ಮುಕ್ರಂಪಾಡಿ ಎಸ್‌ಆರ್‌ಕೆ ಲ್ಯಾಡರ್‍ಸ್‌ನಲ್ಲಿ 23ನೇ ಸಂಭ್ರಮಾಚರಣೆ – ಆಯುಧ ಪೂಜೆ

0

ನಾಲ್ವರು ಸಿಬ್ಬಂದಿಗಳಿಗೆ – ಭಜನಾ ಸಾಧಕರಿಗೆ ಸನ್ಮಾನ

ಪುತ್ತೂರು: ಕೃಷಿಕರಿಗೆ ಬೇಕಾದ ಸಲಕರಣೆಗಳು, ಅವರಿಗೆ ಬೇಕಾದ ರೀತಿಯಲ್ಲಿ ಕ್ಲಪ್ತ ಸಮಯಕ್ಕೆ ಮಾಡಿಕೊಡುತ್ತಿರುವ ಕೃಷಿಕರ ಬೆನ್ನೆಲುಬು ಮುಕ್ರಂಪಾಡಯಲ್ಲಿರುವ ಎಸ್.ಆರ್.ಕೆ.ಲ್ಯಾಡರ್‍ಸ್‌ನಲ್ಲಿ 23ನೇ ವರ್ಷದ ಸಂಭ್ರಮಾಚರಣೆ ಮತ್ತು ಆಯುಧ ಪೂಜೆ ಕಾರ್ಯಕ್ರಮ ಅ.4ರಂದು ನಡೆಯಿತು. ಸಮಾರಂಭದಲ್ಲಿ ನಾಲ್ವರು ಸಿಬ್ಬಂದಿಗಳಿಗೆ ಮತ್ತು ಭಜನಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮತ್ತು ಸಿಬ್ಬಂದಿಗಳಿಗೆ ನಡೆದ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.


ಸಾಧಿಸುವ ಛಲ ಕೇಶವಣ್ಣರದ್ದು:
ನ್ಯಾಯವಾದಿ, ಜಿಎಸ್‌ಟಿ ಸಲಹೆಗಾರ ರಾಮಕೃಷ್ಣ ಭಟ್ ಅವರು ಮಾತನಾಡಿ ಸಾಧಿಸುವ ಛಲ ಕೇಶವಣ್ಣನದು, ಅವರು ತಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳುವ ಶಕ್ತಿಯನ್ನು ಭಗವಂತ ಕೊಡಲಿಎಂದು ಹಾರೈಸಿದರು.

ತಾನು ಗಳಿಸಿದ ಸಂತೋಷವನ್ನು ಸಮಾಜಕ್ಕೆ ಅರ್ಪಣೆ ಮಾಡಿದವರು:
ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರತಿಯೊಂದು ವಿಷಯದಲ್ಲಿ ಕೆಲಸ ಮಾಡಿದಾಗ ಅದರ ಯಶಸ್ಸಿನ ಕೊನೆಗೆ ದೇವರ ಅನುಗ್ರಹ ಅಗತ್ಯ. ಆ ದೇವರ ಅನುಗ್ರಹ ಕೇಶವರಿಗೆ ಸಿಕ್ಕಿದೆ. ಅನೇಕ ಎಡರುತೊಡರುಗಳನ್ನು ಮೆಟ್ಟಿ ಎಂದು ಕೂಡಾ ಎದೆಗುಂದದೆ ಧೈರ್ಯಶಾಲಿಯಾಗಿ ಮುನ್ನುಗಿದ ಕಾರಣ ಇವತ್ತು ಕೇಶವ ಅವರು ಈ ರೀತಿಯ ಸ್ಥಾನಕ್ಕೆ ಬರಲು ಸಾಧ್ಯವಾಗಿದೆ. ಇವತ್ತು ಕೇಶವ ಅವರು ತಾನು ಗಳಿಸಿದ ಸಂತೋಷವನ್ನು ಸಮಾಜಕ್ಕೆ ಅರ್ಪಣೆ ಮಾಡಿದ್ದಾರೆ. ಒಳ್ಳೆಯ ಕೆಲಸದಲ್ಲಿ ನಮ್ಮ ಶಿಷ್ಯಂದಿರು ತೊಡಗಿಸಿಕೊಂಡ ನಮಗೆ ತೃಪ್ತಿಯಾಗುತ್ತದೆ.

ಕೇಶವಣ್ಣರಿಂದ ಸಮಾಜಮುಖಿ ಪರಿವರ್ತನೆ:
ಆತೂರು ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯದುಶ್ರೀ ಗೌಡ ಆನೆಗುಡ್ಡೆ ಅವರು ಮಾತನಾಡಿ ಉದ್ದಿಮೆ ನಡೆಸಿ ಸಂಪನ್ಮೂಲ ಕ್ರೋಢಿಕರಿಸು, ತನ್ನ ಸಂಪತ್ತಿನಲ್ಲಿ ಇಂತಿಷ್ಟು ಸಮಾಜಕ್ಕೆ, ಬಂಧುಗಳಿಗೆ ನೀಡುವ ಮೂಲಕ ಸಮಾಜಮುಖಿ ಪರಿವರ್ತನೆ ಮಾಡಿದ್ದಾರೆ ಎಂದರು.

ರೈತನಿಗೆ ಬೆನ್ನೆಲಾಬಿಗಿರುವ ಉದ್ದಿಮೆ:
ಪುತ್ತೂರು ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸುನಿಲ್ ಕುಮಾರ್ ಅವರು ಮಾತನಾಡಿ ಯಂತ್ರಗಳಂದ ಸೇವೆ ಪಡೆಯುವ ಜೊತೆಗೆ ಅದಕ್ಕೆ ಪೂಜೆ ಮಾಡುವ ಮೂಲಕ ಭಕ್ತಿಯ ಮಾರ್ಗವನ್ನು ಕಂಡು ಕೊಂಡ ಕೇಶವ ಅವರು ದೇಶದ ಬೆನ್ನೆಲು ರೈತನಿಗೆ ಬೆನ್ನೆಲುಬು ಆಗಿ ಉದ್ದಿಮೆ ನಡೆಸುತ್ತಿರುವುದು ಸಮಾಜಕ್ಕೆ ಮಾದರಿ ಎಂದರು.

ಸನ್ಮಾನ:
ಸಂಸ್ಥೆಯ ಸಿಬ್ಬಂದಿಗಳಾದ ಅಶೋಕ್, ನೀತಾ, ಚಂದ್ರಶೇಖರ್, ಗಣೇಶ್ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಶ್ರವಣ್ ಮತ್ತು ಶ್ರಾವ್ಯ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು. ಭಜನಾ ಸಾಧಕರಾದ ಕಡಬ ತಾಲೂಕಿನ ಭಜನಾ ಪರಿಷತ್‌ನ ಅಧ್ಯಕ್ಷ ಸುಂದರ ಗೌಡ , ಭಜನಾ ಸಾಧಕ ಪ್ರಶಸ್ತಿ ಪುರಸ್ಕೃತ ಜನಾರ್ದನ ಗೌಡ ಅವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ವಾರ್ಷಿಕ ಸಂಭ್ರಮದ ಅಂಗವಾಗಿ ಕ್ರೀಡಾಕೂಟ ಏರ್ಪಡಿಸಲಾಗಿದ್ದು, ಅದರಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು. ಸಂಸ್ಥೆಯ ಸಿಬ್ಬಂದಿ ಸ್ವಾತಿ ರೈ ಕೈಕಾರ ಪ್ರಾಸ್ತಾವಿಕವಾಗಿ ಮಾತನಾಡಿ ಕೃಷಿಕರ ಬೆನ್ನೆಲುಬು ಆಗಿ ಕೆಲಸ ಮಾಡುತ್ತಿರುವ ಎಸ್‌ಆರ್‌ಕೆ ಲ್ಯಾಡರ್‍ಸ್‌ನಲ್ಲಿ 50ಕ್ಕೂ ಹೆಚ್ಚು ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಸಹಿತ ಕರ್ನಾಟಕದ 15ಜಿಲ್ಲೆಗಳಲ್ಲಿ, ಗೋವ, ತೆಲಂಗಾಣ, ಆಂಧ್ರಾ, ಪ್ರದೇಶ ತಮ್ಮ ಕಾರ್ಯ ವಿಸ್ತಿರಿಸಿದೆ. ವಿವಿಧ ಮಾದರಿಯ ಹೊಸ ವಿನ್ಯಾಸದ ಅಲ್ಯೂಮಿನಿಯಂ ಏಣಿಗಳು, ವಿದ್ಯುತ್ ಸುರಕ್ಷತಾ ಪೈಬರ್ ಏಣಿಗಳು, ಹೊಸದಾಗಿ ಕಾಳು ಮೆಣಸು ಕೋಡು ಬೇರ್ಪಡಿಸುವ ಹೊಸ ಯಂತ್ರ ಸಿದ್ದಗೊಳ್ಳುತ್ತಿದೆ. ಒಟ್ಟನಲ್ಲಿ ಸಂಸ್ಥೆ ಕೃಷಿಕರಿಗೆ ಉತ್ತಮ ಬೆನ್ನೆಲುಬಾಗಿ ಕೆಲಸ ಮಾಡುತ್ತಿದೆ ಎಂದರು. ಅಶೋಕ್, ಶ್ರಾವ್ಯ, ರವಿಕಲ್ಲಡ್ಕ, ಪ್ರತಿಭಾ, ಚಂದ್ರಶೇಖರ್ ಅತಿಥಿಗಳನ್ನು ಗೌರವಿಸಿದರು. ರವಿ ಕಲ್ಲಡ್ಕ ಪ್ರಾರ್ಥಿಸಿದರು. ಎಸ್.ಆರ್.ಕೆ. ಲ್ಯಾಡರ್‍ಸ್ ಸಂಸ್ಥೆಯ ಮಾಲಕ ಕೇಶವ ಎ ಸ್ವಾಗತಿಸಿದರು. ದಿನೇಶ್ ನೆಟ್ಟಣ ಕಾರ್ಯಕ್ರಮ ನಿರೂಪಿಸಿದರು. ಮಾಲತಿ ವಂದಿಸಿದರು. ಸಭಾ ಕಾರ್ಯಕ್ರಮದ ಆರಂಭದಲ್ಲಿ ನೃತ್ಯ ಭಜನೆ ನಡೆಯಿತು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here