ಪುತ್ತೂರು: ಒಳಮೊಗ್ರು ಗ್ರಾಮದ ಮಗಿರೆ ಬೈಚೆರ್ ನಿವಾಸಿ ದಿ. ಮೊಯಿದುಕುಂಞಿ ಯವರ ಪತ್ನಿ ಕೈಜಮ್ಮ (81) ರವರು ಅಲ್ಪಕಾಲದ ಅಸೌಖ್ಯದಿಂದ ಸೆ.೮ ರಂದು ನಿಧನರಾದರು. ನಾಟಿ ವೈದ್ಯೆಯಾಗಿ ಗುರುತಿಸಿಕೊಂಡಿದ್ದ ಮೃತರು ಹಲವಾರು ಸಣ್ಣ ಪುಟ್ಟ ಕಾಯಿಲೆಗಳಿಗೆ ಹಳ್ಳಿ ಮದ್ದು ನೀಡುವಲ್ಲಿ ಪ್ರಸಿದ್ದಿ ಪಡೆದಿದ್ದರು. ಮೃತರು ಪುತ್ರ ಮಹಮ್ಮದ್ ಪುತ್ರಿ ಬೀಫಾತಿಮ್ಮ ರವರನ್ನು ಅಗಲಿದ್ದಾರೆ. ಮೃತರ ಮನೆಗೆ ಒಳಮೊಗ್ರು ಗ್ರಾಪಂ ಸದಸ್ಯ ವಿನೋದ್ಶೆಟ್ಟಿ ಮುಡಾಲ ಸೇರಿದಂತೆ ಹಲವು ಗಣ್ಯರು ಭೇಟಿ ಮೃತರ ಅಂತಿಮ ದರ್ಶನ ಪಡೆದರು.