ಪುತ್ತೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಾಪನಾ ದಿನವಾದ ವಿಜಯದಶಮಿಯಂದು ಅ.5ರ ಬೆಳಿಗ್ಗೆ ಪುತ್ತೂರು ಪೇಟೆಯಲ್ಲಿ ಗಣವೇಷಧಾರಿ ಸ್ವಯಂ ಸೇವಕರಿಂದ ಘೋಷ್ ಸಹಿತ ಪಥಸಂಚಲನ ನಡೆಯಿತು.
ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ಬೆಳಗ್ಗೆ 6.30ಕ್ಕೆ ಗಣವೇಷಧಾರಿ ಸ್ವಯಂ ಸೇವಕರು ಗದ್ದೆಯಿಂದ ಹೊರಟು ಆದರ್ಶ ಆಸ್ಪತ್ರೆ ರಸ್ತೆಯಾಗಿ ಮುಖ್ಯರಸ್ತೆಯಲ್ಲಿ ತೆರಳಿ ಗಾಂಧಿಕಟ್ಟೆಯ ಬಳಿಯಂದ ದೇವಸ್ಥಾನ ಗದ್ದೆಯಲ್ಲಿ ಸಮಾಪನಗೊಂಡಿತ್ತು.