





ದೇಯಿ ಬೈದೆತಿ ಕೋಟಿ ಚೆನ್ನಯ ಮೂಲ ಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನವರಾತ್ರಿ ಮಹೋತ್ಸವ ಅಕ್ಟೋಬರ್ 26 ಬೆಳಿಗ್ಗೆ ಗಣಪತಿ ಹವನ ತೆನೆ ಕಟ್ಟುವ ಮೂಲಕ ಸಂಭ್ರಮದಿಂದ ಆರಂಭಗೊಳ್ಳಲಿದೆ. ನವರಾತ್ರಿಗೆ ಮಹಾ ಮಾತೆ ದೇಯಿ ಬೈದೆತಿಗೆ ವಿಶೇಷ ಅಲಂಕಾರ ಪೂಜೆ ಜರಗಲಿದೆ.



ನವರಾತ್ರಿ ಯಂಷದು ವಿವಿಧ ಭಜನಾ ತಂಡಗಳಿಂದ ಶ್ರೀ ಕ್ಷೇತ್ರದಲ್ಲಿ ನಿರಂತರ ಭಜನಾ ಸಂಕೀರ್ತನೆ ನಡೆಯಲಿರುವುದು. ಮಧ್ಯಾಹ್ನ 12.30 ಕ್ಕೆ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನೆರವೇರಲಿದ್ದು ಭಕ್ತರಿಗೆ ನವರಾತ್ರಿ ವಿಶೇಷ ಸೇವೆಗಳಾಗಿ ಮಹಾ ಮಾತೆ ದೇಯಿ ಬೈದೆತಿಗೆ ಹೂವಿನ ಅಲಂಕಾರ ಮತ್ತು ಅನ್ನದಾನ ಸೇವೆ ಹಾಗೂ ನವರಾತ್ರಿ ಪೂಜಾ ಸೇವೆ ಮಾಡುವ ಅವಕಾಶ ಇದೆ. ಅಕ್ಟೋಬರ್ 5 ರ ಗುರುವಾರ ವಿಜಯ ದಶಮಿಯ ಪರ್ವ ದಿನವಾಗಿದ್ದು ಅಂದು ಸರಸ್ವತಿ ಪೂಜೆ ಹಾಗೂ ಪೂರ್ವಾಹ್ನ 8 ಘಂಟೆಯಿಂದ ಮಧ್ಯಾಹ್ನ ದವರೆಗೆ ಪುಟಾಣಿ ಗಳಿಗೆ ಅಕ್ಷರಾಭ್ಯಾಸ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ರಾದ ಪೀತಾಂಬರ ಹೆರಾಜೆ ತಿಳಿಸಿದ್ದಾರೆ.














