರೌಪದಿ ಸಮೇತನಾದ ಭೀಮಸೇನನಿಂದ ಪ್ರತಿಷ್ಠಾಪನೆಗೊಂಡಿದೆ ಎನ್ನುವುದು ಇಲ್ಲಿನ ಐತಿಹ್ಯ. ೮೦೦ ವರ್ಷಗಳ ಹಿಂದೆ ದ್ವೈತಮತ ಪ್ರವರ್ತಕರಾದ ಶ್ರೀ ಮಧ್ವಾಚಾರ್ಯರು ತಮ್ಮ ಹಿಂದಿನ ಭೀಮಾವತಾರದಲ್ಲಿ ಪ್ರತಿಷ್ಠಾಪಿಸಿದ ಈ ಪಾರಂತಿ ಪಂಚಲಿಂಗೇಶ್ವರ ದೇವಾಲಯವನ್ನು ಸ್ಮರಿಸಿಕೊಂಡು ನಿತ್ಯಪೂಜಾದಿ ವ್ಯವಸ್ಥೆಗಳು ನಿಂತುಹೋಗಿ ಜೀರ್ಣವಾಗಿದ್ದ ಈ ಪಾರಂತಿಗೆ ಆಗಮಿಸಿ ಊರಿನ ಮುಖಂಡರನ್ನು ಸೇರಿಸಿ ಅರ್ಧ ದಿನದೊಳಗೆ ದೇವಾಲಯದ ಸರ್ವವ್ಯವಸ್ಥೆಯನ್ನೂ ಮಾಡಿ ಪಾವನವನ್ನಾಗಿಸಿರುತ್ತಾರೆ ಎಂದು ತ್ರಿವಿಕ್ರಮ ಪಂಡಿತಾಚಾರ್ಯರು ತಾವು ರಚಿಸಿದ ಶ್ರೀ ಸುಮಧ್ವವಿಜಯ ಎನ್ನುವ ಗ್ರಂಥದಲ್ಲಿ ಉಲ್ಲೇಖ ಮಾಡಿರುತ್ತಾರೆ. (೧೬ನೇ ಅಧ್ಯಾಯದ ೩೬ ಹಾಗೂ ೩೭ ನೇ ಶ್ಲೋಕ) ಇಲ್ಲಿ ಶ್ರೀ ಮಧ್ವಾಚಾರ್ಯರು ವಶಿತ್ವ ಎನ್ನುವ ಅಪೂರ್ವವಾದ ಯೋಗಶಕ್ತಿಯನ್ನು ಪ್ರಕಟಿಸಿರುತ್ತಾರೆ. ಈ ದೇವಾಲಯದ ಪ್ರಾಂಗಣದಲ್ಲೇ ಶ್ರೀ ಮಧ್ವಾಚಾರ್ಯರ ಸಂಪರ್ಕಕ್ಕೊಳಗಾಗಿದೆ ಎನ್ನಲಾದ ಹಳೆಯ ಧಾತ್ರಿ ವೃಕ್ಷವಿದೆ.
ಉಡುಪಿಯ ಅಷ್ಟಮಠಗಳಿಗೆ ಸಂಬಂಧಿಸಿದ ದೇವಾಲಯವು ಇದಾಗಿದ್ದು ಪರ್ಯಾಯ ಕುಳಿತುಕೊಳ್ಳುವ ಉಡುಪಿಯ ಅಷ್ಟಮಠದ ಸ್ವಾಮೀಜಿಯವರು ತಮ್ಮ ಪರ್ಯಾಯ ಸಂಚಾರದಲ್ಲಿ ಈ ದೇವಾಲಯಕ್ಕೆ ಬಂದು ದೇವರ ಅನುಗ್ರಹ ಪಡೆದುಕೊಂಡು ಹೋಗುವುದು ಹಿಂದಿನಿಂದ ಬಂದ ವಾಡಿಕೆ.
ದೇವಾಲಯದ ಅಭಿವೃದ್ಧಿಗಾಗಿ ಪೇಜಾವರ ಹಾಗೂ ಪಲಿಮಾರು ಮಠಾಧೀಶರು “ಪಾರಂತಿ ಟೆಂಪಲ್ ಟ್ರಸ್ಟ್”ನ್ನು ರಚಿಸಿರುತ್ತಾರೆ. ಈ ಯತಿದ್ವಯರ ಮಾರ್ಗದರ್ಶನದಲ್ಲಿ ಜೀರ್ಣೋದ್ಧಾರ ಕಾರ್ಯಗಳು ಆರಂಭವಾಗಿದೆ. ನೂರಾರು ವರ್ಷಗಳಿಂದ ಅನುವಂಶಿಕವಾಗಿ ಬಂದಿರುವ ದೇವಾಲಯದ ಆಡಳಿತ ಹಾಗೂ ಅರ್ಚನೆಯ ಜವಾಬ್ದಾರಿಯನ್ನು ಪ್ರಸ್ತುತ ಅನಂತಕೃಷ್ಣ ಉಡುಪರು ನಿರ್ವಹಿಸಿಕೊಂಡು ಬರುತ್ತಿದ್ದಾರೆ.
ದೇವಾಲಯದ ಸಂಪರ್ಕಕ್ಕಾಗಿ – ಶ್ರೀ ಅನಂತಕೃಷ್ಣ ಉಡುಪ, ಅನುವಂಶಿಕ ಮೊಕ್ತೇಸರರು ಹಾಗೂ ಅರ್ಚಕರು, ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಮುದ್ಯ, ಬಜತ್ತೂರು ಗ್ರಾಮ ಮತ್ತು ಅಂಚೆ, ಪುತ್ತೂರು ತಾಲೂಕು, ದ.ಕ. ದೂರವಾಣಿ : ೯೪೪೯೫೨೯೨೧೫.
ಅನುವಂಶಿಕ ಆಡಳಿತ ಮೊಕ್ತೇಸರರು – ಅನಂತಕೃಷ್ಣ ಉಡುಪ ಮೊ: ೯೭೪೦೯೬೪೮೫೯, ೯೪೪೯೫೨೯೨೧೫.

ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಕಾಂಚನನಡ್ಪ, ಬಜತ್ತೂರು, ಪುತ್ತೂರು. ಫೋನ್: 08251-255333, 9474964392

ಸಾಧಾರಣ ೩೫೦-೪೦೦ ವರ್ಷಗಳ ಹಿಂದೆ ಈಗಿರುವ ನಡ್ಪ ದೇವಸ್ಥಾನದ ಹಿಂಬದಿಯ ಗುಡ್ಡದ ಪೊದರ ಮರೆಯಲ್ಲಿ ಶ್ರೀ ವಿಷ್ಣುಮೂರ್ತಿ ದೇವರ ಮರದ ವಿಗ್ರಹ ಅನಾಥವಾಗಿ ಬಿದ್ದಿತ್ತೆಂದೂ, ಅದನ್ನು ಕಂಡ ಪ್ರತಿಷ್ಠಿತ ಮನೆತನದ ಕಾಂಚನ ಅಯ್ಯರ್ ಕುಟುಂಬಸ್ಥರಿಂದ, ಈಗಿರುವ ದೇವಸ್ಥಾನದ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡಿದರೆಂದೂ ಪ್ರಶ್ನಾರೂಪದಲ್ಲಿ ಕಂಡುಬಂದಿದೆ. ಮುಂದೇ ಅದೇ ಮನೆತನದವರು ೧೯೧೭ರಲ್ಲಿ ಶಿಲಾಮೂರ್ತಿಯನ್ನು ಮಾಡಿಸಿ ಪುನರ್ ಪ್ರತಿಷ್ಠೆ ಮಾಡಿದರೆಂದು ಮಾಹಿತಿಯಿಂದ ತಿಳಿದಿದೆ. ಹಿಂದಿನಿಂದಲೂ ಇದು ದೈವಗಳ ಪ್ರಧಾನ ಕ್ಷೇತ್ರವೇ ಆಗಿತ್ತು. ಸಾಧಾರಣ ಮೀನ ಮಾಸದಲ್ಲಿ ದೈವಗಳಿಗೆ ಪ್ರಧಾನವಾಗಿ ದೊಂಪದ ಬಲಿ ಎಂಬ ತುಳು ನಾಮಧೇಯದಿಂದ ನೇಮೋತ್ಸವ ಜರಗುತ್ತಿತ್ತು. ಪ್ರಧಾನವಾಗಿ ಚಕ್ರವರ್ತಿ ಕೊಡಮಾಣಿತ್ತಾಯ ದೈವ ಹಾಗೂ ಗ್ರಾಮ ದೈವವೆಂದು ಪ್ರಸಿದ್ಧಿ ಪಡೆದ ಶಿರಾಡಿ ದೈವಗಳು. ಪಂಜುರ್ಲಿ ದೈವವೇ ದೇವಸ್ಥಾನದ ರಕ್ಷಕನಾಗಿ ದೇಗುಲದಲ್ಲೆ ಒಂದು ಕೋಣೆಯಲ್ಲಿ ಅದರ ಮೊಗ ಕತ್ತಿಗಳಿವೆ. ಊರವರ ಪೂರ್ಣ ಸಹಕಾರದೊಂದಿಗೆ ೧೯೮೯ರಲ್ಲಿ ಬ್ರಹ್ಮಕಲಶ ನೆರವೇರಿತು. ಆಮೇಲೆ ಸ್ಥಗಿತಗೊಂಡಿದ್ದ ಎರಡು ದಿವಸದ ಬಲಿ ಉತ್ಸವಗಳೊಂದಿಗೆ ಜಾತ್ರೆ ಪ್ರಾರಂಭವಾಯಿತು. ಭಕ್ತಾದಿಗಳಿಂದ ಅನ್ನಸಂತರ್ಪಣೆ ಕೂಡಾ ನಡೆಯಲಾರಂಭಿಸಿದೆ.
೨೦೦೨ರಲ್ಲಿ ದೇವಸ್ಥಾನದ ಹೆಚ್ಚಿನ ಅಭಿವೃದ್ಧಿಗಾಗಿ ಒಂದು ಟ್ರಸ್ಟ್ (ರಿ.) ರಚನೆಯಾಗಿದೆ. ಮೀನ ಮಾಸ ೮ ಮತ್ತು ೯ರಂದು (ದಿನಾಂಕ ಮಾರ್ಚ್ ೨೨, ೨೩ಕ್ಕೆ) ವರ್ಷಾವಧಿ ಜಾತ್ರೆ ನಡೆಯುವುದು. ಅಲ್ಲದೆ ನವರಾತ್ರಿಯಲ್ಲಿ ನವಾನ್ನ ಸೇವೆ, ಆಯುಧ ಪೂಜೆ, ಧನುರ್ಮಾಸದಲ್ಲಿ ಧನುಪೂಜೆ, ದೀಪಾವಳಿ ಸಂದರ್ಭದಲ್ಲಿ ಬಲಿಯೇಂದ್ರ ಪೂಜೆ ನಡೆಯುತ್ತದೆ.
ಆಡಳಿತ ಸಮಿತಿ ಮೊಕ್ತೇಸರರು – ಎನ್. ನಾರಾಯಣ ಬಡಿಕ್ಕಿಲ್ಲಾಯ, ಅಧ್ಯಕ್ಷರು – ಬಿ. ಲೋಕೇಶ ಗೌಡ ಬಜತ್ತೂರು, ಉಪಾಧ್ಯಕ್ಷರು – ಕೆ.ವಿ. ಕಾರಂತ ಉರಾಬೆ, ಖಜಾಂಜಿ – ಕೆ. ಶಿವರಾಜ ಕಾರಂತ ಉರಾಬೆ, ಲೆಕ್ಕಪರಿಶೋಧಕರು – ಕೆ. ಶಿವಣ್ಣ ಗೌಡ ಬಿದಿರಾಡಿ, ಜೊತೆ ಕಾರ್ಯದರ್ಶಿ – ಎನ್. ಶ್ರೀಧರ ಗೌಡ ನಡ್ಪ, ಟ್ರಸ್ಟಿ – ಕುಶಾಲಪ್ಪ ಗೌಡ ಬಜತ್ತೂರು, ದುಗ್ಗಪ್ಪ ಗೌಡ ಅಗರ್ತಿಮಾರು, ಶ್ರೀಮತಿ ಸುಮನ ಬಡಿಕ್ಕಿಲ್ಲಾಯ, ಸುದೇಶ್ ಕೂವೆಚ್ಚಾರು.