







ಪುತ್ತೂರು: ಪಾಪೆಮಜಲು ಸರಕಾರಿ ಪ್ರೌಢ ಶಾಲೆಗೆ ಯುವ ಉದ್ಯಮಿ ಅಜಿತ್ ಭಂಡಾರಿ ಕುತ್ಯಾಡಿ ಅವರು ಕೊಡುಗೆಯಾಗಿ ನೀಡಿದ ಎರಡು ಕಂಪ್ಯೂಟರ್ಗಳನ್ನು ಅವರ ಸಹೋದರ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರೂ ಆಗಿರುವ ನವೀನ್ ಭಂಡಾರಿ ಕುತ್ಯಾಡಿ ಅವರು ಶಾಲೆಗೆ ಹಸ್ತಾಂತರಿಸಿದರು.
ನವೀನ್ ಭಂಡಾರಿ ಕುತ್ಯಾಡಿ ಅವರನ್ನು ಶಾಲಾ ಎಸ್ಡಿಎಂಸಿ ಕಾರ್ಯಾಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ಅವರು ಶಾಲು ತೊಡಿಸಿ ಹೂಗುಚ್ಛ ನೀಡಿ ಗೌರವಿಸಿದರು. ವಿದ್ಯಾಕೇಂದ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ ಅಜಿತ್ ಭಂಡಾರಿಯವರು ಎಲ್ಲರಿಗೆ ಮಾದರಿಯಾಗಿದ್ದಾರೆ ಎಂದು ಕಾಯಾಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ಹೇಳಿದರು.
ಶಾಲಾ ಎಸ್ಡಿಎಂಸಿ ಸದಸ್ಯರಾದ ಹೊನ್ನಪ್ಪ ನಾಯ್ಕ ಬಪ್ಪಪುಂಡೇಲು, ದೇವಪ್ಪ ನಾಯ್ಕ ಪೆರ್ನೂಕು, ತಿಮ್ಮಪ್ಪ ನಾಯ್ಕ ಪೈಲಿಕಲ್ಲು, ಚಂದ್ರ ಗುಂಡ್ಯಡ್ಕ, ಪದ್ಮನಾಭ, ರೇವತಿ ಕೋಡಿಯಡ್ಕ, ಲಲಿತಾ ಪೆರಿಗೇರಿ, ಗೀತಾ ಪಾಪೆಮಜಲು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಮೋನಪ್ಪ ಬಿ ಸ್ವಾಗತಿಸಿ ವಂದಿಸಿದರು.












