ದೇಶ ಭಕ್ತಿಯನ್ನು ಉದ್ದೀಪನಗೊಳಿಸುವ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಗಣೇಶೋತ್ಸವ- ಪ್ರತಿಷ್ಟೆ – ಭಗವಧ್ವಜದ ಮೂಲಕ ಚಾಲನೆ

0

ಹಿಂದುಗಳು ಬುಸುಗುಡದಿದ್ದರೆ ನಮ್ಮ ನೆಲದಲ್ಲೇ ಪರಕೀಯರಾಗುತ್ತಾರೆ – ಮೂಲಚಂದ್ರ

ಗಣೇಶೋತ್ಸವ ಹಿಂದುತ್ವದ ರಕ್ಷಣೆಗೆ ಸಹಕಾರಿಯಾಗಲಿದೆ – ಡಾ.ಎಂ.ಕೆ.ಪ್ರಸಾದ್

* ವೇದಿಕೆಯ ಬಲ ಬದಿಯಲ್ಲಿ ವರ್ಣರಂಜಿತ ರಥದಲ್ಲಿ ಕೂತ ಶ್ರೀ ಗಣೇಶನ ವಿಗ್ರಹ

* ದಿ| ಭುಜಂಗ ಗೌಡ ವೇದಿಕೆಯಲ್ಲಿ ರಾರಾಜಿಸಿದ ದೇಶ ಭಕ್ತ ಸಾವರ್ಕರ್ ಭಾವ ಚಿತ್ರ

* ವೇದಿಕೆ ಮಧ್ಯ ಭಾಗದಲ್ಲಿ ಗಣೇಶೋತ್ಸವದ ಮೂಲ ಪುರುಷ ಬಾಲಗಂಗಾಧರ ತಿಲಕ್ ಭಾವ ಚಿತ್ರ

* ದಿ| ದಿನೇಶ್ ಶೆಟ್ಟಿ, ದಿ| ಇಂದಾಜೆ ಗಣೇಶ್ ನಾಯಕ್ ಸಭಾಂಗಣದಲ್ಲಿ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದವರ ಭಾವ ಚಿತ್ರಗಳು

* ವೇದಿಕೆ ಬಲ ಭಾಗದಲ್ಲಿ ಭಾರತೀಯ ಸೈನ್ಯ, ಸ್ವಾತಂತ್ರ್ಯದ ಅಮೃತಮಹೋತ್ಸವ, ವಿಜ್ಞಾನ, ತಂತ್ರಜ್ಞಾನದ ಚಿತ್ರಗಳು

* ಸೆ.3ಕ್ಕೆ ವೈವಿಧ್ಯಮಯ ಸ್ತಬ್ಧ ಚಿತ್ರದೊಂದಿಗೆ ಶ್ರೀ ಗಣೇಶ ವಿಗ್ರಹದ ವೈಭವದ ಶೋಭಾಯಾತ್ರೆ


ಪುತ್ತೂರು: ವಿಘ್ನ ವಿನಾಯಕನ ಆರಾಧನೆಯ ಜೊತೆಗೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದ ಮತ್ತು ದೇಶದ ವಿಜ್ಞಾನ, ಆರ್ಥಿಕ, ಸೈನ್ಯದ ಬಲವನ್ನು ಪ್ರದರ್ಶಿಸುವ ಮೂಲಕ ದೇಶ ಭಕ್ತಿಯನ್ನು ಉದ್ದೀಪನಗೊಳಿಸುತ್ತಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ನಡೆಯುವ 56ನೇ ವರ್ಷದ ನಾಲ್ಕು ದಿನದ ಗಣೇಶೋತ್ಸವವು ಆ.31ರಂದು ಚಾಲನೆ ನೀಡಲಾಯಿತು. ಬೆಳಿಗ್ಗೆ ಬ್ರಹ್ಮಶ್ರೀ ವೇ ಮೂ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಶ್ರೀ ಗಣೇಶ ವಿಗ್ರಹದ ಪ್ರತಿಷ್ಠೆ ನಡೆಯಿತು. ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ದಂಪತಿ ಪೂಜೆಯಲ್ಲಿ ಪಾಲ್ಗೊಂಡರು.

ಹಿಂದುಗಳು ಬುಸುಗುಡದಿದ್ದರೆ ನಮ್ಮ ನೆಲದಲ್ಲೇ ಪರಕೀಯರಾಗುತ್ತಾರೆ:

ಶ್ರೀ ಗಣೇಶನ ಪ್ರತಿಷ್ಠೆ ಬಳಿಕ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಭಾ ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂ ಸೇವಕ ಮೂಲಚಂದ್ರ ನಾಯಕ್ ಧ್ವಜಾರೋಹಣ ಮಾಡಿ, ಭಾರತ ಮಾತೆಯ ಮತ್ತು ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಪಾಪ ಪರಿಮಾರ್ಜನೆ, ಪುಣ್ಯ ಸಂಪಾದನೆ, ಸಂಕಟ ಬಂದಾಗ ವೆಂಕಟರಮಣ, ಇವಷ್ಟಕ್ಕೆ ನಮ್ಮ ಭಾವುಕತೆಯನ್ನು ಭಕ್ತಿಯನ್ನು ಧಾರ್ಮಿಕ ಚಿಂತನೆಯನ್ನು ಸೀಮಿತಗೊಳಿಸಿದರೆ ಸಾಲದು ಇದಕ್ಕೆಲ್ಲಕ್ಕಿಂತ ಇನ್ನೂ ಒಂದು ಹೆಜ್ಜೆ ಮುಂದೆ ಆಲೋಚನೆ ಮಾಡುವ ಅನಿವಾರ್ಯತೆ ಬಂದಿದೆ. ಗಣೇಶೋತ್ಸವ ಅಚರಿಸಲು ಕೂಡಾ ಯಾರಿಂದಲೋ ಅನುಮತಿ ಪಡೆಯುವ ಪರಿಸ್ಥಿತಿ ಉಂಟಾಗಿದೆ. ಇದು ಹಿಂದುಸ್ಥಾನವಾಗಿರುವ ಭಾರತದಲ್ಲಿ ಯಾವ ಸ್ಥಿತಿಯನ್ನು ಎದುರಿಸುತ್ತೇವೆ ಎಂದು ತುಂಬಾ ಗಂಭೀರತೆಯನ್ನು ಅರಿಯಬೇಕು. ಹಿಂದುಗಳು ಬಹುಸಂಖ್ಯಾತರರಾಗಿರುವ ದೇಶವಲ್ಲವಾದ ಸಿಂಗಾಪುರದಲ್ಲೂ ಹಿಂದು ದೇವರ ಗಣಪತಿಯನ್ನು ನೋಟಿನಲ್ಲಿ ಮುದ್ರಿಸುತ್ತಾರೆ. ಶಾಂತಿದೂತರ ರಾಷ್ಟ್ರದಲ್ಲಿ ಗರುಡಾ ಏರ್‌ಲೈನ್ಸ್ ಇದೆ. ಆದರೆ ನಮ್ಮ ದೇಶದಲ್ಲಿ ಇದಕ್ಕೆ ವ್ಯತಿರಿಕ್ತವಾಗಿದೆ. ಈ ನಿಟ್ಟಿನಲ್ಲಿ ಹಿಂದುಗಳು ಬುಸುಗುಡುವ ಸ್ಥಿತಿಯನ್ನು ಮೈಗೂಡಿಸಬೇಕು. ಇಲ್ಲವಾದರೆ ನಮ್ಮ ನೆಲದಲ್ಲೇ ನಾವು ಪರಕೀಯರಾಗುತ್ತೇವೆ ಎಂದು ಅವರು ಹೇಳಿದ ಅವರು ನಮ್ಮೆಲ್ಲ ದೇವತೆಗಳ ಕೈಯಲ್ಲೂ ಶಸ್ತ್ರಗಳಿವೆ. ದುಷ್ಟ ಶಿಕ್ಷಕ, ಶಿಷ್ಟ ರಕ್ಷಣೆ ಸಂದರ್ಭ ಬಂದಾಗ ಅದನ್ನು ನಾವು ಕೂಡಾ ಉಪಯೋಗಿಸಬೇಕು. ನಮ್ಮ ಚಿಂತನೆಯನ್ನು ದೈವ ಭಕ್ತಿಯ ಮೂಲಕ ಪುಣ್ಯ ಸಂಪಾದನೆ ಮಾತ್ರವಲ್ಲ ಸಮಸ್ತ ವಿಘ್ನ ದೂರ ಮಾಡಲು ವಿಸ್ತೃತಗೊಳಿಸಬೇಕೆಂದರು.

ಗಣೇಶೋತ್ಸವ ಹಿಂದುತ್ವದ ರಕ್ಷಣೆಗೆ ಸಹಕಾರಿಯಾಗಲಿದೆ:

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಎಂ.ಕೆ ಪ್ರಸಾದ್ ಅವರು ಮಾತನಾಡಿ ನಮ್ಮ ಸಂಸಾರವನ್ನು ಪ್ರೀತಿ ಮಾಡಿದ ಹಾಗೆ ದೇಶವನ್ನು ಕೂಡಾ ಪ್ರೀತಿ ಮಾಡಬೇಕು. ಹಿಂದುತ್ವದ ಬಗ್ಗೆ ಮಕ್ಕಳಿಗೆ ಜ್ಞಾನ ಕೊಡಬೇಕು. ಈ ನಿಟ್ಟಿನಲ್ಲಿ ಗಣೇಶೋತ್ಸವ ಹಿಂದುತ್ವದ ರಕ್ಷಣೆಗೆ ಮತ್ತು ಮಕ್ಕಳಿಗೆ ದೇಶ ಭಕ್ತಿಯನ್ನು ಮೂಡಿಸುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಹಿಂದುತ್ವವನ್ನು ಒಟ್ಟು ಮಾಡಿ ಭಾರತವನ್ನು ಹಿಂದು ರಾಷ್ಟ್ರವನ್ನಾಗಿ ಪರಿವರ್ತನೆ ಮಾಡುವಲ್ಲಿ ಶ್ರಮಿಸುತ್ತಿದ್ದಾರೆ. ಪಾಕಿಸ್ತಾನದಲ್ಲಿ, ಅಪಘ್ನಾನಿಸ್ತಾನದಲ್ಲಿರುವ ಹಿಂದುಗಳನ್ನು, ಕ್ರಿಶ್ಚಿಯನ್, ಸಿಖ್, ಪಾರ್ಸಿಗಳನ್ನು ಕರೆದು ಭಾರತ ಬಲಿಷ್ಠ ಹಿಂದು ರಾಷ್ಟ್ರವನ್ನಾಗಿ ಮಾಡಬೇಕು. ಇದರ ಜೊತೆಗೆ 2047ಕ್ಕೆ ಈ ದೇಶವನ್ನು ಮುಸ್ಲಿಂಕರಣ ಮಾಡುತ್ತಾರೆಂಬ ಘೋಷಣೆಯನ್ನು ನಾವು ಗಂಭೀರವಾಗಿ ಪರಿಗಣಿಸಬೇಕು. ಅಂದು ನೆಹರುರವರು ಪಾಕಿಸ್ತಾನವನ್ನು ಮುಸ್ಲಿಂರಿಗೆ ಕೊಟ್ಟಾಗ ಭಾರತವನ್ನು ಹಿಂದು ರಾಷ್ಟ್ರವೆಂದು ಘೋಷಣೆ ಮಾಡದ ಕಾರಣ ಸ್ವಾರ್ಥ ಮಾಡಿದರ ಪರಿಣಾಮ ಇವತ್ತು ಈದ್ಗಾ ಮೈದಾನದಲ್ಲಿ ತೊಂದರೆ ಆಗುತ್ತಿದೆ. ನಮ್ಮ ದೇಶದೊಳಗೆ ನಮ್ಮ ದೇವರನ್ನು ಪೂಜೆ ಮಾಡಲು ಆಗುವುದಿಲ್ಲ ಎಂದಾದರೆ ಈ ಕುರಿತು ನಾವು ಗಂಭೀರವಾಗಿ ಚಿಂತನೆ ಮಾಡಬೇಕು. ನಾವೆಲ್ಲ ಹಿಂದುಗಳ ಒಂದಾಗಬೇಕು ಎಂದರು. ‌

ವೇದಿಕೆಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಶಾಂಕ ಜೆ ಕೊಟೇಚಾ, ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಎಸ್ ಉಪಸ್ಥಿತರಿದ್ದರು. ವಿಜಯ ದಯಾನಂದ ಪ್ರಾರ್ಥಿಸಿದರು. ಪ್ರವೀಣ್ ಅಚಾರ್ಯ ಸ್ವಾಗತಿಸಿ, ಸಮಿತಿ ಖಜಾಂಜಿ ನೀಲಂತ್ ಕಾರ್ಯಕ್ರಮ ನಿರೂಪಿಸಿದರು. ಗಿತೇಶ್ ವಂದಿಸಿದರು. ಗಣೇಶೋತ್ಸವ ಸಮಿತಿಯಲ್ಲಿ ಸುಮಾರು 17 ವರ್ಷ ಕಾರ್ಯದರ್ಶಿಯಾಗಿ ಸೇವೆ ನೀಡಿದ ದಿ| ಇಂದಾಜೆ ಗಣೇಶ್ ನಾಯಕ್ ಮತ್ತು ಸಮಿತಿ ಸಕ್ರೀಯ ಸದಸ್ಯ ದಿ| ದಿನೇಶ್ ಶೆಟ್ಟಿಯವರ ನಿಧನದ ಹಿನ್ನೆಯಲ್ಲಿ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಸಭಾ ಕಾರ್ಯಕ್ರಮದ ಅರಂಭದಲ್ಲಿ ಒಂದು ನಿಮಿಷ ಮೌನ ಪ್ರಾರ್ಥನೆ ಮಾಡಲಾಯಿತು. ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ರಾಮಚಂದ್ರ ಕಾಮತ್, ಶೇಖರ್ ನಾರಾವಿ, ಬಿ.ಐತ್ತಪ್ಪ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಗಣೇಶ ವಿಗ್ರಹ ರಚನೆ ಮತ್ತು ಗೀತ ಕಂಠ ಪಾಠ ಸ್ಪರ್ಧೆಗಳು ನಡೆಯಿತು.

ಇತ್ತೀಚೆಗೆ ವೀರ ಸಾವರ್ಕರ್ ಪೊಟೋದ ಬಗ್ಗೆ ಭಾರಿ ಚರ್ಚೆಯಾಗುತಿದ್ದಂತೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಡಾ.ಎಂ.ಕೆ.ಪ್ರಸಾದ್ ಅವರ ಗೌರವಾಧ್ಯಕ್ಷತೆಯಲ್ಲಿ ಜರುಗುವ ಗಣೇಶೋತ್ಸವದಲ್ಲಿ ಪ್ರತಿ ವರ್ಷದಂತೆ ವೀರ ಸಾವರ್ಕರ್ ಸೇರಿದಂತೆ ಬಾಲಗಂಗಾಧರ್ ತಿಲಕ್ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಭಾವ ಚಿತ್ರ ಅಳವಡಿಸಲಾಗಿದೆ. ವೀರ ಸಾವರ್ಕರ್ ಅವರ ಭಾವ ಚಿತ್ರವನ್ನು ಪ್ರಧಾನ ವೇದಿಕೆಯ ಎಡಗಡೆಯಲ್ಲಿ ದೊಡ್ಡ ಗಾತ್ರದಲ್ಲಿ ಅಳವಡಿಸಲಾಗಿದ್ದು, ಉಳಿದಂತೆ ಸ್ವಾತಂತ್ರ್ಯ ಹೋರಾmಗಾರರ ಭಾವ ಚಿತ್ರಗಳನ್ನು ಸಭಾಂಗಣದ ಹಲವು ಕಡೆಗಳಲ್ಲಿ ಅಳವಡಿಸಲಾಗಿದೆ. ದೇಶದ ಸೈನಿಕರ ಹೋರಾಟ, ಬಲಿದಾನ, ಯುದ್ದ ನೌಕೆಗಳು, ತಂತ್ರಜ್ಞಾನ, ವಿಜ್ಞಾನ ಕುರಿತ ಚಿತ್ರಗಳನ್ನು ವೇದಿಕೆಯ ಬಲಭಾಗದಲ್ಲಿ ಅಳವಡಿಸಲಾಗಿದೆ.

LEAVE A REPLY

Please enter your comment!
Please enter your name here