ಪುತ್ತೂರು: ಜೇಸಿಐ ಉಪ್ಪಿನಂಗಡಿ ಘಟಕ, ಯುವ ಜೇಸಿ ವಿಭಾಗ ಹಾಗೂ ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್ ಉಪ್ಪಿನಂಗಡಿ ಇದರ 44 ನೇ ವರ್ಷದ ಜೇಸಿ ಸಪ್ತಾಹ ಸ್ಪಂದನ ಮತ್ತು ಜೇಸಿಐ ಭಾರತದ ನಮಸ್ತೆ 2022 ಕಾರ್ಯಕ್ರಮ ಸೇವಾ ಭಾರತಿ ಮಂಗಳೂರು ಇದರ ಅಂಗ ಸಂಸ್ಥೆ ರಾಮಕುಂಜದ ವಿದ್ಯಾ ಚೇತನಾ ವಿಶೇಷ ಮಕ್ಕಳ ಶಾಲೆಯಲ್ಲಿ ಉದ್ಘಾಟನೆಗೊಂಡಿತು.
ವಲಯದ ಉಪಾಧ್ಯಕ್ಷ ದೀಪಕ್ ಗಂಗೂಲಿ ದೀಪ ಬೆಳಗಿಸಿ ಉದ್ಘಾಟನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ವಿಶೇಷ ಮಕ್ಕಳ ಶಾಲೆಗೆ ಆಹಾರ ಕಿಟ್ ವಿತರಣೆ ಮಾಡಿದ ಸೇವೆ ಶ್ರೇಷ್ಠ ಸೇವೆ. ಇಂತಹ ಸೇವೆ ಘಟಕದಿಂದ ನಿರಂತರ ನಡೆಯಲಿ ಎಂದರು. ರೋಟರಿ ಕ್ಲಬ್ ಉಪ್ಪಿನಂಗಡಿ ಅಧ್ಯಕ್ಷ ಜಗದೀಶ್ ನಾಯಕ್,ಕಡಬ ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಹರೀಶ್ ಶೆಟ್ಟಿ, ವಿದ್ಯಾ ಚೇತನಾ ವಿಶೇಷ ಮಕ್ಕಳ ಶಾಲೆಯ ಮುಖ್ಯಗುರು ಶಶಿಕಲಾ, ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರಶಾಂತ್ ಕುಮಾರ್ ರೈ ಮತ್ತು ಉಪಾಧ್ಯಕ್ಷ ಆನಂದ ರಾಮಕುಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೇಸಿ ಸಪ್ತಾಹದ ಸಹನಿರ್ದೇಶಕ ಸುರೇಶ್ ಅತಿಥಿಗಳನ್ನು ವೇದಿಕೆಗೆ ಬರಮಾಡಿಕೊಂಡರು.
ಘಟಕಾಧ್ಯಕ್ಷ ಮೋಹನ್ ಚಂದ್ರ ತೋಟದ ಅಧ್ಯಕ್ಷತೆ ವಹಿಸಿದ್ದರು. ಮಹೇಶ್ ಖಂಡಿಗ, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ವಿಶೇಷ ಮಕ್ಕಳಿಗೆ ಶಿಕ್ಷಣ ಬೋಧಿಸುವ ಸಂಸ್ಥೆಯ ಶಿಕ್ಷಕರನ್ನು, ಸಿಬ್ಬಂದಿಗಳನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.