ಬಲ್ನಾಡು: ಮಹಿಳೆಯರಿಗೆ ಆರೋಗ್ಯ ಮಾಹಿತಿ, ಸ್ವ ಉದ್ಯೋಗ ತರಬೇತಿ

0

ಪುತ್ತೂರು: ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಸುವರ್ಣ ಮಹೋತ್ಸವದ ಅಂಗವಾಗಿ ಬಲ್ನಾಡಿನಲ್ಲಿ ಸ್ವ ಉದ್ಯೋಗ ಪ್ರಾತ್ಯಕ್ಷತೆ ಹಾಗೂ ತರಬೇತಿ ಮತ್ತು ಮಹಿಳೆಯರ ಆರೋಗ್ಯ ಮಾಹಿತಿ ಕಾರ್ಯಕ್ರಮ ಸೆ.26ರಂದು ನಡೆಯಿತು.

ಬಲ್ನಾಡಿನ ಆಯುಷ್ಮಾನ್ ಆರೋಗ್ಯ ಕೇಂದ್ರದ ಬಳಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ನೀಡಿದರು. ಮಹಿಳೆಯರ ಆರೋಗ್ಯದ ಕುರಿತು ಆಯುಷ್ಮಾನ್ ಆರೋಗ್ಯ ಕೇಂದ್ರ, ಬಲ್ನಾಡು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ, ಪಾಣಾಜೆಯ ಸಮುದಾಯ ಆರೋಗ್ಯಾಧಿಕಾರಿ ಯಶೋಧರ ಕೆ. ಮಾಹಿತಿ ನೀಡಿದರು. ಸಾಬೂನು ತಯಾರಿಕೆಯ ಕುರಿತು ಸಂಘದ ನಿರ್ದೇಶಕಿ ವಿಜಯಲಕ್ಷ್ಮೀ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಮಹಿಳೆಯರ ಸೌಂದರ್ಯ ಮತ್ತು ವೈಯಕ್ತಿಕ ಆರೈಕೆಯ ಕುರಿತು ಪುತ್ತೂರಿನ ಬ್ಯೂಟಿಶಿಯನ್ ನವ್ಯ ಅವರು ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ಗೌರಿ ಹೆಚ್. ವಹಿಸಿದ್ದರು. ಸಂಘದ ನಿರ್ದೇಶಕರಾದ ಜಯಶ್ರೀ ಎಸ್. ಶೆಟ್ಟಿ, ಉಷಾ ಮುಳಿಯ, ದೀಕ್ಷಾ ಪೈ, ಸುಚೇತಾ ಜೆ. ನಾಯಕ್ ಹಾಗೂ ರಜನಿ ಆಚಾರ್ಯ ಉಪಸ್ಥಿತರಿದ್ದರು. ಸಂಘದ ನಿರ್ದೇಶಕಿ ಮೋಹಿನಿ ಪಿ. ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸಿಬ್ಬಂದಿಗಳಾದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿದ್ಯಾ ಎಸ್., ಚೈತ್ರ ಕೆ.ಆರ್, ಸರಿತ ಕೆ.ಪಿ., ದೀಪಶ್ರೀ ಹಾಗೂ ಸುಜಯ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು.

LEAVE A REPLY

Please enter your comment!
Please enter your name here