







ಪುತ್ತೂರು: ಸರಕಾರಿ ಪ್ರೌಢಶಾಲೆ ನೆಟ್ಟಣಿಗೆ ಮುಡ್ನೂರು ಕ್ರೀಡಾಂಗಣದಲ್ಲಿ ಪುತ್ತೂರು ಗ್ರಾಮಾಂತರ ವಲಯ ಮಟ್ಟದ ಕ್ರೀಡಾಕೂಟ -2026-27 ನಡೆಯಿತು.



ಪಥ ಸಂಚಲನದ ಧ್ವಜ ವಂದನೆಯನ್ನು ಮಹಮ್ಮದ್ ಬಡಗನ್ನೂರು ನೆರವೇರಿಸಿದರೆ, ಧ್ವಜಾರೋಹಣವನ್ನು ನಿವೃತ್ತ ಮುಖ್ಯ ಶಿಕ್ಷಕ ಪದ್ಮನಾಭ ರೈ ಬೆದ್ರಾಡಿ ನೆರವೇರಿಸಿದರು.ದೀಪ ಪ್ರಜ್ವಲಿಸಿ ಕ್ರೀಡಾಕೂಟ ಉದ್ಘಾಟಿಸಿದ ಕಾವು ಹೇಮನಾಥ ಶೆಟ್ಟಿ ಅವರು, ಗ್ರಾಮೀಣ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಿಸಿ ಕ್ರೀಡಾಕೂಟ ಆಯೋಜಿಸಿದ ಸಂಘಟಕರನ್ನು ಅಭಿನಂದಿಸಿ, ಈ ಶಾಲೆಯಿಂದ ಪ್ರತಿಭಾನ್ವಿತ ಕ್ರೀಡಾಪಟುಗಳು ಮೂಡಿ ಬರಲಿ ಎಂದು ಹಾರೈಸಿದರು.




ಧ್ವಜ ವಂದನೆ ಸ್ವೀಕರಿಸಿ ಮಾತನಾಡಿದ ಮಹಮ್ಮದ್ ಬಡಗನ್ನೂರು, ಶಾಲೆ ಪ್ರಗತಿಯ ಪಥದಲ್ಲಿರುವಾಗ ಈ ಕ್ರೀಡಾಕೂಟ ಇನ್ನಷ್ಟು ಮೆರಗು ನೀಡಿದೆ, ಇಲ್ಲಿನ ಕ್ರೀಡಾಪಟುಗಳ ಸಾಧನೆ ಸಂತಸದ ವಿಚಾರ ಎಂದರು.ಕ್ರೀಡಾಂಗಣ ಉದ್ಘಾಟಿಸಿದ ಉದ್ಯಮಿ ರಾಜೇಶ್ ಪಂಚೋಡಿ ಶುಭ ಹಾರೈಸಿದರು. ಶ್ರೀ ಗಜಾನನ ವಿದ್ಯಾಸಂಸ್ಥೆಯ ಸಂಚಾಲಕ ಶಿವರಾಮ್.ಪಿ, ಉದ್ಯಮಿಗಳಾದ ಅಬ್ದುಲ್ ಖಾದರ್ ಇಸಾಕ್, ಯಾಕುಬ್ ಸಿ.ಹೆಚ್. ಗಾಳಿಮುಖ ಶುಭ ಹಾರೈಸಿದರು.ಅಧ್ಯಕ್ಷತೆ ವಹಿಸಿದ್ದ ಕ್ರೀಡಾ ಸಂಘಟನಾ ಸಮಿತಿ ಅಧ್ಯಕ್ಷ ಕೃಷ್ಣರಾಜ ಭಂಡಾರಿ ಮೇನಾಲ, ಎಲ್ಲಾ ವಿದ್ಯಾಭಿಮಾನಿಗಳ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮೂಸಾನ್ ಹಾಜಿ, ಅಬ್ದುಲ್ ಖಾದರ್ ನರಸಿನಡ್ಕ, ಯೂಸುಫ್ ಹಾಜಿ ಗೋಳಿದಡಿ, ಫೌಝಿಯಾ ಇಬ್ರಾಹಿಂ, ಪ್ರವೀಣ್ ರೈ ಮೇನಾಲ, ರಾಮ ಮೇನಾಲ, ಅಬ್ದುಲ್ ಖಾದರ್ ಸುರುಳಿಮೂಲೆ, ಅಬ್ದುಲ್ ಖಾದರ್ ಗೋಳಿದಡಿ, ಸೂಫಿ ಬಾಂಟಡ್ಕ, ಮಹಾಬಲ ರೈ ಕರ್ನೂರು, ಇಬ್ರಾಹಿಂ ಪಳ್ಳತ್ತೂರು, ಮಂಜುನಾಥ ರೈ ಸಾಂತ್ಯ ಮತ್ತಿತರರು ಉಪಸ್ಥಿತರಿದ್ದರು.ಮುಖ್ಯ ಗುರು ಪ್ರೇಮ್ ಕುಮಾರ್ ವಂದಿಸಿದರು. ಶಿಕ್ಷಕರಾದ ಪುರುಷೋತ್ತಮ ಬಿ, ಕುಮಾರ ದೀಕ್ಷಿತ್ ಬಿ, ಇಂದಿರಾ ಎ, ರಮಿತ ಆರ್, ಜಯಲತಾ ಕೆ, ಮೀನಾಕ್ಷಿ ಟಿ, ದಮಯಂತಿ ಪಿ.ಎಂ, ದೇವಿಪ್ರಕಾಶ್ ಶೆಟ್ಟಿ ಹಾಗೂ ನಿವೃತ್ತ ಶಿಕ್ಷಕ ಚಂದ್ರಶೇಖರ ಕುಕ್ಕುಪುಣಿ ಕಾರ್ಯಕ್ರಮ ನಿರ್ವಹಿಸಿದರು.ಸಮಾರೋಪ ಮತ್ತು ಬಹುಮಾನ ವಿತರಣೆ:ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಬಿ. ಜಯರಾಮ್ ರೈ ಬಳಜ್ಜ ಬಹುಮಾನ ವಿತರಿಸಿ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೆ ಸತತ ಪರಿಶ್ರಮ ಅಗತ್ಯ, ಈ ವಿದ್ಯಾಸಂಸ್ಥೆ ಎಲ್ಲಾ ಕ್ಷೇತ್ರಗಳಲ್ಲಿ ಬೆಳಗಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀರಾಮ್ ಪಕ್ಕಳ ಕರ್ನೂರು ಗುತ್ತು ಅವರು, ಕ್ರೀಡಾ ಸಂಘಟನಾ ಸಮಿತಿ ಅಧ್ಯಕ್ಷರು ಮತ್ತು ಸಂಚಾಲಕರ ಶ್ರಮದಿಂದ ಕ್ರೀಡಾಕೂಟ ಯಶಸ್ವಿಯಾಗಿದೆ ಎಂದರು.
ಸಮಗ್ರ ಪ್ರಶಸ್ತಿ ವಿವರ:
17ರ ವಯೋಮಾನ ಬಾಲಕರು: ಪ್ರಥಮ – ಸ.ಪ್ರೌ.ಶಾಲೆ ನೆಟ್ಟಣಿಗೆ ಮುಡ್ನೂರು, ದ್ವಿತೀಯ – ಸ.ಪ್ರೌ.ಶಾಲೆ ಇರ್ದೆ-ಉಪ್ಪಳಿಗೆ.
17ರ ವಯೋಮಾನ ಬಾಲಕಿಯರು: ಪ್ರಥಮ – ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ ಹನುಮಗಿರಿ, ದ್ವಿತೀಯ – ಷಣ್ಮುಖದೇವ ಪ್ರೌಢಶಾಲೆ ಪೆರ್ಲಂಪಾಡಿ.
14ರ ವಯೋಮಾನ ಬಾಲಕರು: ಪ್ರಥಮ – ಸ.ಪ್ರೌ.ಶಾಲೆ ನೆಟ್ಟಣಿಗೆ ಮುಡ್ನೂರು, ದ್ವಿತೀಯ – ಸ.ಪ್ರೌ.ಶಾಲೆ ಬೆಟ್ಟಂಪಾಡಿ.
14ರ ವಯೋಮಾನ ಬಾಲಕಿಯರು: ಪ್ರಥಮ – ಬುಶ್ರಾ ವಿದ್ಯಾಸಂಸ್ಥೆ ಕಾವು, ದ್ವಿತೀಯ – ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ ಹನುಮಗಿರಿ.ವೈಯಕ್ತಿಕ ಚಾಂಪಿಯನ್:
17 ಬಾಲಕ – ಪ್ರದೀಶ್ ಎಂ. (ನೆಟ್ಟಣಿಗೆ ಮುಡ್ನೂರು), 17 ಬಾಲಕಿ – ಶನ್ಮಿತ (ಹನುಮಗಿರಿ), 14 ಬಾಲಕ – ಲೇಖನ್ (ನೆಟ್ಟಣಿಗೆ ಮುಡ್ನೂರು).










