ಪುತ್ತೂರು ಲ್ಯಾಂಪ್ಸ್ ಸಹಕಾರಿ ಸಂಘದ ಮಹಾಸಭೆ

0

* ರೂ.16.75 ಲಾಭ, ಶೇ.98.32 ಸಾಲ ವಸೂಲಾತಿ

ಪುತ್ತೂರು:ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರಿ ಸಂಘವು 2021-22ನೇ ಸಾಲಿನಲ್ಲಿ ರೂ.16,75,645 ನಿವ್ವಳ ಲಾಭ ಗಳಿಸಿದ್ದು, ಸಂಘದ ಬೈಲಾ ಪ್ರಕಾರ ಲಾಭಾಂಶ ಹಂಚಿಕೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಪೂವಪ್ಪ ನಾಯ್ಕ ಎಸ್ ಆಲಂಕಾರು ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದರು.

ಸಭೆಯು ಸೆ.4ರಂದು ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘದ ಸಭಾ ಭವನದಲ್ಲಿ ನಡೆಯಿತು. ಸಭೆಯು ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವರ್ಷಾಂತ್ಯಕ್ಕೆ ಸಂಘದಲ್ಲಿ 4787 ಮಂದಿ ಸದಸ್ಯರಿದ್ದು ರೂ.38,68,066 ಪಾಲು ಬಂಡವಾಳವಿರುತ್ತದೆ. ಸಂಚಯ ಠೇವಣಿ ರೂ.87,98,829, ಮಾಸಿಕ ಠೇವಣಿ ರೂ.5,92,350, ನಿರಖು ಠೇವಣಿ ರೂ.2,75,28,500 ಹಾಗೂ ಸ್ವರ್ಣ ನಿತ್ಯ ನಿಧಿ ಠೇವಣಿ ರೂ.60,37,107 ಇರುತ್ತದೆ. ರೂ.59,51,802.89 ಕ್ಷೇಮ ನಿಧಿ ಹಾಗೂ ರೂ.1,15,91,566.54 ಇತರ ನಿಧಿಗಳಿವೆ. ರೂ.1,88,84,826.69 ಇತರ ಸಹಕಾರಿ ಸಂಘಗಳಲ್ಲಿ ವಿನಿಯೋಗಿಸಲಾಗಿದೆ. ವರದಿ ವರ್ಷದಲ್ಲಿ ರೂ.3,32,43,146 ಸಾಲ ವಿತರಿಸಲಾಗಿದ್ದು ಸಾಲ ವಸೂಲಾತಿಯಲ್ಲಿ ಶೇ.98.32 ಸಾಧನೆ ಮಾಡಿದೆ. ಲೆಕ್ಕಪರಿಶೋಧನೆಯಲ್ಲಿ ಸಂಘವು `ಎ’ ಶ್ರೇಣಿಯನ್ನು ಪಡೆದುಕೊಂಡಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ರಾಜ್ಯ ಲಾಂಪ್ಸ್ ಸಹಕಾರ ಮಹಾಮಂಡಲದ ಉಪಾಧ್ಯಕ್ಷ ಮಂಜುನಾಥ ಎನ್.ಎಸ್‌ರವರು ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಸಹಕಾರಿ ಸಂಘದ ಮುಖಾಂತರ ಸದಸ್ಯರಿಗೆ ಸಿಗುವ ವಿವಿಧ ಸವಲತ್ತುಗಳ ಬಗ್ಗೆ ತಿಳಿಸಿದರು.

ಸದಸ್ಯರಿಂದ ಮೆಚ್ಚುಗೆ:
ಸಂಘವು ಉತ್ತಮವಾಗಿ ಕಾರ್ಯನಿರ್ವಸುತ್ತಿರುವುದಕ್ಕೆ ಸಂಘದ ಆಡಳಿತ ಮಂಡಳಿಗೆ ಹಾಗೂ ನೌಕರವೃಂದದವರ ಕಾರ್ಯವೈಖರಿಯ ಬಗ್ಗೆ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.

ಅರಣ್ಯ ಇಲಾಖೆಯ ವಿಳಂಬ ಧೋರಣೆಯ ಆಕ್ರೋಶ:

ಸಂಘದ ಮೂಲ ಉದ್ದೇಶವಾಗಿರುವ ಕಿರು ಅರಣ್ಯ ಉತ್ಪನ್ನಗಳನ್ನು, ಅರಣ್ಯದಿಂದ ಸಂಗ್ರಹಿಸಲು ಸದಸ್ಯರುಗಳಿಗೆ, ಪ್ರಸ್ತುತ ಆಗುತ್ತಿರುವ ತೊಂದರೆಗಳ ಬಗ್ಗೆ ಹಾಗೂ ಈ ಬಗ್ಗೆ ಅರಣ್ಯ ಇಲಾಖೆಯ ವಿಳಂಬ ಧೋರಣೆಯ ಬಗ್ಗೆ ಸಂಘದ ಸದಸ್ಯರು ಒಕ್ಕೊರಲಿನಿಂದ ಆಕ್ರೋಶ ವ್ಯಕ್ತಪಡಿಸಿದರು, ಇದಕ್ಕೆ ಉತ್ತರಿಸಿದ ಸಂಘದ ಅಧ್ಯಕ್ಷ ಪೂವಪ್ಪ ನಾಯ್ಕ ಮಾತನಾಡಿ, ಅರಣ್ಯಾಧಿಕಾರಿಗಳೊಂದಿಗೆ ಲ್ಯಾಂಪ್ಸ್ ಮಹಾಮಂಡಲದ ಮುಖಾಂತರ ಮಾತುಕತೆ ಮಾಡಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುವುದಾಗಿ ಸಭೆಗೆ ತಿಳಿಸಿದರು.

ಸಂಘದ ನಿರ್ದೇಶಕರಾದ ಪೂವಪ್ಪ ನಾಯ್ಕ ಕೆ ಕುಂಞಕುಮೇರು, ಅಪ್ಪಯ್ಯ ನಾಯ್ಕ ತಳೆಂಜಿ, ಕೃಷ್ಣ ನಾಯ್ಕ ಪಿ.ಎಂ.ಕೃಷ್ಣನಗರ, ನೇತ್ರಾಕ್ಷ ಏಣಿತ್ತಡ್ಕ, ಶೇಷಪ್ಪ ನಾಯ್ಕ ದೊಡ್ಡಡ್ಕ, ಅಶ್ವಿನಿ ಬಿ.ಕೆ ಮುಂಡೂರು, ಭವ್ಯ ಚಿಕ್ಕಮುಡ್ನೂರು, ರೇವತಿ ನಿಡ್ಪಳ್ಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಿಬಂದಿ ಪೂವಪ್ಪ ನಾಯ್ಕರು ಪ್ರಾರ್ಥಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣಪಣ್ಣ ಎಚ್. ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ದರ್ಣಪ್ಪ ನಾಯ್ಕ ವಂದಿಸಿದರು.

LEAVE A REPLY

Please enter your comment!
Please enter your name here