









ಸುಳ್ಯ: ಕಳೆದ 23 ವರ್ಷಗಳಿಂದ ಹಜ್ ಯಾತ್ರಾರ್ಥಿಗಳಿಗೆ ಉಚಿತ ಸೇವೆ ಸಲ್ಲಿಸುತ್ತಿರುವ ಸುಳ್ಯದ ಹಸನ್ ಹಾಜಿ ಅವರನ್ನು ಮಂಗಳೂರಿನಲ್ಲಿ ಸನ್ಮಾನಿಸಲಾಯಿತು.



ಪ್ರತಿ ವರ್ಷ ಹಜ್ ಯಾತ್ರೆ ಕೈಗೊಳ್ಳುವವರಿಗೆ ಪಾಸ್‌ಪೋರ್ಟ್ ಮಾಡಿಸುವುದರಿಂದ ಹಿಡಿದು ತರಬೇತಿ, ಮೆಡಿಕಲ್, ಲಸಿಕೆ, ಲಗೇಜ್ ಸೇರಿದಂತೆ ಎಲ್ಲ ಮಾಹಿತಿಗಳನ್ನು ಕಾಲಕಾಲಕ್ಕೆ ನೀಡಿ, ಯಾವುದೇ ಸರ್ವಿಸ್ ಚಾರ್ಜ್ ಪಡೆಯದೆ ಸೇವೆ ಸಲ್ಲಿಸುತ್ತಿರುವ ಸುಳ್ಯ ಬಾಳೆಮಕ್ಕಿಯ ಎ.ಆರ್. ಟ್ರೇಡರ್ಸ್ ಮಾಲಕ ಹಸನ್ ಹಾಜಿ ಅವರ ಪ್ರಾಮಾಣಿಕ ಸೇವೆಯನ್ನು ಪರಿಗಣಿಸಿ ಸನ್ಮಾನಕ್ಕೆ ಆಯ್ಕೆ ಮಾಡಲಾಗಿತ್ತು.
ಮಂಗಳೂರು ಹಜ್ ನಿರ್ವಹಣಾ ಸಮಿತಿ ಮತ್ತು ಹಜ್ ಸಮಿತಿ ಸದಸ್ಯರ ವತಿಯಿಂದ ಮುಡಿಪು ಎಜುಪಾರ್ಕ್‌ನಲ್ಲಿ ಜಿಲ್ಲೆಯ ಹಜ್ ಸೇವಕರಿಗೆ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನಕ್ಕೆ ಆಯ್ಕೆಯಾದ ಏಕೈಕ ವ್ಯಕ್ತಿ ಹಸನ್ ಹಾಜಿ.
ಹಜ್ ಯಾತ್ರೆಯ ಸಂದರ್ಭದಲ್ಲಿ ಹಜ್ ನಿರ್ವಹಣಾ ಸಮಿತಿಯಲ್ಲೂ ಕಾರ್ಯನಿರ್ವಹಿಸುವ ಹಸನ್ ಹಾಜಿ ಅವರು ಹಜ್ ಕ್ಯಾಂಪ್‌ನಲ್ಲೂ ಸಕ್ರಿಯರಾಗಿರುತ್ತಾರೆ.
ಕರ್ನಾಟಕ ರಾಜ್ಯ ಹಜ್ ಸಮಿತಿ ಸದಸ್ಯ ಅಸ್ಸಯ್ಯದ್ ಅಶ್ರಫ್ ತಂಙಳ್ ಆದೂರ್, ಹಜ್ ನಿರ್ವಹಣಾ ಸಮಿತಿ ಅಧ್ಯಕ್ಷ, ಯೆನೆಪೋಯ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಯೆನೆಪೋಯ ಅಬ್ದುಲ್ಲ ಕುಞ್ಞಿ ಅವರು ಸನ್ಮಾನಿಸಿದರು.










