





ಪುತ್ತೂರು: ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ನವೋದಯ ಪ್ರೌಢ ಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ದಯಾನಂದ ರೈ ಕೋರ್ಮಂಡ ಇವರಿಗೆ ಗುರುವಂದನೆ ಗೈಯುವುದರ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.








ಮುಖ್ಯ ಅಥಿತಿಗಳಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ವರದರಾಜ ಚಂದ್ರಗಿರಿ, ಆಡಳಿತ ಮಂಡಳಿಯ ಅಧ್ಯಕ್ಷರಾದ ರಂಗನಾಥ ರೈ ಗುತ್ತು ಸಂಚಾಲಕರಾದ ಡಾ.ಸತೀಶ್ ರಾವ್, ಕೋಶಾಧಿಕಾರಿಯಾದ ಕರುಣಾಕರ ಶೆಟ್ಟಿ ಕೋರ್ಮಂಡ , ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶುಭಕರ ರೈ ಬೈಲಾಡಿ ,ಮುಖ್ಯಗುರು ರಾಜೇಶ್ ನೆಲ್ಲಿತ್ತಡ್ಕ ಹಾಗೂ ಶಿಕ್ಷಕ ವೃಂದದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯ ಅಥಿತಿಗಳಾದ ಡಾ.ವರದರಾಜ ಚಂದ್ರಗಿರಿಯವರು ಮಾತಾನಾಡುತ್ತಾ ಗುರುವಿನಿಂದ ಪಡೆದದ್ದು ಅಗಾಧವಾದ ಜ್ಞಾನ ,ಗೂಗಲ್ನಿಂದ ಪಡೆಯುವುದು ಕೇವಲ ಮಾಹಿತಿ. ಗುರುವೇ ಆದಿ ಹಾಗೂ ಅನಂತ. ಎಂಬುದಾಗಿ ಶಿಕ್ಷಕರಿಗೆ ಶುಭಹಾರೈಸಿದರು. ಗಣ್ಯಾಧಿಗಣ್ಯರ ಸಮ್ಮುಖದಲ್ಲಿ ನವೋದಯ ಪ್ರೌಢ ಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ,ಕದಂಬ ಪ್ರಶಸ್ತಿ ವಿಜೇತ ದಯಾನಂದ ರೈ ಕೋರ್ಮಂಡ ಇವರನ್ನುಗೌರವಿಸಲಾಯಿತು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ಹೂ ಹಾಗೂ ಶಾಲು ಹೊದಿಸಿ ಶಿಕ್ಷಕರನ್ನು ಗೌರವಿಸಲಾಯಿತು. 10ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಸಿಂಚನಾ ಬಿ ಆರ್ ಸ್ವಾಗತಿಸಿ,ಕುಮಾರಿ ಸಿಂಚನಾ ಕೆ.ಎಸ್ ವಂದಿಸಿದರು. ಶ್ರೀವೈಷ್ಣವಿ ಆಳ್ವ ಕಾರ್ಯಕ್ರಮ ನಿರೂಪಿಸಿದರು.








