ಡಿ.16ರಿಂದ ಕುಂಜೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಧನುಪೂಜೆ

0

ಪುತ್ತೂರು: ಆರ್ಯಾಪು ಗ್ರಾಮದ ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಮಾರ್ಗಶಿರ ಮಾಸದ ಧನುರ್ಪೂಜೆಯು ಡಿ.16ರಂದು ಪ್ರಾರಂಭಗೊಳ್ಳಲಿದೆ.
ಧನುಪೂಜೆ ಪ್ರತಿದಿನ ಉಷ:ಕಾಲದ 5-30ರಿಂದ 6 ರವರೆಗೆ ನಡೆಯಲಿದೆ. ನಿರಂತರವಾಗಿ ಒಂದು ತಿಂಗಳ ಕಾಲ ಧನುಪೂಜೆ ನಡೆದು ಜ.14ರ ಮಕರ ಸಂಕ್ರಾತಿಯಂದು ಸಂಪನ್ನಗೊಳ್ಳಲಿದೆ. ಆ ದಿನ ಶ್ರೀದೇವರ ಸನ್ನಿಧಾನದಲ್ಲಿ ಸಮಾರಾಧನೆ, ಪ್ರಾತ:ಕಾಲ ಮಹಾಗಣಪತಿ ಹವನ, ಮಧ್ಯಾಹ್ನ ಮಹಾಪೂಜೆ ವಿವಿಧ ಸೇವೆಗಳು, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ರಾತ್ರಿ ಶ್ರೀ ದೇವಿಗೆ ರಂಗಪೂಜೆಯೊಂದಿಗೆ ಸಂಪನ್ನಗೊಳ್ಳಲಿದೆ. ಧನುರ್ಪೂಜೆಯ ಸೇವೆ ಬಾಬ್ತು ರೂ.200 ಪಾವತಿಸಿ ಸೇವೆ ಮಾಡಿಸಬಹುದು. ಸೇವೆ ಮಾಡಿಸುವವರು 15 ನಿಮಿಷ ಮುಂಚಿತವಾಗಿ ಸನ್ನಿದಾನದಲ್ಲಿ ಉಪಸ್ಥಿತರಿರಬೇಕು. ಹೆಚ್ಚಿನ ಮಾಹಿತಿಗಾಗಿ 9481094455 ಅಥವಾ 9481542851 ನಂಬರನ್ನು ಸಂಪರ್ಕಿಸುವಂತೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಗನ್ನಾಥ ರೈ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here