






ಬೆಟ್ಟಂಪಾಡಿ: 2025-26ನೇ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಸಂಸ್ಕೃತ ವಿಷಯದಲ್ಲಿ ಅತೀ ಹೆಚ್ಚು ಅಂಕ ಪಡೆದ ನವೋದಯ ಪ್ರೌಢಶಾಲೆಯ ವಿದ್ಯಾರ್ಥಿನಿ ವಿಭಾಶ್ರೀ ಅವರನ್ನು ಬ್ರಹ್ಮಶ್ರೀ ಮಿತ್ತೂರು ತಿಮ್ಮಪ್ಪಯ್ಯ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು.


ಮಿತ್ತೂರಿನಲ್ಲಿ ಸೆ.20ರಂದು ನಡೆದ ಕಾರ್ಯಕ್ರಮದಲ್ಲಿ ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಸಂಸ್ಕೃತ ಅಧ್ಯಾಪಿಕೆ ಶೋಭಾ ಬಿ. ಮಾರ್ಗದರ್ಶನ ನೀಡಿದ್ದು, ಮುಖ್ಯಗುರು ಪುಷ್ಪಾವತಿ ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












