ಆಲಂತಾಯ: ಕಡಬ ತಹಶೀಲ್ದಾರ್ ’ ಗ್ರಾಮವಾಸ್ತವ್ಯ’

0

ಸಾಧ್ಯವಾದಷ್ಟೂ ಅರ್ಜಿಗಳು ಗ್ರಾಮದಲ್ಲೇ ಇತ್ಯರ್ಥ: ಅನಂತಶಂಕರ್

  • ಅರ್ಹರಿಗೆ ಸವಲತ್ತು ನೀಡಿ
  • ಗ್ರಾಮವಾಸ್ತವ್ಯದ ಆಶಯ ಈಡೇರಲಿ
  • ಅಕ್ರಮ-ಸಕ್ರಮ ಕಡತ ಶೀಘ್ರ ಮಂಜೂರುಗೊಳಿಸಿ
  • ದುಡ್ಡುಕೊಟ್ಟಲ್ಲಿ ಕಡತ ಮುಂದಿನ ಹಂತಕ್ಕೆ
  • ಶಾಲಾ ಜಮೀನು ಖಾಸಗಿ ವ್ಯಕ್ತಿಗಳಿಗೆ ಮಂಜೂರು

ನೆಲ್ಯಾಡಿ: ಕಡಬ ತಾ| ಕಂದಾಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕಡಬ ತಾಲೂಕು ತಹಶೀಲ್ದಾರ್ ಅನಂತಶಂಕರ್‌ರವರ ನೇತೃತ್ವದಲ್ಲಿ ಗ್ರಾಮ ವಾಸ್ಯವ್ಯ ಕಾರ್ಯಕ್ರಮ ಆಲಂತಾಯ ಗ್ರಾಮದ ಆಲಂತಾಯ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.

ಸಭೆ ಉದ್ಘಾಟಿಸಿ ಮಾತನಾಡಿದ ತಹಶೀಲ್ದಾರ್ ಅನಂತಶಂಕರ ಅವರು, ಗ್ರಾಮಕ್ಕೆ ತೆರಳಿ ಜನರ ಅಹವಾಲು, ಅರ್ಜಿಗಳನ್ನು ಸ್ವೀಕರಿಸಿ ಇದರಲ್ಲಿ ಸಾಧ್ಯವಾದಷ್ಟನ್ನು ಗ್ರಾಮದಲ್ಲೇ ಬಗೆಹರಿಸಬೇಕೆಂಬ ಉದ್ದೇಶದೊಂದಿಗೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮಾಡಲಾಗುತ್ತಿದೆ. ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಹೇಳಿದರು. ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಪಟೇರಿ ಮಾತನಾಡಿ, ಅಕ್ರಮ-ಸಕ್ರಮದ ಕಡತ ಮಂಜೂರುಗೊಳಿಸುವಲ್ಲಿ ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆಯವರು ಮುತುವರ್ಜಿ ವಹಿಸಿ ಕೆಲಸ ಮಾಡಬೇಕು. ಪ್ಲಾಟಿಂಗ್ ಸಮಸ್ಯೆಯನ್ನೂ ಬಗೆಹರಿಸಬೇಕೆಂದು ಹೇಳಿದರು. ಉಪಾಧ್ಯಕ್ಷೆ ಶೋಭಾಲತಾ ಸಂದರ್ಭೋಚಿತವಾಗಿ ಮಾತನಾಡಿದರು.

ಅರ್ಹರಿಗೆ ಸವಲತ್ತು ನೀಡಿ: ಕೃಷಿ ಇಲಾಖೆಯಿಂದ ಸವಲತ್ತು ಕೋರಿ ಅರ್ಜಿ ಸಲ್ಲಿಸುವ ಅರ್ಹ ಫಲಾನುಭವಿಗಳಿಗೆ ಸವಲತ್ತು ಸಿಗುತ್ತಿಲ್ಲ. ಅಧಿಕಾರಿಗಳು ತಮ್ಮ ಸಂಪರ್ಕದಲ್ಲಿರುವವರಿಗೆ ಮಾತ್ರ ಕರೆ ಮಾಡಿ ಮಾಹಿತಿ ನೀಡುತ್ತಾರೆ. ಕೊಟ್ಟವರಿಗೇ ಮತ್ತೆ ಸವಲತ್ತು ನೀಡುತ್ತಿದ್ದಾರೆ. ಇದರಿಂದಾಗಿ ಬಹುತೇಕ ರೈತರು ಅವಕಾಶ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಅರ್ಜಿ ನೀಡಿದ ರೈತರಿಗೆ ಸರದಿ ಪ್ರಕಾರ ಸವಲತ್ತು ವಿತರಣೆಗೆ ಕ್ರಮ ಕೈಗೊಳ್ಳಬೇಕು. ಸರಕಾರದ ಸವಲತ್ತು ಎಲ್ಲ ರೈತರಿಗೂ ಸಿಗಲಿ ಎಂದು ತಾ.ಪಂ.ಮಾಜಿ ಸದಸ್ಯೆ ತೇಜಸ್ವಿನಿಶೇಖರ ಗೌಡ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಅಽಕಾರಿ ಭರಮಣ್ಣವರ, ಫಲಾನುಭವಿಗಳಿಂದ ಅರ್ಜಿ ಸ್ವೀಕರಿಸುವ ವೇಳೆಯಲ್ಲಿಯೇ -ನ್ ನಂಬ್ರ ಪಡೆದುಕೊಂಡಿರುತ್ತೇವೆ. ಸರಕಾರದ ಸವಲತ್ತಿನ ಬಗ್ಗೆ ಎಲ್ಲರಿಗೂ ಮಾಹಿತಿ ಕೊಡುತ್ತೇವೆ ಎಂದರು.

ಗ್ರಾಮವಾಸ್ತವ್ಯದ ಆಶಯ ಈಡೇರಲಿ: ಗ್ರಾಮ ವಾಸ್ತವ್ಯ ಕಾರ್ಯಕ್ರಮ ಸರಕಾರಕ್ಕೆ ವರದಿ ನೀಡುವುದಕ್ಕೆ ಮಾತ್ರ ಸೀಮಿತಗೊಳ್ಳದೇ ಗ್ರಾಮ ವಾಸ್ತವ್ಯದ ಉದ್ದೇಶ ಈಡೇರುವಂತೆ ಆಗಬೇಕು ಎಂದು ಹೇಳಿದ ತಾ.ಪಂ.ಮಾಜಿ ಸದಸ್ಯೆ ತೇಜಸ್ವಿನಿಶೇಖರ ಗೌಡ ಅವರು, ೯೪ಸಿ, ಅಕ್ರಮ-ಸಕ್ರಮ ಕಡತ ವಿಲೇವಾರಿಯಲ್ಲಿ ವಿಳಂಬ ಮಾಡಬಾರದು. ಅರ್ಹರು ಇದರಿಂದ ವಂಚಿತರಾಗಬಾರದು. ಈ ವಿಚಾರದಲ್ಲಿ ಬಹಳಷ್ಟು ಜನರು ಜನಪ್ರತಿನಿಽಗಳ ಬಳಿ ದೂರು ತರುತ್ತಿದ್ದಾರೆ. ಆದರೆ ಕಂದಾಯ ಇಲಾಖೆಯ ಗ್ರಾಮ ಮಟ್ಟದ ಅಧಿಕಾರಿಗಳು ಜನಪ್ರತಿನಿಧಿಗಳಿಗೇ ಧಮ್ಕಿ ಹಾಕುತ್ತಿದ್ದಾರೆ. ಇಂತಹ ಕೆಲಸವನ್ನು ಯಾರೂ ಮಾಡಬಾರದು ಎಂದು ತೇಜಸ್ವಿನಿ ಗೌಡ ಹೇಳಿದರು.

ಅಕ್ರಮ-ಸಕ್ರಮ ಕಡತ ಮಂಜೂರುಗೊಳಿಸಿ: ಗೋಳಿತ್ತೊಟ್ಟು ಗ್ರಾಮದ ಸರ್ವೆ ನಂ.೧೪೩/೧ಪಿ೨ರಲ್ಲಿ ನಮ್ಮ ಸ್ವಾಧೀನದಲ್ಲಿರುವ ಜಾಗವನ್ನು ಸಕ್ರಮಗೊಳಿಸಲು ೧೯೯೮-೯೯ರಲ್ಲಿಯೇ ಅರ್ಜಿ ಸಲ್ಲಿಸಲಾಗಿದೆ. ಕಳೆದ ೮ ವರ್ಷಗಳಿಂದ ಅಲೆದಾಟ ನಡೆಸುತ್ತಿದ್ದೇವೆ. ಆದರೆ ಈ ತನಕವೂ ಜಾಗ ಮಂಜೂರಾತಿ ಆಗಿಲ್ಲ. ಆದರೆ ಇತ್ತೀಚಿನ ವರದಿ ಪ್ರಕಾರ ಸರ್ವೆ ನಂ.೧೪೩/೧ಪಿ೨ರಲ್ಲಿ ಉಳಿಕೆ ಜಾಗ ಇಲ್ಲ ಎಂಬ ಮಾಹಿತಿ ಸಿಕ್ಕಿದೆ. ಆದ್ದರಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡ ನ್ಯಾಯ ಒದಗಿಸಿಕೊಡುವಂತೆ ಪುರ ನಿವಾಸಿ ಗುಲಾಬಿಯವರ ಪರವಾಗಿ ಸುಭಾಷ್‌ರವರು ತಹಶೀಲ್ದಾರ್‌ಗೆ ಮನವಿ ಮಾಡಿದರು. ಅರಣ್ಯ ಹಾಗೂ ಕಂದಾಯ ಇಲಾಖೆಯಿಂದ ಜಂಟಿ ಸರ್ವೆ ನಡೆಸಿ ಕಡತ ವಿಲೇವಾರಿಗೆ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧರಿಸಲಾಯಿತು.

ದುಡ್ಡುಕೊಟ್ಟಲ್ಲಿ ಕಡತ ಮುಂದಿನ ಹಂತಕ್ಕೆ : ಅಕ್ರಮ ಸಕ್ರಮದಲ್ಲಿ ಅರ್ಜಿ ಸಲ್ಲಿಸಿರುವ ಬಹಳಷ್ಟು ಗ್ರಾಮಸ್ಥರ ಅರ್ಜಿಗಳು ಪೆಂಡಿಂಗ್ ಇವೆ. ಅಧಿಕಾರಿಗಳಿಗೆ ದುಡ್ಡುಕೊಟ್ಟಲ್ಲಿ ಕಡತ ಮಂಜೂರಾತಿಗೆ ಮುಂದಿನ ಹಂತಕ್ಕೆ ಮೂವ್ ಆಗುತ್ತದೆ. ದುಡ್ಡು ಕೊಡದೇ ಇದ್ದಲ್ಲಿ ನಾನಾ ಕಾರಣವೊಡ್ಡಿ ಪೆಂಡಿಂಗ್ ಇಡಲಾಗುತ್ತಿದೆ ಎಂದು ತಾ.ಪಂ. ಮಾಜಿ ಸದಸ್ಯೆ ತೇಜಸ್ವಿನಿಶೇಖರ ಗೌಡ ಆರೋಪಿಸಿದರು. ಆರ್‌ಎಫ್-ಒ ಮಂಜುನಾಥ್ ಮಾತನಾಡಿ, ಆಲಂತಾಯ ಗ್ರಾಮಕ್ಕೆ ಸಂಬಂಽಸಿದಂತೆ ಅರಣ್ಯ ಇಲಾಖೆಗೆ ೫ ಕಡತಗಳು ಬಂದಿವೆ. ಈ ಬಗ್ಗೆ ಗಡಿಗುರುತು ಮಾಡಿಕೊಡುವಂತೆ ಕಂದಾಯ ಇಲಾಖೆಗೆ ಕಡತ ರವಾನಿಸಲಾಗಿದೆ. ಈ ಕಡತ ಮತ್ತೆ ಅರಣ್ಯ ಇಲಾಖೆಗೆ ಬಂದಿಲ್ಲ ಎಂದರು. ಗಡಿ ಗುರುತು ಮಾಡಿಕೊಟ್ಟಲ್ಲಿ ಕಡತ ಮಂಜೂರಾತಿಗೆ ಸಂಬಂಽಸಿ ಎನ್‌ಒಸಿ ಕೊಡಬಹುದು ಎಂದು ಹೇಳಿದರು.

ಶಾಲಾ ಜಮೀನು ಖಾಸಗಿ ವ್ಯಕ್ತಿಗಳಿಗೆ ಮಂಜೂರು: ಆಲಂತಾಯ ಸರಕಾರಿ ಹಿ.ಪ್ರಾ.ಶಾಲೆಗೆ ಸೇರಿದ ೧.೫೬ ಎಕ್ರೆ ಜಾಗದಲ್ಲಿ ೯ ಸೆಂಟ್ಸ್ ಹಾಗೂ ೦.೪೨ ಎಕ್ರೆ ಜಾಗದಲ್ಲಿ ೯ ಸೆಂಟ್ಸ್ ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಲಾಗಿದೆ. ಆದ್ದರಿಂದ ಶಾಲಾ ಜಾಗವನ್ನು ಮೊದಲಿನ ಕ್ರಮದಂತೆ ಮಾಡಿಕೊಡುವಂತೆ ಎಸ್‌ಡಿಎಂಸಿ ವತಿಯಿಂದ ತಹಶೀಲ್ದಾರ್‌ಗೆ ಮನವಿ ಮಾಡಲಾಯಿತು. ಆಲಂತಾಯ ಸರಕಾರಿ ಹಿ.ಪ್ರಾ.ಶಾಲೆಗೆ ೨೦೨೪ರಲ್ಲಿ ೧೦೦ ವರ್ಷ ಪೂರ್ಣಗೊಳ್ಳಲಿದೆ. ಇಲ್ಲಿ ಮಕ್ಕಳ ಸಂಖ್ಯೆ ೧೦೦ಕ್ಕಿಂತ ಹೆಚ್ಚು ಇರುವುದರಿಂದ ಶಾಲೆಗೆ ಮೂರು ತರಗತಿ ಕೊಠಡಿಗಳು, ರಂಗಮಂದಿರ, ಗಂಡು ಮಕ್ಕಳಿಗೆ ಶೌಚಾಲಯಕ್ಕೆ ಅನುದಾನ ಒದಗಿಸಿಕೊಡಲು ಕ್ರಮ ಕೈಗೊಳ್ಳುವಂತೆ ಎಸ್‌ಡಿಎಂಸಿ ವತಿಯಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಗಿದೆ.‌

ತಡೆಗೋಡೆ ನಿರ್ಮಿಸಿ: ಆಲಂತಾಯ-ಗೋಳಿತ್ತೊಟ್ಟು ರಸ್ತೆಯ ಚಿಲುಮೆ ಸಮೀಪ ತಿರುವಿನಲ್ಲಿ ಅಪಘಾತಗಳು ಪದೇ ಪದೇ ನಡೆಯುತ್ತಿವೆ. ಇಲ್ಲಿ ತಡೆಗೋಡೆ ನಿರ್ಮಿಸಿ ಅಪಘಾತ ತಪ್ಪಿಸಬೇಕೆಂದು ಗ್ರಾಮಸ್ಥರು ಲೋಕೋಪಯೋಗಿ ಇಲಾಖೆ ಅಽಕಾರಿಗಳಿಗೆ ಮನವಿ ಮಾಡಿದರು. ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿಶಿರ, ಆರ್‌ಎ-ಒ ಮಂಜುನಾಥ ಎನ್., ಪಶುವೈದ್ಯಾಧಿಕಾರಿ ಡಾ.ಅಜಿತ್, ತಾ.ಪಂ.ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ, ಕೃಷಿ ಅಧಿಕಾರಿ ಭರಮಣ್ಣವರ, ಸಮಾಜ ಕಲ್ಯಾಣ ಇಲಾಖೆಯ ವಿಠಲ್, ಭೂದಾಖಲೆಗಳ ನಿರ್ದೇಶಕರ ಕಡಬ ಕಚೇರಿಯ ತಪಾಸಕ ಎನ್.ಚಂದ್ರಶೇಖರ ಮೂರ್ತಿ, ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಪುಷ್ಪಾವತಿ ಡಿ.ಎಂ., ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇಲಾಖಾವಾರು ಮಾಹಿತಿ ನೀಡಿದರು. ಉಪತಹಶೀಲ್ದಾರ್ ಗೋಪಾಲ ಕೆ.,ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಂದಾಯ ನಿರೀಕ್ಷಕ ಪೃಥ್ವಿ ವಂದಿಸಿದರು. ಗೋಳಿತ್ತೊಟ್ಟು ಗ್ರಾ.ಪಂ.ಪಿಡಿಒ ಜಗದೀಶ್, ಕಾರ್ಯದರ್ಶಿ ಚಂದ್ರಾವತಿ, ಗ್ರಾಮಕರಣಿಕರಾದ ಪ್ರೇಮಾ ಮ್ಯಾಗೇರಿ, ಅಶ್ವಿನಿ, ಗ್ರಾಮಸಹಾಯಕರಾದ ಆನಂದ ಗೌಡ, ನವ್ಯಾಶ್ರೀ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ನೇಮಣ್ಣ ಪೂಜಾರಿ ಪಾಲೇರಿ, ರಮೇಶ್ ಬಿ.ಜಿ.ಅಡೀಲು, ಕೆ.ಎಸ್.ಅಬ್ದುಲ್ ನಾಸೀರ್ ಸಮರಗುಂಡಿ ಅವರು ಊಟೋಪಚಾರಕ್ಕೆ ಹಾಗೂ ತುಕಾರಾಮ ಗೌಡ ಗೋಳಿತ್ತೊಟ್ಟುರವರು ಆಸನ ವ್ಯವಸ್ಥೆಗೆ ಚೆಯರ್ ನೀಡಿ ಸಹಕರಿಸಿದರು.

LEAVE A REPLY

Please enter your comment!
Please enter your name here