ಪುತ್ತೂರು:ಹಿಂದಿನ ಸರಕಾರದ ಆಡಳಿತದಲ್ಲಿ 29 ಸಾವಿರ ಎಕ್ರೆ ವಕ್ ಆಸ್ತಿ ದುರುಪಯೋಗ ಆಗಿದ್ದು 2 ಲಕ್ಷದ 30 ಸಾವಿರ ಕೋಟಿ ರೂ.ಭ್ರಷ್ಟಾಚಾರ ನಡೆದಿರುವ ಕುರಿತು ಅಲ್ಪಸಂಖ್ಯಾತ ಆಯೋಗದ ಹಿಂದಿನ ಅಧ್ಯಕ್ಷರು ವರದಿ ನೀಡಿರುವ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿದ ಶಾಸಕ ಸಂಜೀವ ಮಠಂದೂರು ಅವರು, ಈ ಕುರಿತು ನ್ಯಾಯಾಂಗ ತನಿಖೆ ಆಗಬೇಕೆಂದು ಸರಕಾರವನ್ನು ಒತ್ತಾಯ ಮಾಡಿದ್ದಾರೆ.
ಇದು ಕರ್ನಾಟಕ ರಾಜ್ಯಕ್ಕೆ ಸಂಬಂಧಪಟ್ಟ ಬ್ರಹ್ಮಾಂಡ ಭ್ರಷ್ಟಾಚಾರದ ಒಂದು ಇಷ್ಯೂ,2 ಲಕ್ಷದ 30 ಸಾವಿರ ಕೋಟಿ ರೂ.ಅಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಅಲ್ಪಸಂಖ್ಯಾತ ಆಯೋಗದ ಆಗಿನ ಅಧ್ಯಕ್ಷರು ವರದಿ ಕೊಟ್ಟಿದ್ದಾರೆ.ಈ ವರದಿಯ ಸತ್ಯಾಂಶದ ಬಗ್ಗೆ ಉಚ್ಛನ್ಯಾಯಾಲಯಕ್ಕೆ, ಸುಪ್ರೀಂ ಕೋರ್ಟ್ಗೆ,ಲೋಕಾಯುಕ್ತಕ್ಕೆ ಹೋಗಿದ್ದು ಎಲ್ಲವೂ ಆದರೂ ಒಂದು ಸರಕಾರ ಯಾಕೆ ಚರ್ಚೆಗೆ ಕೈಗೆತ್ತಿಕೊಳ್ಳಲಿಲ್ಲ ಎನ್ನುವುದು ಮೂಲಭೂತ ಪ್ರಶ್ನೆಯಾಗಿದೆ.ಹಿಂದಿನ ಸರಕಾರ ಕ್ಯಾನಿಬಿನೆಟ್ಗೆ ಹೋದಾಗಲೂ ಇದನ್ನು ರಿಜೆಕ್ಟ್ ಮಾಡುವ ಕೆಲಸ ಮಾಡಿದೆ.ಸುಮಾರು 29 ಸಾವಿರ ಎಕ್ರೆ ವಕ್ ಜಮೀನು ದುರುಪಯೋಗ ಆಗಿದೆ ಎಂದು ವರದಿ ಕೊಡ್ತಾರೆ.ವಕ್ ಆಸ್ತಿ ಸರಕಾರದ ಆಸ್ತಿಯಾಗಿದೆ.ಈ ವರದಿ ಆಧಾರದಲ್ಲಿ, ಒಂದಷ್ಟು ಸತ್ಯಾಂಶವಿದೆ ಎಂದು ಹೇಳಿ ಕೋರ್ಟ್ ಕೂಡಾ ವಿಧಾನ ಸಭೆ, ವಿಧಾನ ಪರಿಷತ್ನಲ್ಲಿ ಈ ಬಗ್ಗೆ ಚರ್ಚೆಯಾಗಬೇಕು ಎಂದು ಹೇಳಿದಾಗಲೂ ಯಾಕೆ ಸರಕಾರ ಹಿಂದೆ ಇದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ? ಎಂದು ಪ್ರಶ್ನೆಯಾಗಿದೆ ಎಂದು ಹೇಳಿದ ಮಠಂದೂರು, 60 ಕೋಟಿ ಅವ್ಯವಹಾರ, ಭ್ರಷ್ಟಾಚಾರದ ಬಗ್ಗೆ ಇವತ್ತು ವಿರೋಧ ಪಕ್ಷದವರು ಇಲ್ಲಿ 2 ಗಂಟೆ ಚರ್ಚೆ ಮಾಡಿದ್ದಾರೆ.ಆದರೆ ಈ ವಿಚಾರದ ಬಗ್ಗೆ ಯಾಕೆ ಗಂಭೀರವಾಗಿ ಚಿಂತನೆ ಮಾಡಿಲ್ಲ ಎನ್ನುವುದು ಮೂಲಭೂತ ಪ್ರಶ್ನೆ ಎಂದರಲ್ಲದೆ,ಸರಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು.ನ್ಯಾಯಾಽಶರ ನೇಮಕ ಮಾಡಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.ಈ ಕುರಿತು ಮಂತ್ರಿಗಳನ್ನು ಕೇಳಿಬಿಟ್ಟು ಚರ್ಚಿಸೋಣ ಎಂದು ಸಭಾಧ್ಯಕ್ಷರು ಉತ್ತರಿಸಿದರು.