ಮೊಟ್ಟೆತ್ತಡ್ಕ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವಕ್ಕೆ ತೆರೆ

0

ಪುತ್ತೂರು: ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಮಿಶನ್‌ಮೂಲೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಸೆ.26 ರಿಂದ ಅ.5ರ ವರೆಗೆ ನಡೆದಿರುವ ವೈಭವದ ಸಾರ್ವಜನಿಕ ನವರಾತ್ರಿ ಉತ್ಸವವು ಯಶಸ್ವಿಯಾಗಿ ತೆರೆ ಕಂಡಿತು.

ಪ್ರಧಾನ ಅರ್ಚಕರಾಗಿ ಉದಯನಾರಾಯಣ ಕಲ್ಲೂರಾಯ ಸಂಪ್ಯ, ಸಹಾಯಕ ಅರ್ಚಕರಾಗಿ ರಮೇಶ್ ಅಯ್ಯರ್ ಮುಕ್ರಂಪಾಡಿರವರು ಶ್ರೀ ಕ್ಷೇತ್ರದಲ್ಲಿ ಹತ್ತು ದಿನಗಳ ಕಾಲ ಮಹಾಪೂಜೆ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಶ್ರೀ ಕ್ಷೇತ್ರದಲ್ಲಿ ಪ್ರತಿ ದಿನ ರಾತ್ರಿ ಹಲವು ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಸೆಪ್ಟೆಂಬರ್ 29 ರಿಂದ ಅ.4ರ ಮಂಗಳವಾರದವರೆಗೂ ರಾತ್ರಿ ವಾಹನಗಳಿಗೆ ಆಯುಧಪೂಜೆ ನಡೆಯಿತು. ಬುಧವಾರ(ಅ.5) ರಾತ್ರಿ ವಿಜಯದಶಮಿ ದಿನದಂದು ಮಧ್ಯಾಹ್ನ ಮಕ್ಕಳಿಗೆ ಅಕ್ಷರಾಭ್ಯಾಸ, ವಿಜಯದಶಮಿ ಪೂಜೆ, ಪ್ರಸಾದ ವಿತರಣೆ ಮತ್ತು ನವಾನ್ನ ಭೋಜನ ಜರಗಿತು.

ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಮೋಹನ್ ರೈ ಮಿಶನ್‌ಮೂಲೆ, ಪ್ರಭಾರ ಅಧ್ಯಕ್ಷ ರಾಮ ಶೆಟ್ಟಿ, ಕಾರ್ಯದರ್ಶಿ ಕೆ.ಬಿ ಶೇಖರ, ಜೊತೆ ಕಾರ್ಯದರ್ಶಿ ಲಕ್ಷ್ಮಣ ಶೆಟ್ಟಿ, ಕೋಶಾಧಿಕಾರಿ ಮೋಹನ್ ಕುಮಾರ್, ಲೆಕ್ಕಪರಿಶೋಧಕರಾದ ಬಿ.ವಿಶ್ವನಾಥ ರೈ ಮಿಶನ್‌ಮೂಲೆ, ಆಡಳಿತ ಸಮಿತಿ ಸದಸ್ಯರಾದ ರಮೇಶ್ ರೈ ಮಿಶನ್‌ಮೂಲೆ, ಸತೀಶ್ ರೈ ಮಿಶನ್‌ಮೂಲೆ ಸಹಿತ ನೂರಾರು ಭಕ್ತಾಭಿಮಾನಿಗಳು ಹತ್ತು ದಿನಗಳ ಧಾರ್ಮಿಕ ವಿಧಿವಿಧಾನದಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here