ಬಿಜೆಪಿ ಯುವ ಮೋರ್ಚಾದಿಂದ ಸೇವಾ ಸಂಕಲ್ಪ ಯೋಜನೆ

0

ಪುತ್ತೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹುಟ್ಟುಹಬ್ಬ ಹಾಗೂ 25 ವರ್ಷಗಳ ಸುದೀರ್ಘ ಜನ ಸೇವೆಯ ಕಾರ್ಯದ ಸೇವಾ ಸಂಕಲ್ಪ ಯೋಜನೆಯ ಕಾರ್ಯಕ್ರಮದ ಅಂಗವಾಗಿ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಯುವ ಮೋರ್ಚಾದಿಂದ ಬಿರುಮಲೆಯಲ್ಲಿರುವ ಪ್ರಜ್ಞಾ ಆಶ್ರಮಕ್ಕೆ ಏರ್‌ಕೂಲರ್‌ನ್ನು ಕೊಡುಗೆ ನೀಡಿ, ಮಧ್ಯಾಹ್ನದ ಬೋಜನ ಕಾರ್ಯಕ್ರಮವನ್ನು ಆಯೋಜಿಸಿದ್ದರು.


ಬಿಜೆಪಿ ಗ್ರಾಮಾಂತರ ಮಂಡಲದ ಯುವ ಮೋರ್ಚಾ ಅಧ್ಯಕ್ಷ ಶಿಶಿರ್ ಪೆರ್ವೋಡಿ, ಬಿಜೆಪಿ ಮುಖಂಡರು ಹಾಗೂ ಮಾಜಿ ಜಿಲ್ಲಾ ಯುವ ಮೋರ್ಚಾದ ಉಪಾಧ್ಯಕ್ಷ ಸಹಜ್ ರೈ, ಯುವ ಮೋರ್ಚಾ ಪ್ರಭಾರಿ ಹಾಗೂ ಗ್ರಾಮಾಂತರ ಮಂಡಲದ ಕಾರ್ಯದರ್ಶಿ ರತನ್ ರೈ ಕುಂಬ್ರ, ಪ್ರಧಾನ ಕಾರ್ಯದರ್ಶಿಗಳಾದ ಆದೇಶ್ ಶೆಟ್ಟಿ ಹಾಗೂ ನಿತಿನ್ ಬೊಡ್ಡೋಣಿ, ಉಪಾಧ್ಯಕ್ಷರುಗಳಾದ ತಿಲಕ್‌ರಾಜ್ ಶೆಟ್ಟಿ ಹಾಗೂ ಪವನ್ ಶೆಟ್ಟಿ ಕಂಬಳತಡ್ಕ, ಕಾರ್ಯದರ್ಶಿ ಧನುಷ್ ಹೊಸಮನೆ ಹಾಗೂ ಪ್ರಜ್ಞಾ ಆಶ್ರಮದ ಮೇಲ್ವಿಚಾರರಾದ ಅಣ್ಣಪ್ಪ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here