ಇಂದಿರಾಗಾಂಧಿ ರಾಷ್ಟ್ರೀಯ ವೃದ್ದಾಪ್ಯ ವೇತನ ಯೋಜನೆ:
* ನಿರ್ಗತಿಕ ವೃದ್ಧರಿಗಾಗಿ ಮೀಸಲಾದ ಯೋಜನೆ
* ೬೦ ವರ್ಷಕ್ಕಿಂತ ಮೇಲ್ಪಟ್ಟವರಿಗೆ ೫೦೦ ರೂ. ಗಳ ಮಾಸಿಕ ವೇತನ
* ೬೫ ವರ್ಷಕ್ಕಿಂತ ಮೇಲ್ಪಟ್ಟವರಿಗೆ ೫೦೦ ರೂ.ಗಳ ಮಾಸಿಕ ವೇತನ
* ೮೦ ವರ್ಷಕ್ಕಿಂತ ಮೇಲ್ಪಟ್ಟವರಿಗೆ ೧೦೦೦ರೂ.ಗಳ ಮಾಸಿಕ ವೇತನ
ರಾಷ್ಟ್ರೀಯ ಕುಟುಂಬ ನೆರವು ಯೋಜನೆ: ಅರ್ಹತೆ:
* ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಬಿ.ಪಿ.ಎಲ್. ಕುಟುಂಬದ ಮುಖ್ಯಸ್ಥನ (primary Bread winner) ಮರಣ ಹೊಂದಿದಲ್ಲಿ ಆತನ ಕುಟುಂಬ ಅರ್ಹರು.
* ಮೃತರು ೧೮ರಿಂದ ೫೯ ವರ್ಷದೊಳಗಿನವರಾಗಿರಬೇಕು.
* ಮರಣ ಹೊಂದಿದ ಆರು ತಿಂಗಳ ಒಳಗಾಗಿ ನೆಮ್ಮದಿ ಕೇಂದ್ರದಲ್ಲಿ ಅರ್ಜಿಸಲ್ಲಿಸಬೇಕು.
* ಮರಣ ಪ್ರಮಾಣ ಪತ್ರ ಹಾಜರುಪಡಿಸಬೇಕು.
* ರೂ.೨೦೦೦೦/- ಗಳ ನೆರವು ನೀಡಲಾಗುವುದು.
* ಆ ಕುಟುಂಬದಲ್ಲಿ ದುಡಿಯುವ ವ್ಯಕ್ತಿಗಳಿದ್ದರೆ ಅರ್ಜಿ ತಿರಸ್ಕರಿಸಲಾಗುವುದು.
* ಪಲಾನುಭವಿಗಳು ಮರಣ ಹೊಂದಿದಲ್ಲಿ ಅವರ ಮಕ್ಕಳಿಗೆ ನೆರವನ್ನು ನೀಡಬಹುದು.
ನಿರ್ಗತಿಕ ವಿಧವಾ ವೇತನ ಯೋಜನೆ: ಅರ್ಹತೆ:
* ೧೮ ವರ್ಷಕ್ಕೆ ಮೇಲ್ಪಟ್ಟ ೬೦ ವರ್ಷದೊಳಗಿನ ವಿಧವೆಯರಿಗೆ ಈ ವೇತನ,
* ವೈದ್ಯಕೀಯ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಗಂಡನ ಮರಣ ಪ್ರಮಾಣ ಪತ್ರ ಹಾಗೂ ನಾಲ್ಕು ಭಾವ ಚಿತ್ರಗಳನ್ನು ಸಲ್ಲಿಸಬೇಕು.
* ಬಿಪಿಎಲ್ ಕುಟುಂಬದವರಾಗಿರಬೇಕು.
* ಬೇರೆ ಯೋಜನೆಗಳಲ್ಲಿ ವೇತನ ಪಡೆಯುವವರು ಅರ್ಹರಲ್ಲ.
* ಮರಣ ಹೊಂದುವವರೆಗೆ ಅಥವಾ ಪುನರ್ ವಿವಾಹವಾಗುವವರೆಗೆ ಮಾತ್ರ ಅರ್ಹರು.
ಅಂಗವಿಕಲ ವೇತನ ಯೋಜನೆ: ಅರ್ಹತೆ:
* ಬಿಪಿಎಲ್ ಕುಟುಂಬದವರಾಗಿರಬೇಕು. blind, deaf and Dum, Locomative Disability, Disability due to leprosy, mentally retarded, and mentally ill in certified b psychiatrist ಇವರು ಮಾತ್ರ ಅರ್ಹರು
* ಜಿಲ್ಲಾ ವೈದ್ಯಕೀಯ ಮಂಡಳಿಯಿಂದ ನೀಡಿದ ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕು.
* ಶೇಕಡಾ ೪೦ ರಿಂದ ೭೫ ರೊಳಗೆ ಅಂಗವಿಕಲತೆ ಹೊಂದಿರುವವರಿಗೆ ಮಾಸಿಕ ರೂ. ೫೦೦/-
* ೭೫% ಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿರುವವರಿಗೆ ಮಾಸಿಕ ರೂ.೧೬೦೦/-
* ಈ ವೇತನ ಪಡೆಯುವವರು ಬೇರೆ ಯೋಜನೆಗಳಿಗೆ ಅರ್ಹರಲ್ಲ.
ಸಂಧ್ಯಾ ಸುರಕ್ಷಾ ಯೋಜನೆ: ಅರ್ಹತೆ:
* ೬೫ವರ್ಷ ಮೇಲ್ಪಟ್ಟವರು ಅರ್ಹರು
* ವಾರ್ಷಿಕ ಆದಾಯ ರೂ.೨೦೦೦೦/- ಕ್ಕಿಂತ ಕಡಿಮೆ ಇರುವ ಪತಿ ಪತ್ನಿ ಇಬ್ಬರೂ ಅರ್ಹರು.
* ಇಬ್ಬರ ಬ್ಯಾಂಕ್ ಉಳಿತಾಯ ಠೇವಣಿಗಳ ಒಟ್ಟು ಮೊತ್ತ ರೂ.೧೦,೦೦೦/- ಕ್ಕಿಂತ ಹೆಚ್ಚಾಗಿರಬಾರದು.
* ಗಂಡು ಮಕ್ಕಳಿದ್ದು ಪೋಷಣೆ ಮಾಡುತ್ತಿಲ್ಲವೆಂದು ಕಂಡು ಬಂದಲ್ಲಿ ಈ ಯೋಜನೆ ಅಡಿಯಲ್ಲಿ ಅರ್ಹರು.
* ಯಾವುದೇ ರೀತಿಯ ಪಿಂಚಣಿಯನ್ನು ಪಡೆಯುತ್ತಿರಬಾರದು.
ಅಂತ್ಯ ಸಂಸ್ಕಾರ ಸಹಾಯ ಧನ:
* ಈ ಯೋಜನೆ ಜೂನ್- ೨೦೦೬ ರಿಂದ ರಾಜ್ಯ ಸರ್ಕಾರದ ಮೂಲಕ ಜಾರಿಗೆ ಬಂದಿದೆ.
* ಬಿ.ಪಿ.ಎಲ್ ಕುಟುಂಬದ ಯಾವುದೇ ವ್ಯಕ್ತಿ ಮರಣ ಹೊಂದಿದಾಗ ರೂ.೫೦೦೦/-ಗಳ ಧನ ಸಹಾಯ
* ಮೃತ ಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರ ಮಾಡಿದ ಆ ಕುಟುಂಬದ ಸದಸ್ಯರು ಅಥವಾ ವಾರಸುದಾರರು ಮೂರು ದಿನಗಳೊಳಗಾಗಿ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿ ಸಹಾಯ ಪಡೆಯಬಹುದು.
* ಧನ ಸಹಾಯವನ್ನು ಅಂತ್ಯ ಸಂಸ್ಕಾರದ ದಿನವೇ ನೀಡಬೇಕು.
ಆದರ್ಶ ವಿವಾಹ ಯೋಜನೆ:
* ಈ ಯೋಜನೆಯಡಿಯಲ್ಲಿ ಮದುವೆಯಾಗುವ ಪ್ರತಿಯೊಬ್ಬ ಯುವತಿಗೂ ರೂ.೧೦,೦೦೦/- ಗಳ ಪ್ರೋತ್ಸಾಹ ಧನವನ್ನು ಎರಡು ವರ್ಷಗಳ ಅವಧಿಗೆ ಠೇವಣಿ ರೂಪದಲ್ಲಿ ನೀಡಲಾಗುವುದು.
* ಪಟ್ಟಣ ಮತ್ತು ನಗರ ಪ್ರದೇಶದಲ್ಲಿ ಕನಿಷ್ಟ ೨೫ ಜೋಡಿಗಳು ಹಾಗೂ ಗ್ರಾಮಾಂತರ ಮತ್ತು ಹೋಬಳಿ ಪ್ರದೇಶದಲ್ಲಿ ಕನಿಷ್ಟ ೧೦ ಜೋಡಿಗಳ ಸರಳ ಸಾಮೂಹಿಕ ವಿವಾಹ ನಡೆದಿರಬೇಕು.
* ಈ ವಿವಾಹಗಳನ್ನು ಸಂಘಟಿಸುವವರಿಗೆ ಪ್ರತಿ ಜೋಡಿಗೆ ರೂ.೧೦೦/- ರಂತೆ ಪ್ರೋತ್ಸಾಹಧನ ನೀಡಲಾಗುವುದು.
* ವಿವಾಹ ನೊಂದಣಿ ಪ್ರಮಾಣ ಪತ್ರ, ಬ್ಯಾಂಕ್ ಖಾತೆ ಪುಸ್ತಕ ಹಾಗೂ ವಧು ವರರ ಭಾವಚಿತ್ರ ನೀಡಬೇಕು.
ಆಮ್ ಆದ್ಮಿ (ಜನಶ್ರೀ) ವಿಮಾ ಯೋಜನೆ:
* ಈ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಗ್ರಾಮ ಲೆಕ್ಕಾಧಿಕಾರಿ, ಹಾಗೂ ವಿಷಯ ನಿರ್ವಹಕರು ಪ್ರತ್ಯೇಕ ವಹಿಯೊಂದಿಗೆ ನಿರ್ವಹಿಸುತ್ತಾರೆ.
* ಗ್ರಾಮೀಣ ಭೂರಹಿತ ಕುಟುಂಬದ ೧೮-೫೯ ವರ್ಷದೊಳಗಿನ ಮುಖ್ಯಸ್ಥನ ಹೆಸರಿನಲ್ಲಿ ರೂ.೨೦೦/- ವಾರ್ಷಿಕ ವಿಮೆ
* ಫಲಾನುಭವಿಗಳಿಗೆ ಕಡ್ಡಾಯವಾಗಿ ಗುರುತಿನ ಚೀಟಿಯನ್ನು ನೀಡಬೇಕು.
* ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ ರೂ.೧೦೦/- ಗಳನ್ನು ಎಲ್.ಐ.ಸಿ ಗೆ ಕುಟುಂಬದ ಮುಖ್ಯಸ್ಥನ ಹೆಸರಿನಲ್ಲಿ ಪಾವತಿಸುತ್ತದೆ,
* ಆ ಕುಟುಂಬದ ಎರಡು ಮಕ್ಕಳಿಗೆ ೯-೧೨ನೇ ತರಗತಿಯವರೆಗೆ ಪ್ರತಿ ತಿಂಗಳಿಗೆ ರೂ. ೧೦೦/- ರಂತೆ ವಿದ್ಯಾರ್ಥಿ ವೇತನ ನೀಡಲಾಗುವುದು.
* ವಿದ್ಯಾರ್ಥಿಗಳು ಅನುತ್ತೀರ್ಣರಾದರೆ ವಿದ್ಯಾರ್ಥಿ ವೇತನ ನಿಲ್ಲಿಸಲಾಗುವುದು.
* ಕುಟುಂಬದ ಮುಖ್ಯಸ್ಥ ಮರಣ ಹೊಂದಿದ್ದಲ್ಲಿ ಪರಿಹಾರವನ್ನು ಈ ಕೆಳಕಂಡಂತೆ ನೀಡಲಾಗುವುದು.
೧) ನೈಸರ್ಗಿಕ ಸಾವು ರೂ.೩೦೦೦೦/-
೨) ಆಕಸ್ಮಿಕ ಸಾವು ರೂ.೭೫೦೦೦/-
೩) ಶಾಶ್ವತ ಅಂಗವಿಕಲತೆ ರೂ ೭೫೦೦೦/-
೪) ಭಾಗಶಃ ಅಂಗವಿಕಲತೆ ರೂ. ೩೭೫೦೦/-
* ಮೃತರ ಕುಟುಂಬದ ಸದಸ್ಯರು ಆರು ತಿಂಗಳ ಒಳಗಾಗಿ ದಾಖಲಾತಿಗಳೊಡನೆ ನಿಗದಿತ ಅರ್ಜಿಯನ್ನು ತಹಸೀಲ್ದಾರ್ರವರಿಗೆ ಸಲ್ಲಿಸಬೇಕು.
ಮನಸ್ವಿನಿ ಯೋಜನೆ:
* ಅವಿವಾಹಿತ ೪೦ ರಿಂದ ೬೪ ವರ್ಷದೊಳಗಿನ ಮಹಿಳೆಯರು ಅರ್ಹರಾಗಿರುತ್ತಾರೆ.
* ವಿಧವೆಯರು/ಪರಿತ್ಯಕ್ತ/ವಿಚ್ಚೇಧಿತ ಮಹಿಳೆಯರು ಅರ್ಹರು * ಬಿಪಿಎಲ್ ಕುಟುಂಬದವರಾಗಿರಬೇಕು.
* ೫೦೦/- ರೂಪಾಯಿಗಳ ಮಾಸಾಶನ ನೀಡಲಾಗುವುದು.
ಮೈತ್ರಿ ಯೋಜನೆ:
* ಲೈಂಗಿಕ ಅಲ್ಪಸಂಖ್ಯಾತ (ಹಿಜ್ರಾಗಳು, ಕೋಥಿಗಳು, ಎಫ್ ಟು ಎಂ, ಎಫ್ ಟು ಎಫ್, ಮಂಗಳಮುಖಿಯರು) ಅರ್ಹರಾಗಿರುತ್ತಾರೆ
* ಬಿಪಿಎಲ್ ಕುಟುಂಬದವರಾಗಿರಬೇಕು
* 500/- ರೂಪಾಯಿಗಳ ಮಾಸಾಶನ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ: ಕಂದಾಯ ಇಲಾಖೆ: ಮಿನಿ ವಿಧಾನ ಸೌಧ, ಪುತ್ತೂರು ಪೋ: 08251-230349