ಮತದಾರರ ಗುರುತು ಚೀಟಿಗೆ ಆಧಾರ್ ಅಥವಾ ಇತರ 11 ದಾಖಲೆಗಳಲ್ಲಿ ಒಂದು ದಾಖಲೆ ಜೋಡಣೆ ಕಡ್ಡಾಯ

0

ಪುತ್ತೂರು:ಮತದಾರರ ಪಟ್ಟಿಯಲ್ಲಿ ಮತದಾರರ ನಮೂದುಗಳ ದೃಢೀಕರಣಕ್ಕಾಗಿ ಮತ್ತು ಭವಿಷ್ಯದಲ್ಲಿ ಉತ್ತಮ ಚುನಾವಣಾ ಸೇವೆಗಳನ್ನು ನೀಡುವುದಕ್ಕಾಗಿ 1950ರ ಪ್ರಜಾ ಪ್ರಾತಿನಿಧ್ಯ ಕಾಯ್ದೆ ಸೆಕ್ಷನ್ 23ರ ಸಬ್ ಸೆಕ್ಷನ್(6)ರಡಿ ಮತದಾರರು ತಮ್ಮ ಗುರುತು ಚೀಟಿಗೆ ಆಧಾರ್ ಹೊರತು ಪಡಿಸಿ ಇತರ 11 ದಾಖಲೆಗಳಲ್ಲಿ ಯಾವುದಾದರೂ ಒಂದು ದಾಖಲೆಗಳನ್ನು ಕಡ್ಡಾಯವಾಗಿ ಜೋಡಿಸುವಂತೆ ತಹಶೀಲ್ದಾರ್ ತಿಳಿಸಿದ್ದಾರೆ.

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ತಮ್ಮಲ್ಲಿರುವ ದಾಖಲೆಗಳಲ್ಲಿ ಆಧಾರ್ ಅಥವಾ ಇತರ 11 ದಾಖಲೆಗಳಲ್ಲಿ ಒಂದು ದಾಖಲೆ ಜೋಡಿಸಬೇಕಾಗಿದ್ದು, ಉದ್ಯೋಗ ಖಾತರಿಯ ಉದ್ಯೋಗ ಚೀಟಿ, ಭಾವಚಿತ್ರವಿರುವ ಬ್ಯಾಂಕ್/ಪೋಸ್ಟ್ ಆಫೀಸ್ ಪಾಸ್‌ಬುಕ್, ಕಾರ್ಮಿಕ ಇಲಾಖೆಯ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ಪ್ಯಾನ್ ಕಾರ್ಡ್, ಎನ್‌ಪಿಆರ್ ಅಡಿಯಲ್ಲಿ ಆರ್‌ಜಿಐ ಸ್ಮಾರ್ಟ್ ಕಾರ್ಡ್, ಪಾಸ್‌ಪೋರ್ಟ್, ಭಾವಚಿತ್ರವಿರುವ ಪಿಂಚಣಿ ದಾಖಲೆ, ಕೇಂದ್ರ/ರಾಜ್ಯ/ಪಿಎಸ್‌ಯು/ಸಾರ್ವಜನಿಕರಿಂದ ಉದ್ಯೋಗಿಗಳಿಗೆ ನೀಡುವ ಭಾವಚಿತ್ರವಿರುವ ಗುರುತಿನ ಚೀಟಿ, ಸಂಸದರು/ಶಾಸಕರು/ಎಂಎಲ್‌ಸಿಗಳಿಗೆ ನೀಡುವ ಅಧಿಕೃತ ಗುರುತಿನ ಚೀಟಿ, ಇಲಾಖೆ ಭಾರತ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದಿಂದ ನೀಡುವ ವಿಶಿಷ್ಠ ಗುರುತಿನ ಚೀಟಿ(ಯುಡಿಐಡಿ) ಇತ್ಯಾದಿ ದಾಖಲೆಗಳನ್ನು ಸಲ್ಲಿಸಿ 6ಬಿ ನಮೂನೆಯಲ್ಲಿ ಆಧಾರ್ ಜೋಡಣೆ ಮಾಡಬಹುದು.

ಈ ಹಿನ್ನೆಲೆಯಲ್ಲಿ ಪುತ್ತೂರು ತಾಲೂಕಿನ ಮತದಾರರು ತಮ್ಮ ಮತದಾರರ ಗುರುತಿನ ಚೀಟಿಗೆ ಆಧಾರ್ ಅಥವಾ ಮೇಲಿನ ಒಂದು ದಾಖಲೆ ಸಲ್ಲಿಸುವ ಮೂಲಕ ಜೋಡಣೆ ಮಾಡಬಹುದು ಎಂದು ಸಹಾಯಕ ಮತದಾರರ ನೋಂದಾವಣಾಽಕಾರಿಯಾಗಿರುವ ತಹಶೀಲ್ದಾರ್ ನಿಸರ್ಗಪ್ರಿಯ ಜೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here