ಬೆಟ್ಟಂಪಾಡಿ ನವೋದಯ ಶಾಲೆಯಲ್ಲಿ ಪೋಷಕರ ಸಭೆ, ಪೋಕ್ಸೋ ಮತ್ತು ಮಾದಕ ವ್ಯಸನ ತಡೆ ಕುರಿತು ಮಾಹಿತಿ ಕಾರ್ಯಕ್ರಮ

0

ಪುತ್ತೂರು : ಬೆಟ್ಟಂಪಾಡಿ ನವೋದಯ ಶಾಲೆಯಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಪೋಷಕರ ಸಭೆ ಮತ್ತು ಪೊಕ್ಸೋ ಕಾಯಿದೆ ಮಾದಕ ವ್ಯಸನ ತಡೆ ಕಾಯಿದೆ ಮತ್ತು ಸುರಕ್ಷತಾ ನಿಯಮಗಳ ಕುರಿತು ಮಾಹಿತಿ ಕಾರ್ಯಕ್ರಮ ಸೆ.10ರಂದು ಶಾಲೆಯ ಸಭಾಂಗಣದಲ್ಲಿ ನಡೆಯಿತು.

ಅತಿಥಿ ಶಾಲೆಯ ಹಿರಿಯ ವಿದ್ಯಾರ್ಥಿ, ನಿವೃತ್ತ ಪೊಲೀಸ್‌ ಉಪನಿರೀಕ್ಷಕ ದಿವಾಕರ ರೈ ಮೊಡಪ್ಪಾಡಿ ಮಾತನಾಡಿ, ಇಂದಿನ ಪಿಳಿಗೆಯು ಮಾದಕ ವ್ಯಸನಗಳಿಗೆ ಬಲಿಯಾಗಿ ತಮ್ಮ ಬದುಕನ್ನು ಮತ್ತು ಭವಿಷ್ಯವನ್ನು ನಾಶ ಮಾಡಿಕೊಳ್ಳುತ್ತಿದ್ದಾರೆ. ಮಾದಕ ವ್ಯಸನಗಳಿಂದ ಮೆದುಳಿನ ಕಾರ್ಯಕ್ಷಮತೆ, ನೆನಪಿನ ಶಕ್ತಿ ಕುಗ್ಗುವುದು, ಹೃದಯ ಸಂಬಂಧಿ ರೋಗಗಳಿಗೆ ಕಾರಣವಾಗುತ್ತದೆ. ಶ್ವಾಸಕೋಶ, ಉಸಿರಾಟದ ತೊಂದರೆ ಉಂಟಾಗುತ್ತದೆ. ಆತಂಕ, ಖಿನ್ನತೆ, ಕೋಪ, ಮಾನಸಿಕ ಅಸ್ಥಿರತೆ, ಕೋಮಾಕ್ಕೆ ಹೋಗುವ ಸಾಧ್ಯತೆ ಇರುತ್ತದೆ ಎಂದರು.

ಶಾಲೆಯ ಹಿರಿಯ ವಿದ್ಯಾರ್ಥಿ, ಸಂಪ್ಯ ಗ್ರಾಮಾಂತರ ಪೊಲೀಸ್‌ ಠಾಣೆಯ ನಿವೃತ್ತ ಎ ಎಸ್‌ ಐ ಶ್ರೀಧರ್‌ ಮಣಿಯಾಣಿ ಮಾತನಾಡಿ, ಇಂದಿನ ಮಕ್ಕಳೇ ಮುಂದಿನ ಭಾವಿ ಪ್ರಜೆಗಳು ಆದರಿಂದ ಚಿಕ್ಕವಯಸ್ಸಿನಲ್ಲಿಯೇ ಉತ್ತಮ ಗುಣ ನಡತೆ ಮತ್ತು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಂಡರೆ ಉತ್ತಮ ರಾಷ್ಟ್ರ ನಿರ್ಮಾಣ ಕಾಣಬಹುದು ಹಾಗೂ ಪೊಲೀಸ್‌ ಇಲಾಖೆಗೆ ಮಾಹಿತಿ ನೀಡುವ 112 ಸಂಖ್ಯೆಯ ಕುರಿತು ಮಾಹಿತಿ ನೀಡಿ ಶುಭಹಾರೈಸಿದರು.

ಪುತ್ತೂರು ಸಹಾಯ ಪೊಲೀಸ್‌ ಉಪನಿರೀಕ್ಷಕ ದೇವದಾಸ ಮಾತನಾಡಿ, ಪೋಷಕರು ತಮ್ಮ ಮಕ್ಕಳನ್ನು ತಪ್ಪು ದಾರಿಗೆ ಹೋಗದ ರೀತಿ ತಡೆಗಟ್ಟಬೇಕು ಎಂದರು.ಮುಖ್ಯ ಆರಕ್ಷಕ ವಸಂತಗೌಡ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಲೈಸೆನ್ಸ್ ಇಲ್ಲದೆ ವಾಹನ ಚಲಾವಣೆ ಮಾಡಿ ಲಕ್ಷ ಲಕ್ಷ ದಂಡ ಕಟ್ಟುತ್ತಿದ್ದಾರೆ ಅದರ ಬಗ್ಗೆ ಪೋಷಕರು ಗಮನಕೊಡಬೇಕೆಂದರು.

ನವೋದಯ ವಿದ್ಯಾಸಮಿತಿ ಕಾರ್ಯದರ್ಶಿ ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಪುಷ್ಪಾವತಿ ಎಸ್‌ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಶಿಕ್ಷಕಿ ಸುಮತಿ ಕಾರ್ಯಕ್ರಮ ನಿರೂಪಿಸಿದರು. ಗಣಿತ ಶಿಕ್ಷಕಿ ಗೌತಮಿ ಎಂ ಬಿ ವಂದಿಸಿದರು. ಶಾಲಾ ಸಹ ಶಿಕ್ಷಕಿಯರಾದ ಶೋಭಾ ಬಿ, ಭುವನೇಶ್ವರಿ, ಬಾಲಕೃಷ್ಣ ಪಿ, ರಾಧಕೃಷ್ಣ ಆರ್‌ ಹಾಗೂ ಶಿಕ್ಷಕೇತರ ಸಿಬ್ಬಂಧಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here