ಕಂಬಳಿಹುಳ ಜೀವನ ಚಕ್ರ ದಾಖಲು ರಾಷ್ಟ್ರಮಟ್ಟದ ಸ್ಪರ್ಧೆ ; ಪುಣಚ ಮೂಡಂಬೈಲು ಶಾಲೆಗೆ ಪ್ರಶಸ್ತಿ

0

ಪುತ್ತೂರು : ನವಿಮುಂಬಯಿ ಮೂಲದ ಐ ನೇಚರ್‌ವಾಚ್ ಫೌಂಡೇಶನ್ ಶಾಲಾ ಮಕ್ಕಳಿಗಾಗಿ ಆಗಸ್ಟ್‌ನಲ್ಲಿ ಆಯೋಜಿಸಿದ್ದ ಕ್ಯಾಟರ್‌ಪಿಲ್ಲರ್ ರೇರಿಂಗ್ ಪ್ರಾಜೆಕ್ಟ್ ಎಂಬ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಬಂಟ್ವಾಳ ತಾಲೂಕು, ಪುಣಚ ಗ್ರಾಮದ ಮೂಡಂಬೈಲು ಶಾಲೆಯ ವಿದ್ಯಾರ್ಥಿಗಳು ಅತೀ ಹೆಚ್ಚು ಯಶಸ್ವಿ ಜೀವನಚಕ್ರ ದಾಖಲಿಸುವ ಮೂಲಕ ವಿಜೇತರಾಗಿದ್ದಾರೆ.

ಮಕ್ಕಳು ತಮ್ಮ ಗಿಡಗಳ ಮೇಲೆ ಕಾಣಸಿಗುವ ಕಂಬಳಿಹುಳವನ್ನು ಸಾಕಿ ಚಿಟ್ಟೆ ಅಥವಾ ಪತಂಗ ಆಗುವವರೆಗೂ ಗಮನಿಸಿ ವಿವಿಧ ಹಂತಗಳನ್ನು ದಾಖಲಿಸಬೇಕಿತ್ತು. ರಾಷ್ಟ್ರ ಮಟ್ಟದಲ್ಲಿ 40 ಶಾಲೆಗಳಿಂದ 250 ಮಕ್ಕಳು ಭಾಗವಹಿಸಿದ್ದರು. ಮೂಡಂಬೈಲು ಶಾಲೆಯ 20 ವಿದ್ಯಾರ್ಥಿಗಳು ಭಾಗವಹಿಸಿದ್ದು, ವಿದ್ಯಾರ್ಥಿಗಳು 42 ಕಂಬಳಿ ಹುಳುಗಳು ವಯಸ್ಕ ಚಿಟ್ಟೆ ಅಥವಾ ಪತಂಗಗಳಾಗಿ ಪ್ರಕೃತಿಯ ಮಡಿಲು ಸೇರಿವ ಪ್ರಕ್ರಿಯೆಯನ್ನು ಗಮನಿಸಿ ದಾಖಲಿಸಿದ್ದರು.

ವಿಜೇತ ವಿದ್ಯಾರ್ಥಿಗಳಿಗೆ ಐ ನೇಚರ್‌ವಾಚ್ ಫೌಂಡೇಷನ್ ಸಂಸ್ಥೆಯ ವತಿಯಿಂದ ಪ್ರಮಾಣ ಪತ್ರಗಳು ಬಂದಿವೆ. ಜತೆಗೆ ಭಾರತದ ಪತಂಗ ಮಹಿಳೆ ಎಂದು ಖ್ಯಾತರಾಗಿರುವ ಡಾ| ವಿ. ಶುಭಲಕ್ಷ್ಮೀ ಅವರು ಬರೆದಿರುವ ಫೀಲ್ಡ್ ಗೈಡ್ ಟು ಇಂಡಿಯನ್ ಮೋಥ್ಸ್ ಎನ್ನುವ ಪುಸ್ತಕ ಶಾಲೆಗೆ ಉಡುಗೊರೆಯಾಗಿ ನೀಡಲಾಗಿದೆ.

LEAVE A REPLY

Please enter your comment!
Please enter your name here