





ಉಪ್ಪಿನಂಗಡಿ: 28ನೇ ಅಖಿಲ ಭಾರತ ಅರಣ್ಯ ಕ್ರೀಡಾಕೂಟದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎ.ಸಿ.ಎಫ್.) ಪ್ರವೀಣ್ ಕುಮಾರ್ ಶೆಟ್ಟಿ 2 ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.


ನ. 12ರಿಂದ 15ರ ತನಕ ಉತ್ತರಕಾಂಡ್ ರಾಜ್ಯದ ಡೆಹರಾ ಡೂಂನಲ್ಲಿ ನಡೆದ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯದಿಂದ ಪ್ರತಿನಿಧಿಸಿದ್ದ ಪ್ರವೀಣ್ ಕುಮಾರ್ ಶೆಟ್ಟಿ ಗುಂಡೆಸೆತ ಮತ್ತು ಹ್ಯಾಮರ್ ತ್ರೋದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.





ಪುತ್ತೂರು ಸಾಮೆತ್ತಡ್ಕ ನಿವಾಸಿಯಾಗಿರುವ ಪ್ರವೀಣ್ ಕುಮಾರ್ ಶೆಟ್ಟಿ ಸುಳ್ಯ, ಮಂಗಳೂರು ಮೊದಲಾದೆಡೆ ಎ.ಸಿ.ಎಫ್. ಆಗಿ ಮತ್ತು ಜಿಲ್ಲಾ ಅರಣ್ಯ ವಿಶೇಷ ದಳದಲ್ಲಿ ಸೇವೆ ಸಲ್ಲಿಸಿದ್ದು, ಅತ್ಯಂತ ಪ್ರಾಮಾಣಿಕ ಮತ್ತು ಶಿಸ್ತಿನ ಅಧಿಕಾರಿ ಎಂದೇ ಗುರುತಿಸಿಕೊಂಡಿದ್ದಾರೆ.










