ಪುತ್ತೂರು; ದ.ಕ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸಮೂಹ ಸಂಪನ್ಮೂಲ ಕೇಂದ್ರ ಪುತ್ತೂರು ಇವುಗಳ ಆಶ್ರಯದಲ್ಲಿ ಕ್ಲಷ್ಟರ್ ಮಟ್ಟದ ಪ್ರತಿಭಾ ಕಾರಂಜಿಯು ಸೆ.15ರಂದು ಇರ್ದೆ-ಉಪ್ಪಳಿಗೆ ಸರಕಾರಿ ಹಿ.ಪ್ರಾ ಶಾಲೆಯಲ್ಲಿ ನಡೆಯಿತು.
ಉಪ್ಪಳಿಗೆ ಶ್ರೀ ವಿಷ್ಣು ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ ಪ್ರತಿಭಾ ಕಾರಂಜಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರತಿಭೆ ಎಲ್ಲರಲ್ಲಿಯೂ ದೈವದತ್ತವಾಗಿರುತ್ತದೆ. ಇದನ್ನು ಹೊರತೆಗೆಯು ಕಾರ್ಯವು ಪ್ರತಿಭಾ ಕಾರಂಜಿಯು ಸೂಕ್ತ ವೇದಿಕೆಯಾಗಿದೆ. ಅಧ್ಯಾಪಕರು ಮಕ್ಕಳನ್ನು ಸಮಾಜ ಮುಖಿಯಾಗಿ ತೊಡಗಿಸಿಕೊಂಡಾಗ ಅವರು ಉತ್ತಮದ ವಿದ್ಯಾರ್ಥಿಯಾಗಿ ಬೆಳೆದು ದೇಶದ ಸತ್ಪ್ರಜೆಯಾಗಿ ಬೆಳೆಯಲು ಪ್ರತಿಭಾ ಕಾರಂಜಿಗಳು ಸಹಕಾರಿಗಯಾಗಲಿದೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಬೆಟ್ಟಂಪಾಡಿ ಗ್ರಾ.ಪಂ ಅಧ್ಯಕ್ಷೆ ಪವಿತ್ರ, ಸದಸ್ಯೆಉಮಾವತಿ ಸುಬ್ಬಪ್ಪ ಮಣಿಯಾಣಿ, ವಿದ್ಯಾಶ್ರೀ ಸುರೇಶ್ ಸರಳಿಕಾನ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನವೀನ ಕುಮಾರ್ ರೈ, ಕಾರ್ಯದರ್ಶಿ ನಾಗೇಶ್ ಪಾಟಾಳಿ, ಇರ್ದೆ ಉಪ್ಪಳಿಗೆ ಸರಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕ ನಾರಾಯಣ ಕೆ., ಸಮೂಹ ಸಂಪನ್ಮೂಲ ವ್ಯಕ್ತಿ ಪರಮೇಶ್ವರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯ ಗುರು ಲಿಂಗಮ್ಮ ಸ್ವಾಗತಿಸಿದರು. ಸಮೂಹ ಸಂಪನ್ಮೂಲ ವ್ಯಕ್ತಿ ಬಾಲಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ನಾಗರತ್ನ, ಪುಷ್ಪಾ, ಸಂಧ್ಯಾ, ಎಸ್.ಡಿ.ಎಂ.ಸಿ ಸದಸ್ಯರಾದ ಯಶೋಧ ಗುಮ್ಮಟೆಗದ್ದೆ, ಐತ್ತಪ್ಪ ನಾಯ್ಕ, ಯಶೋಧ ಅರಂಬ್ಯ, ಪ್ರೇಮ, ಪರಮೇಶ್ವರ ನಾಯ್ಕ, ಆನಂದ ಅರಂಬ್ಯ, ಫಾರೂಕ್ ಅತಿಥಿಗಳಿಗೆ ಹೂ ಹುಚ್ಚ ನೀಡಿ ಸ್ವಾಗತಿಸಿದರು. ಸಹ ಶಿಕ್ಷಕ ಶಶಿಕಾಂತ್ ಸಾಜ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿವಿಧ ಸ್ಪರ್ಧೆಗಳು ನಡೆಯಿತು.