ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ದುಗ್ಗಲಡ್ಕದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ – ಉದ್ಘಾಟನೆ

0

ಕ್ರೀಡೆ ಶಿಕ್ಷಣದ ಅವಿಭಾಜ್ಯ ಅಂಗ, ಕ್ಷಮತೆ ಕಾಪಾಡಲು ಉತ್ತಮ ಆಹಾರ ಪದ್ಧತಿ, ಜೀವನ ಶೈಲಿ ರೂಡಿಸಿ : ಟಿ. ಎಂ ಶಹೀದ್


ಪುತ್ತೂರು : ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಸುಳ್ಯ ದುಗ್ಗಲಡ್ಕ ಪ್ರೌಢಶಾಲಾ ಮೈದಾನದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ ನಡೆಯಿತು.


ಅಧ್ಯಕ್ಷತೆಯನ್ನು ಸಂಘಟನಾ ಸಮಿತಿ ಅಧ್ಯಕ್ಷೆ, ನಗರ ಪಂಚಾಯತ್ ಮಾಜಿ ಅಧ್ಯಕ್ಷೆ ಶೀಲಾವತಿ ಮಾಧವ ವಹಿಸಿದ್ದರು. ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿ ಕ್ರೀಡಾಪಟುಗಳ
ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ. ಎಂ ಶಹೀದ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ಕ್ರೀಡಾ ಕ್ಷಮತೆಯನ್ನು ಕಾಯ್ದು ಕೊಳ್ಳುವ ಸಾಮರ್ಥ್ಯ ಕಡಿಮೆಯಿದ್ದು ಅದನ್ನು ಉಳಿಸಲು ಉತ್ತಮ ಆಹಾರ ಪದ್ಧತಿ, ಜೀವನ ಶೈಲಿ ರೂಪಿಸಿ ಕೊಳ್ಳಬೇಕೆಂದರು. ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಕ್ರೀಡಾ ಧ್ವಜಾರೋಹಣ ಮಾಡಿದರು.


ಮುಖ್ಯ ಅತಿಥಿಗಳಾಗಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಭರತ್ ಮುಂಡೋಡಿ, ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಫ, ತಾಲೂಕು ಗ್ಯಾರಂಟಿ ಸಮಿತಿ ಶಾಹುಲ್ ಹಮೀದ್ ಕುತ್ತಾಮೊಟ್ಟೆ, ಕ್ಷೇತ್ರ ಶಿಕ್ಷಣಾಧಿಕಾರಿ ವೈ. ಎಸ್. ಹರಗಿ, ಅಕ್ಷರ ದಾಸೋಹ ಉಸ್ತುವಾರಿ ಅಧಿಕಾರಿಶ್ರೀಮತಿ ವೀಣಾ ಎಂ ಡಿ. ನಗರ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಶಶಿಕಲ ನೀರಾಬಿದಿರೆ, ತುಳು ಕುರಲ್ ಅಧ್ಯಕ್ಷ ಕೆ. ಟಿ. ವಿಶ್ವನಾಥ್, ಮೊದಲಾದವರು ಉಪಸ್ಥಿತರಿದ್ದರು.


ಮುಖ್ಯ್ಯೊಪಾಧ್ಯಾಯರಾದ ಸುರೇಶ್ ಸ್ವಾಗತಿಸಿ, ಸುಜಯ್ ವಿಷಯ ಪ್ರಸ್ತಾವನೆ ಗೈದರು. ಧನಂಜಯ ಮೆರ್ಕಜೆ ಮತ್ತು ಹರಿ ಪ್ರಸಾದ ಕೊಯಿoಗಾಜೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here