ದ.ಕ. ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಹಾಗೂ ಪುತ್ತೂರು ತಾಲೂಕು ಮಟ್ಟದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನೋತ್ಸವ ಶಿಕ್ಷಕರ ದಿನಾಚರಣೆ 2022 ಸೋಮವಾರ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರಗಿತು.
ಮುಖ್ಯದ್ವಾರದಲ್ಲಿ ಸಿಂಗಾರಿ ಚೆಂಡೆ ಮೇಳ ಹಾಗೂ ವಿವೇಕಾನಂದ ಶಾಲೆಯ ಸಿಬ್ಬಂದಿಗಳು ಶಿಕ್ಷಕರನ್ನು ಹಾಗೂ ಅತಿಥಿಗಳನ್ನು ಹಾರ್ದಿಕವಾಗಿ ಸ್ವಾಗತಿಸಿದರು. ಕಲಿಕಾ ಚೇತರಿಕಾ ವರ್ಷ 2022-23, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಬೆಂಗಳೂರು ಶಿಕ್ಷಕರ ಕಲ್ಯಾಣ ನಿಧಿ, ಮಂಗಳೂರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಚೇರಿ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶಾಸಕ ಸಂಜೀವ ಮಠಂದೂರು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಎಂ.ಎಲ್.ಸಿ. ಎಸ್.ಎಲ್. ಭೋಜೇಗೌಡ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಜಿ.ಪಂ. ಸಿಇಓ ಡಾ. ಕುಮಾರ, ಶಿಕ್ಷಣ ಶಿಕ್ಷಕ ಮಹಾವಿದ್ಯಾಲಯದ ಸಹನಿರ್ದೇಶಕ, ಪ್ರಾಂಶುಪಾಲ ಡಾ. ಸಿಪ್ರಿಯನ್ ಮೊಂತೇರೊ, ಸಹಾಯಕ ಆಯುಕ್ತ ಗಿರೀಶ್ ನಂದನ್ ಎಂ., ಡಿ.ವೈ.ಎಸ್ಪಿ ವೀರಯ್ಯ ಹೀರೆಮಠ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್ಟ್ ಮೊದಲಾದವರು ಉಪಸ್ಥಿತರಿದ್ದರು.
ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ:
ಬೆಳ್ತಂಗಡಿ ತಾಲೂಕಿನಿಂದ ನೆಕ್ಕಿಲ್ ಸ.ಕಿ.ಪ್ರಾ ಶಾಲಾ ಸಹಶಿಕ್ಷಕ ಬಸನಗೌಡ ಎಸ್ ಬಿರಾದಾರ, ಗುತ್ಯಡ್ಕ ಎಳನೀರು ಸ.ಹಿ.ಪ್ರಾ ಶಾಲಾ ಪ್ರಭಾರ ಮುಖ್ಯ ಶಿಕ್ಷಕ ರವೀಂದ್ರ ಡಿ.ಎನ್, ಕೊಯ್ಯೂರು ಸ.ಪ್ರೌ ಶಾಲಾ ಸಹಶಿಕ್ಷಕ ರಾಮಚಂದ್ರ ದೊಡಮನಿ, ಬಂಟ್ವಾಳ ತಾಲೂಕಿನ ನೆಟ್ಲ ಸ.ಹಿ.ಪ್ರಾ ಶಾಲಾ ಸಹಶಿಕ್ಷಕ ಪ್ರವೀಣ ಬಿ, ಮೂಡುಪಡುಕೋಡಿ ಸ.ಉ.ಹಿ.ಪ್ರಾ ಶಾಲಾ ಸಹ ಶಿಕ್ಷಕ ಸುನಿಲ್ ಸಿಕ್ವೇರಾ, ಸಾಲೆತ್ತೂರು ಸ.ಪ್ರೌ ಶಾಲಾ ದೈ.ಶಿ.ಶಿ ರಾಘವೇಂದ್ರ, ಮಂಗಳೂರು ಉತ್ತರ ವಲಯದ ಕೆಂಜಾರು ಹಿ.ಪ್ರಾ ಶಾಲಾ ಸಹಶಿಕ್ಷಕಿ ರೋಸ್ ಲೀನ್ ಆರ್. ಎಸ್, ಮರಕಡ ಸ.ಮಾ.ಹಿ.ಪ್ರಾ ಶಾಲಾ ಪದವೀಧರೇತರ ಮುಖ್ಯಶಿಕ್ಷಕಿ ನೇತ್ರಾವತಿ ಎ, ಡೊಂಗರಕೇರಿ ಅನುದಾನಿತ ಕೆನರಾ ಪ್ರೌಢಶಾಲಾ ಚಿತ್ರಕಲಾ ಸಹ ಶಿಕ್ಷಕಿ ರಾಜೇಶ್ವರಿ ಕೆ, ಮಂಗಳೂರು ದಕ್ಷಿಣ ವಲಯದ ಪಾವೂರು ಸ.ಹಿ.ಪ್ರಾ ಶಾಲಾ ಸಹಶಿಕ್ಷಕ ಅಬ್ದುಲ್ ಮಜೀದ್ ಎಂ, ಬಗಂಬಿಲ ಸ.ಹಿ.ಪ್ರಾ ಶಾಲಾ ಸಹ ಶಿಕ್ಷಕ ವಸಂತ ರೈ ಬಿ.ಕೆ, ಪದುವ ಅನುದಾನಿತ ಪ್ರೌ ಶಾಲಾ ಸಹಶಿಕ್ಷಕ ಸ್ಟೇನಿ ಗೇಬ್ರಿಯೆಲ್ ತಾವ್ರೋ, ಮೂಡಬಿದ್ರೆ ವಲಯದ ಕಂಚರ್ಲಗುಡ್ಡೆ ಸ.ಕಿ.ಪ್ರಾ ಶಾಲಾ ಸಹಶಿಕ್ಷಕಿ ಸುಜಾತಾ, ಮೂಡಮಾರ್ನಾಡು ಸ.ಹಿ.ಪ್ರಾ ಶಾಲಾ ಮುಖ್ಯ ಶಿಕ್ಷಕಿ ಜ್ಯೋತಿ ಡಿ.ಸೋಜ, ಅಳಿಯೂರು ಸ.ಪ್ರೌ ಶಾಲಾ ಸಹಶಿಕ್ಷಕ ಸುಬ್ರಹ್ಮಣ್ಯ ವಿ, ಪುತ್ತೂರು ತಾಲೂಕಿನ ಕಡಬ ತಾಲೂಕು ಮೀನಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಗೋವಿಂದ ನಾಯ್ಕ ಬಿ., ಸರಕಾರಿ ಹಿ.ಪ್ರಾ.ಶಾಲೆ ಪಾಪೆಮಜಲು ಇಲ್ಲಿನ ಮುಖ್ಯಶಿಕ್ಷಕಿ ತೆರೇಜ್ ಎಂ.ಸಿಕ್ವೇರಾ , ಸರ್ವೆ ಕಲ್ಪಣೆ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಯರಾಮ ಶೆಟ್ಟಿ, ಸುಳ್ಯ ತಾಲೂಕಿನ ಕೇನ್ಯ ಸ.ಕಿ.ಪ್ರಾ ಶಾಲಾ ಸಹ ಶಿಕ್ಷಕಿ ರೇವರಿ ಕೊಡಪಾಡಿ, ಕೆ.ಪಿ.ಎಸ್ ಬೆಳ್ಳಾರೆಯ ಪ.ಮುಖ್ಯ ಶಿಕ್ಷಕಿ, ಪಂಜ ಸ.ಪ್ರೌ.ಶಾಲಾ ದೈ.ಶಿಕ್ಷಣ ಶಿಕ್ಷಕಿ ಯೋಗೀಶ್ ಸಿ ಯವರಿ ಪ್ರಶಸ್ತಿ ಪ್ರದಾನ ಮಾಡಲಾಯಿತು
ಮಂಗಳೂರು ಡಯಟ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕಿ ರಾಜಲಕ್ಷ್ಮೀ ಕೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಿರ್ವಹಿಸಿದರು.