-ರೂ 1ಲಕ್ಷದ 27ಸಾವಿರ ಜೀರ್ಣೋದ್ಧಾರ ಸಮಿತಿಗೆ ಹಸ್ತಾಂತರ
ಕಾಣಿಯೂರು: ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಹಾಗೂ ಕಾಳಿಕಾಂಭ ದೇವಸ್ಥಾನ ಕರಿಮಜಲು ಪುಣ್ಚತ್ತಾರು ಇದರ ಜೀರ್ಣೊದ್ದಾರದ ಅಂಗವಾಗಿ ಮನೆ ಮನೆಗೆ ನವರಾತ್ರಿ ವೇಷ ವನ್ನು ಹಾಕಿಕೊಂಡು ಆ ಮೂಲಕ ಆರ್ಥಿಕ ಕ್ರೋಡಿಕರಣದ ಪ್ರಯತ್ನವನ್ನು ಮಾಡಿಲಾಯಿತು. ಯಾವುದೇ ಸಂಭಾವನೆ ಇಲ್ಲದೆ 24 ಜನ ಯುವಕರ ನಿರಂತರ ಪ್ರಯತ್ನದೊಂದಿಗೆ ಸಂಗ್ರಹಿಸಿದ ರೂ 1 ಲಕ್ಷದ 27 ಸಾವಿರವನ್ನು ಅ 4ರಂದು ನಡೆದ ಆಯುಧ ಪೂಜೆ ಕಾರ್ಯಕ್ರಮದಂದು ದೈವಸ್ಥಾನದ ಮೊಕ್ತೇಸರರು ಹಾಗೂ ಭಕ್ತಾಧಿಗಳ ಸಮ್ಮುಖದಲ್ಲಿ ಜೀರ್ಣೋದ್ಧಾರ ಸಮಿತಿಗೆ ಹಸ್ತಾಂತರಿಸಲಾಯಿತು.
ಅಭಿನಂದನಾ ಸಭೆ:
ನವರಾತ್ರಿ ವೇಷಧಾರಿಗಳಿಗೆ ಹಾಗೂ ಸವಾರಿ ಸಂಧರ್ಭದಲ್ಲಿ ಉಪಹಾರ, ಊಟದ ವ್ಯವಸ್ಥೆಯನ್ನು ಮಾಡಿ ಸಹಕರಿಸಿದ ಎಲ್ಲರಿಗೂ ಅಭಿನಂಧನಾ ಕಾರ್ಯಕ್ರಮ ನಡೆಯಿತು.ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಿತು.ಈ ಸಂದರ್ಭದಲ್ಲಿ ಮೊಕ್ತೆಸರರಾದ ವೆಂಕಟರಮಣ ಆಚಾರ್ಯ, ಜನಾರ್ದನ ಆಚಾರ್ಯ, ಕ್ರಷ್ಣ ಆಚಾರ್ಯ,
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಶೇಷಪ್ಪ ಬೆದ್ರಂಗಳ, ಗೌರವ ಸಲಹೆಗಾರರಾದ ದೇವಿಪ್ರಸಾದ್ ಕಾನತ್ತೂರು, ಗಣೇಶ್ ಉದನಡ್ಕ, ಸಂಜೀವ ರೈ ಪೈಕ, ಸೀತರಾಮ ಮರಕ್ಕಡ ಉಪಸ್ಥಿತರಿದ್ದರು.ರವಿಶಂಕರ್ ಎನ್. ಟಿ ನಾವೂರು ಕಾರ್ಯಕ್ರಮ ನಿರೂಪಿಸಿದರು.