- ದೈಹಿಕ ಕ್ಷಮತೆಯಲ್ಲಿ ಕ್ರೀಡೆ ಬಹುಮುಖ್ಯ ಪಾತ್ರ ವಹಿಸುತ್ತವೆ – ಪುರುಷೋತ್ತಮ ಮುಂಗ್ಲಿಮನೆ
ಉಪ್ಪಿನಂಗಡಿ: ಜೇಸಿಐ ಉಪ್ಪಿನಂಗಡಿ ಘಟಕ, ಯುವ ಜೇಸಿ ವಿಭಾಗ ಹಾಗೂ ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್ (ರಿ.) ಉಪ್ಪಿನಂಗಡಿ ಇದರ 44 ನೇ ವರ್ಷದ ಜೇಸಿ ಸಪ್ತಾಹ ಸ್ಪಂದನ ಮತ್ತು ಜೇಸಿಐ ಭಾರತದ ನಮಸ್ತೆ 2022 ಕಾರ್ಯಕ್ರಮ ಅಂಗವಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನ್ ಸೊಸೈಟಿ ಆಡಳಿತ ಮಂಡಳಿಯ ಕಾಂಚನ ವೆಂಕಟ ಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆ ಕಾಂಚನದಲ್ಲಿ ಆಟೋಟ ಸ್ಪರ್ಧೆಗಳು ನಡೆಯಿತು.
ಜೇಸಿಐ ಉಪ್ಪಿನಂಗಡಿ ಪೂರ್ವಾಧ್ಯಕ್ಷರಾದ ಜೇಸಿ ಪುರುಷೋತ್ತಮ ಮುಂಗ್ಲಿಮನೆ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ, ಮಾತನಾಡಿ, ದೈಹಿಕ ಕ್ಷಮತೆಯಲ್ಲಿ ಕ್ರೀಡೆ ಬಹುಮುಖ್ಯ ಪಾತ್ರ ವಹಿಸುತ್ತವೆ. ಯುವಜನತೆ ಕ್ರೀಡಾಕೂಟಗಳಲ್ಲಿ ಸಕ್ರೀಯವಾಗಿ ಭಾಗವಹಿಸಲು ಕರೆ ನೀಡಿದರು.ಪೂರ್ವಾಧ್ಯಕ್ಷ ಜೇಸಿ ಹರೀಶ್ ನಟ್ಟಿಬೈಲು, ದೈಹಿಕ ಶಿಕ್ಷಕ ಚರಣ್, ವಿಕ್ರಂ ಯುವಕ ಮಂಡಲ ಅಧ್ಯಕ್ಷ ಜೇಸಿ ಅನಿಲ್ ಪಿಂಟೊ ಪುಯಿಲ, ಸಚಿನ್ ಮುದ್ಯ, ಹೇಮಂತ್ ನೆಕ್ಕರೆ, ನಿಕಟಪೂರ್ವ ಅಧ್ಯಕ್ಷರಾದ ಜೇಸಿ ವಿಶ್ವನಾಥ್ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್ ನ ಉಪಾಧ್ಯಕ್ಷರಾದ ಜೇಸಿ ಆನಂದ ರಾಮಕುಂಜ , ಅತಿಥಿಗಳನ್ನು ವೇದಿಕೆಗೆ ಬರಮಾಡಿಕೊಂಡರು.
ಘಟಕಾಧ್ಯಕ್ಷ ಜೇಸಿ ಮೋಹನ್ ಚಂದ್ರ ತೋಟದ ಮನೆ ಅಧ್ಯಕ್ಷತೆ ವಹಿಸಿದ್ದರು. ವಾಲಿಬಾಲ್ ಪಂದ್ಯಾಟಕ್ಕೆ ಕನ್ಯಾನ ಅರ್ತ ಮೂವರ್ಸ್ ನಾರಾಯಣ ಕನ್ಯಾನ ಚಾಲನೆ ನೀಡಿದರು. ಸ್ಥಳೀಯ ವಿಕ್ರಂ ಯುವಕ ಮಂಡಲ ಸದಸ್ಯರು, ಶಾಲೆಯ ವಿದ್ಯಾರ್ಥಿಗಳು,ಜೆಜೆಸಿ, ಜೇಸಿ ಸದಸ್ಯರು ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ಉಪನ್ಯಾಸಕ ಜೇಸಿ ಪುರುಷೋತ್ತಮ ತೋಟದ ಮನೆ ಬಹುಮಾನ ವಿತರಿಸಿದರು.ಕ್ರೀಡಾ ನಿರ್ಣಾಯಕರಾಗಿ ದೈಹಿಕ ಶಿಕ್ಷಕರಾದ ಶ್ರೀ ಚರಣ್ ಮತ್ತು ಶ್ರೀ ಹೇಮಂತ್ ನೆಕ್ಕರೆ ಸಹಕರಿಸಿದರು.