ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಸ್ಥಾಪಕರ ದಿನಾಚರಣೆ – ಸ್ಥಾಪಕ ಪ್ರವರ್ತಕರಿಗೆ ಗೌರವ

0

ಸ್ಥಾಪಕರ ದಿನಾಚರಣೆ ಅಂಗವಾಗಿ ಕನಿಷ್ಠ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕರಪತ್ರ ಬಿಡುಗಡೆ

  • ಅವಲೋಕನ ಮಾಡಿ ತೀರ್ಮಾನ ಕೈಗೊಳ್ಳಲು ಸ್ಥಾಪಕರ ದಿನಾಚರಣೆ ಅಗತ್ಯ- ಸಂಜೀವ ಮಠಂದೂರು
  • ಬಂಧುತ್ವ ಉಳಿಯಲು ಸ್ಥಾಪಕರ ದಿನಾಚರಣೆ ಅಗತ್ಯ – ಮೋಹನ್ ಗೌಡ ಇಡ್ಯಡ್ಕ
  • ಕಾಣಿಯೂರಿನಲ್ಲಿ ಡಿಸೆಂಬರ್ ಒಳಗೆ ನೂತನ ಶಾಖೆ ಪ್ರಾರಂಭ- ಚಿದಾನಂದ ಬೈಲಾಡಿ ಘೋಷಣೆ
  • 20 ವರ್ಷಗಳಲ್ಲಿ ಅಭೂತಪೂರ್ವ ಸಾಧನೆ ಕಂಡಿದ್ದೇವೆ – ವಿಶ್ವನಾಥ ಗೌಡ ಕೆ
  • ಸಂಸ್ಥೆ ಹುಟ್ಟು ಹಾಕಿದವರನ್ನು ನೆನಪಿಸುವುದು ಅಗತ್ಯ – ಯು.ಪಿ.ರಾಮಕೃಷ್ಣ

ಪುತ್ತೂರು: ವ್ಯಕ್ತಿಗೆ ಅಥವಾ ಸಂಸ್ಥೆ ಬಗ್ಗೆ ಅವಲೋಕನ ಮಾಡಿದಾಗ ಎಲ್ಲಿಂದ ಬಂದಿದ್ದೇವೆ ಎಲ್ಲಿಗೆ ಹೋಗಬೇಕಾಗಿದೆ ಎಂದು ತೀರ್ಮಾನ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಸ್ಥಾಪಕರ ದಿನಾಚರಣೆ ಬಹಳ ಮುಖ್ಯ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಪುತ್ತೂರು ಕಡಬ ಸೇರಿದಂತೆ 7 ಶಾಖೆಗಳನ್ನು ಹೊಂದಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಎಪಿಎಂಸಿ ಮಾಣಾಯಿ ಆರ್ಚ್‌ನ ಪ್ರಧಾನ ಕಚೇರಿಯಲ್ಲಿ ಸೆ.2ರಂದು ನಡೆದ ಸಂಘದ ಸ್ಥಾಪಕ ದಿನಾಚರಣಾ ಕಾರ್ಯಕ್ರಮ ಉದ್ಘಾಟಿಸಿ, ಕೇಕ್ ಕತ್ತರಿಸಿ ಮಾತನಾಡಿದರು. ರಾಷ್ಟ್ರೀಕೃತ ಬ್ಯಾಂಕ್‌ಗಳು ಆರಂಭಗೊಂಡಾಗ ಆರಂಭದ ದಿನಗಳಲ್ಲಿ ಫೌಂಡರ‍್ಸ್ ಬ್ರಾಂಚ್‌ಗಳನು ಸ್ಥಾಪನೆ ಮಾಡುವ ಕೆಲಸ ನಡೆಯುತ್ತಿತ್ತು. ಇವತ್ತು ಸಹಕಾರಿ ಸಂಘವು ಇಂತಹ ಸ್ಥಾಪಕರ ದಿನಾಚರಣೆ ಆಚರಣೆ ಮಾಡುವುದು ಬೆಳವಣಿಗೆ ದೃಷ್ಟಿಯಿಂದ ಉತ್ತಮ ವಿಚಾರ. ಸಂಸ್ಥೆ ಆರಂಭವಾದಾಗ ಒಂದಷ್ಟು ಉದ್ದೇಶ ಇಟ್ಟುಕೊಂಡಿದೆ. ಆ ಉದ್ದೇಶ ಈಡೇರಿಸಿದ ಸಂಭ್ರಮ ಮತ್ತು ಅದರ ಜೊತೆಯಲ್ಲಿ ಇನ್ನಷ್ಟು ವಿಸ್ತಾರ ಮಡುವ ಗುರಿಯನ್ನು ಮುಂದಿನ ವರ್ಷ ಇನ್ನೊಂದಷ್ಟು ಶಾಖೆಗಳನ್ನು ತೆರೆಯುವ ಮೂಲಕ ಸಾಧನೆ ಕೈಗೂಡಲಿ ಎಂದರು.

ಬಂಧುತ್ವ ಉಳಿಯಲು ಸ್ಥಾಪಕರ ದಿನಾಚರಣೆ ಅಗತ್ಯ

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಮುಖ್ಯ ಪ್ರವರ್ತಕರಾಗಿದ್ದು, ಪ್ರಸ್ತುತ ನಿರ್ದೇಶಕರಾಗಿರುವ ಮೋಹನ್ ಗೌಡ ಇಡ್ಯಡ್ಕ ಅವರು ಸ್ಥಾಪಕರ ದಿನಾಚರಣೆ ಅಂಗವಾಗಿ ಕನಿಷ್ಠ ಬಡ್ಡಿ ದರದಲ್ಲಿ ಸಾಲ ಸೌಲಭ್ಯದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿ ಬಂಧುತ್ವ ಉಳಿಯಲು ಸ್ಥಾಪಕರ ದಿನಾಚರಣೆ ಅಗತ್ಯ. ಇದರ ಜೊತೆಗೆ ಸಂಘದ ಆರಂಭದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕೆಲಸ ಮಾಡಿದವರಿದ್ದಾರೆ. ಅವರೆಲ್ಲ ಎದುರಿಗೆ ಬಾರದಿದ್ದರೂ ಹಿಂದಿನಿಂದ ಸಂಸ್ಥೆಯ ಏಳಿಗೆಗೆ ಅನೇಕ ಸಹಕಾರ ನೀಡಿದ ಅಧಿಕಾರಿಗಳಾಗಿದ್ದಾರೆ. ಅವರೆನ್ನಲ್ಲ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು. ಮುಂದಿನ ದಿನ ಯುವ ಸಮುದಾಯ ಸಂಸ್ಥೆಯ ಅಭಿವೃದ್ಧಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದ ಅವರು ಸಂಘ ಆರಂಭದಿಂದ ಹಂತ ಹಂತವಾಗಿ ಬೆಳೆದು ಬಂದ ವಿಚಾರಗಳನ್ನು ಅವಲೋಕನ ಮಾಡಿದರು.

ಕಾಣಿಯೂರಿನಲ್ಲಿ ಡಿಸೆಂಬರ್ ಒಳಗೆ ನೂತನ ಶಾಖೆ ಘೋಷಣೆ:

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಅವರು ಮಾತನಾಡಿ ೨ಸಾವಿರದ ಇಸವಿಯಲ್ಲಿ ನಮ್ಮ ಸಂಘ ಸ್ಥಾಪನೆಯಾದ ಸಂದರ್ಭ ಆಗ ಶಾಸಕರಾಗಿದ್ದ ಡಿ.ವಿ.ಸದಾನಂದ ಗೌಡ ಅವರು ಸಂಘವನ್ನು ಉದ್ಘಾಟಿಸಿದ್ದರು. ಇವತ್ತು ೨೦ ವರ್ಷಗಳ ಬಳಿಕ ಸ್ಥಾಪಕರ ದಿನವನ್ನು ಯೋಗಾನು ಯೋಗ ಡಿ.ವಿಯವರ ಭಾವ ನಮ್ಮ ಶಾಸಕ ಸಂಜೀವ ಮಠಂದೂರು ಉದ್ಘಾಟಿಸುತ್ತಿದ್ದಾರೆ. ಆರಂಭದ ದಿನದಲ್ಲಿ ಸಂಘದ ಸ್ಥಾಪಕ ಅಧ್ಯಕ್ಷರಾಗಿದ್ದ ಜಗನ್ನಾಥ ಬೊಮ್ಮೆಟ್ಟಿ ಅವರ ಶ್ರಮವನ್ನು ನೆನಪಿಸಿದ ಅವರು ಮುಂದೆ ಪ್ರತಿ ವರ್ಷ ಸ್ಥಾಪಕರ ದಿನಾಚರಣೆಯನ್ನು ಆಚರಣೆ ಮಾಡಲಿದ್ದೇವೆ ಎಂದ ಅವರು ಈ ಶುಭ ಸಂದರ್ಭದಲ್ಲಿ ಡಿಸೆಂಬರ್ ಒಳಗಡೆ ಸವಣೂರು ವಲಯಕ್ಕೆ ಸಂಬಂಧಿಸಿ ಕಾಣಿಯೂರಿನಲ್ಲಿ ನೂತನ ಶಾಖೆ ಉದ್ಘಾಟನೆಗೊಳ್ಳಲಿದೆ. ನಮ್ಮ ಆಡಳಿತ ಮಂಡಳಿಯ ನಿರ್ಣಯದ ಪ್ರಕಾರದ ಅಲ್ಲಿ ಸಮಿತಿ ರಚನೆಗಾಗಿ ಮೋಹನ್ ಗೌಡ ಇಡ್ಯಡ್ಕ ಅವರು ಅಧ್ಯಕ್ಷರಾಗಿ ಮತ್ತು ಪ್ರವೀಣ್ ಕುಂಟ್ಯಾನ ಉಪಾಧ್ಯಕ್ಷರಾಗಿ ಸಭೆ ನಡೆಸಿ ನಿರ್ಣಯ ಕೈಗೊಳ್ಳಲಿದ್ದಾರೆ. ಮುಂದೆ ಬೆಳ್ಳಾರೆಯಲ್ಲೂ ಶಾಖೆ ಆರಂಭಿಸಲು ಚಿಂತನೆ ನಡೆಸಲಾಗಿದೆ, ಇವತ್ತು ಪುತ್ತೂರು ಪ್ರಧಾನ ಕಚೇರಿಯಲ್ಲಿ ಕೇಕ್ ಕಟ್ ಮಾಡಿ ಸಿಹಿ ವಿತರಣೆ ಮಾಡಿದಂತೆ ಸಂಘದ ಎಲ್ಲಾ ಶಾಖೆಗಳಲ್ಲೂ ಸಿಹಿ ವಿತರಣೆ ನಡೆಯಲಿದೆ ಎಂದು ಅವರು ಹೇಳಿದರು.

೨೦ ವರ್ಷಗಳಲ್ಲಿ ಅಭೂತಪೂರ್ವ ಸಾಧನೆ ಕಂಡಿದ್ದೇವೆ:

ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು ಅವರು ಮಾತನಾಡಿ ಹಿರಿಯರ ಮಾರ್ಗದರ್ಶನದಿಂದಾಗಿ ಸಂಘ ಅಭಿವೃದ್ಧಿ ಕಂಡಿದೆ. ೨೦ ವರ್ಷಗಳ ಅಭೂತಪೂರ್ವ ಸಾಧನೆ ಮಾಡಿದ್ದೇವೆ. ಒಕ್ಕಲಿಗ ಗೌಡ ಸೇವಾ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯು ಸಂಘಕ್ಕೆ ಪೂರಕವಾಗಿ ಸ್ಪಂಧಿಸುತ್ತಾ ಬಂದಿದೆ. ಹಲವು ಸವಾಲುಗಳನ್ನು ಸ್ವೀಕರಿಸಿ ಇವತ್ತು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವುದಲ್ಲೇ ಶೇ.೯೯ ಸಾಲ ವಸೂಲಾತಿ ಮಾಡುವ ಮೂಲಕ ಸಾಧನೆ ಮಾಡಿದ ಸಂಘ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.

ಸಂಸ್ಥೆ ಹುಟ್ಟು ಹಾಕಿದವರನ್ನು ನೆನಪಿಸುವುದು ಅಗತ್ಯ:

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ ಅವರು ಮಾತನಾಡಿ ಸಂಸ್ಥೆ ಹುಟ್ಟು ಹಾಕಿದವರ ಶ್ರಮದ ಬಗ್ಗೆ ಯೋಚಿಸುವ ಕೆಲಸ ಮಾಡಿದಾಗ ಸಂಸ್ಥೆಯು ಅಭಿವೃದ್ಧಿಯಾಗುತ್ತದೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ಸಂಸ್ಥಾಪಕರ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತದೆ. ಈ ನಿಟ್ಟಿನಲಿ ಸಹಕಾರ ಸಂಘಗಳು ಕೂಡಾ ಇಂತಹ ಪದ್ಧತಿಯನ್ನು ಅನುಸರಿಸಿದಾಗ ಸಂಘದ ಬಳವಣಿಗೆ ಆಗಲಿದೆ ಎಂದರು.

ಪ್ರವರ್ತಕರಿಗೆ ಗೌರವ:

ಸಂಘವು ೨೦ ವರ್ಷವನ್ನು ಪೂರೈಸಿದ ಹಿನ್ನೆಲೆಯಲ್ಲಿ ಸ್ಥಾಪನಾ ದಿನಾಚರಣೆಯ ಅಂಗವಾಗಿ ಸ್ಥಾಪಕ ಮುಖ್ಯ ಪ್ರವರ್ತಕರಾಗಿದ್ದು ಪ್ರಸ್ತುತ ನಿರ್ದೇಶಕರಾಗಿರುವ ಮೋಹನ್ ಗೌಡ ಇಡ್ಯಡ್ಕ, ಸ್ಥಾಪಕ ಪ್ರವರ್ತಕರಾಗಿದ್ದು ಪ್ರಸ್ತುತ ಅಧ್ಯಕ್ಷರಾಗಿರುವ ಚಿದಾನಂದ ಬೈಲಾಡಿ, ಜಗನ್ನಾಥ ಬೊಮ್ಮೆಟ್ಟಿಯವರ ಪರವಾಗಿ ಜಯಂತಿ ಬೊಮ್ಮೆಟ್ಟಿ, ಕೆ.ಶ್ರೀಧರ ಗೌಡ ಕಣಜಾಲು, ಪ್ರಸುತ ನಿರ್ದೇಶಕರಾಗಿರುವ ರಾಮಕೃಷ್ಣ ಗೌಡ ಕರ್ಮಲ, ಯಂ.ದಿವಾಕರ ಗೌಡ ತೆಂಕಿಲ, ನಾರಾಯಣ ಗೌಡ ಯಸ್.ಪಿ.ಪಾದೆ, ರವಿ ಮುಂಗ್ಲಿಮನೆ, ಕೆ.ನಾರಾಯಣ ಗೌಡ ಆರ್ವಾರ, ಗಣಪಣ್ಣ ಗೌಡ ಕೆಮ್ಮಿಂಜೆ, ಲಿಂಗಪ್ಪ ಗೌಡ ತೆಂಕಿಲ, ವಿಶ್ವನಾಥ ಗೌಡ ಕೆಯ್ಯೂರು ಮತ್ತು ಸ್ಥಾಪಕ ಉಳಿತಾಯ ಖಾತೆದಾರರಾದ ಸುರೇಶ್ ಬಿ.ಕೆ, ಲಿಂಗಪ್ಪ ಗೌಡ ಕಡೇಂಬ್ಯಾಲು, ರಾಮಣ್ಣ ಗೌಡ ಬಡಾವು, ಸಿದ್ದಪ್ಪ ಗೌಡ ಹೆಚ್ ಹಲಂಗ ಹಾಗು ಸಂಘದಲ್ಲಿ ೨೦ ವರ್ಷ ಸೇವೆ ಸಲ್ಲಿಸಿದ ಮಾಜಿ ನಿರ್ದೇಶಕರಾದ ವೆಂಕಪ್ಪ ಗೌಡ ದೇವಸ್ಯ, ಸಾವಿತ್ರಿ ಅರ್.ಕೆ, ಸಾಂತಪ್ಪ ಗೌಡ ಪಿಜಕ್ಕಳ, ಹಾಲಿ ನಿರ್ದೇಶಕರಾದ ಯು.ಪಿ.ರಾಮಕೃಷ್ಣ ಗೌಡ ಕರ್ಮಲ, ಜಿನ್ನಪ್ಪ ಗೌಡ ಮಳುವೇಲು, ಪ್ರವೀಣ್ ಕುಂಟ್ಯಾನ, ಸಂಘದ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿಯಾಗಿ ಆಗಮಿಸಿದ ಮಹಿಳಾ ಗೌಡ ಸಂಘದ ಅಧ್ಯಕ್ಷೆ ಮೀನಾಕ್ಷಿ ಡಿ ಗೌಡ, ಯುವ ಸಂಘದ ಅಧ್ಯಕ್ಷ ನಾಗೇಶ್ ಗೌಡ ಕೆಡೆಂಜಿ, ಒಕ್ಕಲಿಗ ಸ್ವ ಸಹಾಯ ಸಂಘದ ಸ್ಥಾಪಕ ಅಧ್ಯಕ್ಷ ಎ.ವಿ.ನಾರಾಯಣ ಗೌಡ ಅವರನ್ನು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ವತಿಯಿಂದ ಗೌರವಿಸಲಾಯಿತು. ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಪ್ರಧಾನ ಕಚೇರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಒಟ್ಟು ಕಾರ್ಯಕ್ರಮ ನಿರ್ವಹಿಸಿದರು.

ಸ್ಥಾಪಕರ ದಿನಾಚರಣೆ ಅಂಗವಾಗಿ ಕನಿಷ್ಠ ಬಡ್ಡಿ ದರದಲ್ಲಿ ಸಾಲ ಸೌಲಭ್ಯ

ದೇವರ ದಯೆಯಿಂದ ಸಾಕಷ್ಟು ಫಂಡ್‌ಗಳಿವೆ. ಅದು ಹೊರಗೆ ಹೋಗದಿದ್ದರೆ ಲಾಭ ಬರುವುದಿಲ್ಲ. ಅದಕ್ಕೆ ಬೇಕಾಗಿ ೬೦ ದಿನಗಳ ಕಾಲ ಆಭರಣ ಈಡಿನ ಸಾಲಗಳಿಗೆ ಮತ್ತು ಆಸ್ತಿ ಖರೀದಿ ಸಾಲಗಳಿಗೆ ಕನಿಷ್ಠ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುವುದು. ಆಭರಣ ಈಡಿನ ಸಾಲಕ್ಕೆ ಶೇ.೧೦ ಮತ್ತು ಆಸ್ತಿ ಖರೀದಿ ಸಾಲಕ್ಕೆ ಶೇ.೧೨ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು. ಈ ಅವಕಾಶ ಅಕ್ಟೋಬರ್ ೩೧ರ ತನಕ ಮಾತ್ರ ಇರುತ್ತದೆ.

ಚಿದಾನಂದ ಬೈಲಾಡಿ, ಅಧ್ಯಕ್ಷರು
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಪುತ್ತೂರು

LEAVE A REPLY

Please enter your comment!
Please enter your name here