ಶಿರಾಡಿ ಗ್ರಾಮ

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಅಮ್ಮಾಜೆ, ಶಿರಾಡಿ ಅಂಚೆ, ಪುತ್ತೂರು, ದ.ಕ. ಫೋನ್: 08251-215444

 ಶಿರಾಡಿ ಗ್ರಾಮದ ಉದನೆಯಿಂದ 5 ಕಿ.ಮೀ. ದೂರದಲ್ಲಿರುವ ಸುಮಾರು 700 ವರ್ಷಗಳ ಪೌರಾಣಿಕ ಐತಿಹ್ಯವಿರುವ ಕ್ಷೇತ್ರವೇ ಅಮ್ಮಾಜೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಶ್ರೀ ಕ್ಷೇತ್ರದ ಸನಿಹದಲ್ಲಿಯೇ ಶ್ರೀ ಕ್ಷೇತ್ರ ಶಿಬಾಜೆ ಮೋಂಟೆತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವಿದೆ.
ರಾಕ್ಷಸರ ಸಂಹಾರಕ್ಕೆ ದೇವತೆಗಳ ಪ್ರಾರ್ಥನೆಯಂತೆ ದೇವಿಯು ಭೂಲೋಕಕ್ಕೆ ಬಂದು ಶಿಬಾಜೆಯಲ್ಲಿ ನೆಲೆಸಿದ ಬಗ್ಗೆ ಹೇಳಲಾಗುತ್ತದೆ. ಸ್ಥಳೀಯ ಮಹಿಳೆಯೊಬ್ಬಳು ತನ್ನ ಗಂಡನಲ್ಲಿ ಸಂಶಯಗೊಂಡು ದೇವಿಯನ್ನು ಆರೋಪಿಸುತ್ತಾಳೆ. ಆಗ ಶ್ರೀ ದೇವಿಯು ಕೋಪಿಸಿಕೊಂಡು ಉಗ್ರ ರೂಪದಿಂದ ಸಿಡಿದೆದ್ದು ಭಾಗವಾಗಿ ಶ್ರೀ ಅಮ್ಮಾಜೆಯಲ್ಲಿ ಬಿದ್ದು ಮೂರ್ತಿ ಸ್ವರೂಪಿಯಾಗಿ ನೆಲೆಯಾಗಿದ್ದಾಳೆ ಎಂದು ಸ್ಥಳ ಪುರಾಣದಿಂದ ತಿಳಿದುಬರುತ್ತದೆ. ಕಾಡಿನಿಂದ ಕೂಡಿದ ಈ ಜಾಗದಲ್ಲಿ ಶ್ರೀ ದೇವಿಯು ಹುತ್ತದ ಕೆಳಗೆ ಉದ್ಭವಿಸಿದ್ದರೂ ಜನರ ಕಣ್ಣಿಗೆ ಕಾಣಿಸುತ್ತಿರಲಿಲ್ಲ. ಕುಂಟಾಲು ಗಿಡದ ಕೆಳಗೆ ಜನರು ದೇವಿಯನ್ನು ಹುತ್ತದ ರೂಪದಲ್ಲಿಯೇ ಆರಾಧಿಸುತ್ತಿದ್ದರು. ಬಳಿಕ ಊರವರು ಜೀರ್ಣೋದ್ಧಾರಕ್ಕೆ ತೊಡಗಿದಾಗ ಶ್ರೀ ದೇವಿಯ ಶಿಲಾಮಯ ಉದ್ಭವ ಮೂರ್ತಿಯ ಶಿರೋಭಾಗವು ಒಂದು ಚಪ್ಪಡಿ ಕಲ್ಲಿನ ಕೆಳಗೆ ಕಂಡುಬಂತು. ನಿಧಾನವಾಗಿ ಅಗೆದಾಗ ಶ್ರೀ ದೇವಿಯು ಭಕ್ತರಿಗೆ ದರ್ಶನವಿತ್ತಳು. ಅದೇ ಶಿಲಾಮೂರ್ತಿಯನ್ನು ಬಾಲಾಲಯ ಪ್ರತಿಷ್ಠೆ ಮಾಡಿ ಪೂರ್ಣ ಪ್ರಮಾಣದ ಜೀರ್ಣೋದ್ಧಾರವಾಗಿ 2012ರ ಡಿಸೆಂಬರ್‌ನಲ್ಲಿ ಬ್ರಹ್ಮಕಲಶೋತ್ಸವ ನೆರವೇರಿದೆ. ಜಾನುವಾರುಗಳು ತಪ್ಪಿಸಿದ ಮತ್ತು ಕಾಯಿಲೆ ಬಂದಾಗ ಬಿದಿರಿನ ಬೊಂಕ ಒಪ್ಪಿಸುವ ಹರಕೆ ಹೇಳಿದರೆ ಕಾಯಿಲೆ ಶೀಘ್ರ ಗುಣಮುಖವಾಗುತ್ತದೆ. ಹಟ್ಟಿ ಸೇರುತ್ತವೆ. ಗಾಜಿನ ಬಳೆ ದೇವರಿಗೆ ಒಪ್ಪಿಸುವ ಹರಕೆ ಹೇಳಿದರೆ ಸಂತಾನಭಾಗ್ಯ, ವಿವಾಹ ಸಂಬಂಧಗಳು ಪ್ರಾಪ್ತಿಯಾಗುತ್ತದೆ ಎಂದು ಭಕ್ತರಲ್ಲಿ ನಂಬಿಕೆಯಿದೆ.

ಕಳಪ್ಪಾರು ಸುಬ್ರಹ್ಮಣ್ಯ ದೇವಸ್ಥಾನ, ಶಿರಾಡಿ

ಶಿರಾಡಿ ಗ್ರಾಮದ ಸುಬ್ರಹ್ಮಣ್ಯ ದೇವಾಲಯದಲ್ಲಿ ಮೂರ್ತಿ ಆರಾಧನೆ ಇಲ್ಲ. ಹುತ್ತಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಸ್ಥಳದಲ್ಲಿ ಕಲ್ಲಿನ ಹೆಡೆಯಿದೆ.
ಸಾವಿರಾರು ವರ್ಷಗಳ ಇತಿಹಾಸದ ಈ ದೇವಾಲಯ ಜೈನರ ಆಡಳಿತದಲ್ಲಿತ್ತು. ಶಿರಾಡಿ, ಉದ್ರಾಂಡಿ, ಮಹಿಷಂತಾಯ, ಅಲ್ಲದೆ ಪುರುಷ, ಬಸ್ತಿ ನಾಯಕ ಹಾಗೂ ನಾಗ ಸಾನಿಧ್ಯವಿದೆ. ಕಳಪ್ಪಾರುಗುತ್ತು ಚೆನ್ನಪ್ಪ ಗೌಡರು ಆಡಳಿತ ಮೊಕ್ತೇಸರರಾಗಿದ್ದು, ರಾಧಾಕೃಷ್ಣ ತೋಡ್ತಿಲ್ಲಾಯ ಅಧ್ಯಕ್ಷರಾಗಿದ್ದಾರೆ. ಚಂಪಾಷಷ್ಠಿಗೆ ವಿಶೇಷ ಪೂಜೆ ಅನ್ನಸಂತರ್ಪಣೆ
ನಡೆಯುತ್ತಿದೆ.

ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಅಡ್ಡಹೊಳೆ ಶಿರಾಡಿ


ನೆಲ್ಯಾಡಿ-ಗುಂಡ್ಯ ಮಾರ್ಗದಲ್ಲಿ ಸಿಗುವ ಅಡ್ಡ ಹೊಳೆ ಜಂಕ್ಷನ್‌ನಲ್ಲಿ ಈ ದೇವಾಲಯವಿದೆ. ಇಲ್ಲಿ ಪ್ರತೀ ವರ್ಷ ಶನಿವಾರ ಸಂಜೆ ಭಜನೆ ನಡೆಯುತ್ತದೆ. ಮಕರ ಸಂಕ್ರಮಣದಂದು ವಿಶೇಷ ಪೂಜೆ ನಡೆಯುವುದು.
ವಿಜಯನ್-948030278

ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು:
* ಶ್ರೀ ರಕ್ತೇಶ್ವರಿ ದೈವಸ್ಥಾನ ಶಿರಾಡಿ
* ಶ್ರೀ ಧರ್ಮಶಾಸ್ತಾ ಭಜನಾ ಮಂದಿರ ಶಿರಾಡಿ