ಪುತ್ತೂರು: ಒಳನಾಡು ಮೀನುಗಾರಿಕೆ ಹಾಗೂ ಮೀನು ತಳಿಗಳ ಅಭಿವೃದ್ಧಿ ತಜ್ಞ ಮತ್ತು ಸಲಹೆಗಾರ. ಭಾರತೀಯ ಸುಗಂಧಗಳಾದ ಊದ್, ಹರ್ಮಲ್, ಬಖೂರ್ಗಳ ಹೊಸ ವೈಜ್ಞಾನಿಕ ಆವಿಷ್ಕಾರಿಯಾಗಿರುವ ಮುರ ನಿವಾಸಿ ಡಾ| ಎಂ.ಸೆಯ್ಯದ್ ನಝೀರ್ ಸಾಹೇಬ್ ಅವರಿಗೆ ಅಂತರ್ರಾಷ್ಟ್ರೀಯ ಜೀನಿಯಸ್ ಐಕಾನ್ ಅಚೀವರ್ಸ್ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪರಿಸರ ಪ್ರೇಮಿಯಾದ ಇವರು, ಹಳ್ಳಿ ಮತ್ತು ನಗರಗಳ ಸ್ವಚ್ಛತೆಗೆ ಶ್ರಮ ವಹಿಸುತ್ತಿದ್ದು ಈಗಾಗಲೇ ನೂರಕ್ಕೂ ಮಿಕ್ಕಿ ಕೆರೆ, ಕೊಳಗಳಲ್ಲಿರುವ ಹೈಡ್ರಿಲ್ಲ, ಸಿಲ್ವೇನಿಯಾ, ರಾಕ್ಷಸ ಕಳೆ, ಪ್ಲಾಸ್ಟಿಕ್ ಕಳೆ ಕೊಳೆಗಳನ್ನು ಸ್ವಚ್ಛಗೊಳಿಸಿ ಪರಿಸರ ನೈರ್ಮಲ್ಯದ ಸಮತೋಲನ ಕಾಪಾಡಿರುತ್ತಾರೆ. ತನ್ನ ಆದಾಯದ ಒಂದಂಶವನ್ನು ಪರಿಸರ, ಆರೋಗ್ಯ ಮತ್ತು ಸಮಾಜ ಕಲ್ಯಾಣಕ್ಕೆ ವಿನಿಯೋಗಿಸಿ, ಬಡವರ ಸಬಲೀಕರಣಕ್ಕೂ ಆದ್ಯತೆ ನೀಡಿರುತ್ತಾರೆ. ಬಹುಮುಖ ವ್ಯಕ್ತಿತ್ವದ ಡಾ| ಎಂ ಸೈಯ್ಯದ್ ನಝಿರ್ ಸಾಹೇಬ್ರನ್ನು ಗುರುತಿಸಿ ಆ. ೨೭ರಂದು ಮುಂಬೈನ ಸಹಾರ ಸ್ಟಾರ್ನಲ್ಲಿ ನಡೆದ ಜೀನಿಯಸ್ ಐಕಾನ್ ಅಚೀವರ್ಸ್’ ಅಂತರ್ರಾಷ್ಟ್ರೀಯ ಪ್ರಶಸ್ತಿ ಸಮಾರಂಭದಲ್ಲಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು.
ಮುರದಲ್ಲಿ ಪ್ರಿಯಾ ಟ್ರಾನ್ಸ್ಪೋರ್ಟ್ ಸಂಸ್ಥೆಯನ್ನು ಇವರು ಹೊಂದಿದ್ದರು. ಈ ಪ್ರತಿಷ್ಠಿತ ಕಾರ್ಯಕ್ರಮವನ್ನು ಐಎಐಅಅಭಾರತದ ರಾಯಭಾರಿ ಮತ್ತು ನಿರ್ದೇಶಕ ಡಾ. ಅನಿಲ್ ನಾಯರ್ ಥಂಪಿ (ಅಂತರರಾಷ್ಟ್ರೀಯ ಪ್ರತಿಭೆ ಒನ್ವಾಡ್ಸ್) ಮತ್ತು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಹೋಲ್ಡರ್ ಇಂಟರ್ನ್ಯಾಷನಲ್ ಸೆಲೆಬ್ರಿಟಿ ಆಂಕರ್ ಡಾ| ವೈಭವ್ ಶರ್ಮಾ ಮತ್ತು ಮಹಿಳಾ ಸೆಲೆಬ್ರಿಟಿ ಆಂಕರ್ ಮಿಸ್ ಮೋನಾ ಗೊನ್ಸಾಲ್ವಿಸ್ ಆಯೋಜಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಮಹಿಳಾ ಸಬಲೀಕರಣ ಖಾತೆ ರಾಜ್ಯ ಸಚಿವ ರಾಮದಾಸ್ ಅಠಾವಳೆ, ಖ್ಯಾತ ಛಾಯಾಗ್ರಾಹಕರಾದ ಆನಂದ್ ಯತಿನ್ ಸಂಪತ್, ದೀಪಕ್ ಹೆಚ್ ವಾಧ್ವಾನಿರವರು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದರು. ಖ್ಯಾತ ಚಿತ್ರನಟರಾದ ಪ್ರೇಮ್ ಚೋಪ್ರಾ ಸಾಹಬ್, ಮುಖೇಶ್ ರಿಷಿ, -ಮ್ ಗಾಯಕ ನಕ್ಕಾಶ್ ಅಜೀಜ್, ಮರಾಠಿ ಚಲನಚಿತ್ರ ನಟ ವಿಜಯ್ ಪಾಟ್ಕರ್, ದಿಪಾಲಿ, ಸಯ್ಯದ್ ಇಂಟರ್ನ್ಯಾಷನಲ್ ಮಾಡೆಲ್ ಮಿಸ್ ಅಂಶಿಕಾ ರೈ ಮತ್ತು ಬಿಗ್ ಬಾಸ್ ಖ್ಯಾತಿಯ ಪೂಜಾ ಮಿಶ್ರಾ, ಕಲಾವಿದ ವಿವೇಕಜೇತಿ – ಅಲಿ ಬಾಬಾ ಕಾಬೂಲ್ ಎಕ್ದಾಸ್ತಾನ್ ಉಪಸ್ಥಿತರಿದ್ದರು.