ಗ್ರೀನ್ ಇಂಪಾಕ್ಟ್ ಫೌಂಡೇಶನ್ ‘ಮಣ್ಣು ನಮ್ಮ ಆತ್ಮ ‘ ಯೋಜನೆಯ ಜಿಲ್ಲಾ ನಿರ್ದೇಶಕರಾಗಿ ರೊ ಅಶೋಕ್ ನಾಯ್ಕ್, ವಳಂಕುಮೇರಿ ಆಯ್ಕೆ

0

ಪುತ್ತೂರು: 2021 ರಲ್ಲಿ ಪುತ್ತೂರಿನಲ್ಲಿ ಪರಿಸರ ಸ್ವಚ್ಛತೆ , ತ್ಯಾಜ್ಯ ವಿಲೇವಾರಿ ಜಾಗೃತಿ ಉದ್ದೇಶದಿಂದ ಆರಂಭವಾದ ಗ್ರೀನ್ ಇಂಪಾಕ್ಟ್ ಫೌಂಡೇಶನ್ ಇದರ ಮಣ್ಣಿನ ಫಲವತ್ತತೆ ಕುರಿತಾದ ಸಮಗ್ರ ಜಾಗೃತಿ ಯೋಜನೆಯಾದ ‘ ಮಣ್ಣು ನಮ್ಮ ಆತ್ಮ ‘ ಯೋಜನೆಯ ಜಿಲ್ಲಾ ನಿರ್ದೇಶಕರಾಗಿ ರೊ ಅಶೋಕ್ ನಾಯ್ಕ್ ವಳಂಕುಮೇರಿ ನೇಮಕಗೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಮಣ್ಣಿನ ಆರೋಗ್ಯದ ಸಂರಕ್ಷಣೆ , ಮಣ್ಣಿನ ಸವಕಳಿ ತಡೆಗಟ್ಟುವಿಕೆ, ಫಲವತ್ತತೆ ಕುರಿತಾದ ಜಾಗೃತಿ, ಮಾಹಿತಿ ಕಾರ್ಯಕ್ರಮಗಳನ್ನು ಈ ಯೋಜನೆಯ ಮೂಲಕ ಹಮ್ಮಿಕೊಳ್ಳಲಾಗುವುದು.ಅವರು ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಇದರ ಸಕ್ರಿಯ ಸದಸ್ಯರಾಗಿದ್ದು ,ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here