ಕಡಬ: ಮೀನು ಮಾರಾಟ ವಿಚಾರಕ್ಕೆ ಹೊಡೆದಾಟ : ಪ್ರಕರಣ ದಾಖಲು

0

ಪುತ್ತೂರು: ಕಡಬ ಸಂತೆಕಟ್ಟೆ ಬಳಿ ಮೀನು ಮಾರುಕಟ್ಟೆಯಲ್ಲಿ ನ.01 ರಂದು ಬೆಳಿಗ್ಗೆ, ಮೀನು ಮಾರಾಟದ ವಿಚಾರದಲ್ಲಿ ಎರಡು ಅಂಗಡಿಯವರಿಗೆ ಮಾತಿನ ಚಕಮಕಿ ನಡೆದು ಬಳಿಕ ಪರಸ್ಪರ ಹೊಡೆದಾಟ ನಡೆದಿರುವ ಬಗ್ಗೆ ವೀಡಿಯೋ ಸಾಮಾಜಿಕಜಾಲತಾಣಗಳಲ್ಲಿ ಕಂಡು ಬಂದಿದ್ದು, ಈ ಕುರಿತು ಕಡಬ ಪೊಲೀಸ್‌‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜು ಮ್ಯಾಥ್ಯೂ, ಆದಂ, ಫಯಾಜ್, ರಕ್ಷೀತ್ ಮಾಣಿ, ನೌಫಾಲ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.

ಮೀನು ಮಾರಾಟದ ವಿಚಾರಕ್ಕೆ ರಾಜು ಮ್ಯಾಥ್ಯೂ ಹಾಗೂ ಆದಂ ಎಂಬ ಎರಡು ಅಂಗಡಿಯವರ ನಡುವೆ ಮಾತಿನ ಚಕಮಕಿ ನಡೆದು ಬಳಿಕ ಸಾರ್ವಜನಿಕ ಸ್ಥಳದಲ್ಲಿ ರಾಜು ಮ್ಯಾಥ್ಯೂ, ಆದಂ, ಫಯಾಜ್, ರಕ್ಷೀತ್ ಮಾಣಿ, ನೌಫಾಲ್ ಎಂಬುವರು ಪರಸ್ಪರ ಹೊಡೆದಾಡಿಕೊಂಡು ಸಾರ್ವಜನಿಕರ ಶಾಂತಿಗೆ ಭಂಗ ಉಂಟಾಗುವಂತೆ ಮಾಡಿದ್ದು, ಆದರಿಂದ ಸದ್ರಿ ವ್ಯಕ್ತಿಗಳ ವಿರುದ್ದ ಕಡಬ ಪೊಲೀಸ್‌‌ ಠಾಣೆಯಲ್ಲಿ ಅ.ಕ್ರ: 73/2025. ಕಲಂ: 194 (2) BNS-2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಕಡಬ ಠಾಣಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here