ನಿಡ್ಪಳ್ಳಿ; ಶ್ರೀ ಶಾಂತದುರ್ಗಾ ದೇವಸ್ಥಾನದ ವಠಾರದಲ್ಲಿ ನಿಡ್ಪಳ್ಳಿ ಗೌಡ ಸಮಾಜದ ಸದಸ್ಯರಿಂದ ಸ್ವಚ್ಚತಾ ಶ್ರಮದಾನ ಡಿ.14ರಂದು ನಡೆಯಿತು.
ನಂತರ ನಿಡ್ಪಳ್ಳಿ ಗ್ರಾಮ ಸಮಿತಿಯ ಸಭೆ ನಡೆಸಲಾಯಿತು. ಗ್ರಾಮ ಸಮಿತಿಯ ಗೌರವಾಧ್ಯಕ್ಷ ನಾಗೇಶ ಗೌಡ ಪುಳಿತ್ತಡಿ, ಅಧ್ಯಕ್ಷ ದೇರಣ್ಣ ಗೌಡ ಚಿಕ್ಕೊಡಿ ಮತ್ತು ಪುರುಷ ಹಾಗೂ ಮಹಿಳಾ ಸದಸ್ಯರು ಭಾಗವಹಿಸಿದರು.ಡಿ. 25 ರಂದು ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯುವ ವಾರ್ಷಿಕ ಸಮಾವೇಶ ಮತ್ತು ಶ್ರೀ ಸತ್ಯನಾರಾಯಣ ಪೂಜೆಯ ಆಮಂತ್ರಣ ಪತ್ರ ಹಾಗೂ ರಶೀದಿಯನ್ನು ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಗ್ರಾಮದ ಪ್ರತಿ ಮನೆಯಿಂದ ಎರಡೆರಡು ತೆಂಗಿನಕಾಯಿ ಸಂಗ್ರಹಿಸಿ ನೀಡುವುದಾಗಿ ತೀರ್ಮಾನಿಸಲಾಯಿತು.

ಶರತ್ ಕುಮಾರ್ ಪುಳಿತ್ತಡಿ ಸ್ವಾಗತಿಸಿದರು. ಸಮಿತಿಯ ಕಾರ್ಯದರ್ಶಿ ಶ್ರೀನಿವಾಸ ಹೊಯಿಗೆಗದ್ದೆ ವಾರ್ಷಿಕ ಜಮಾ ಖರ್ಚುಗಳ ವರದಿ ವಾಚಿಸಿದರು. ಗಂಗಾಧರ ಸಿ.ಎಚ್ ವಂದಿಸಿದರು.