ಪುತ್ತೂರು ಅ.9: ಮಂಗಳೂರಿನ ಶಾರದಾ ಕಾಲೇಜಿನ ಸಹಯೋಗದೊಂದಿಗೆ ಮಂಗಳ ಕ್ರೀಡಾಂಗಣದಲ್ಲಿ ನಡೆದ ವಿದ್ಯಾ ಭಾರತಿ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿವೇಕಾನಂದ ಪದವಿಪೂರ್ವಕಾಲೇಜಿನ ಬಾಲಕ ತರುಣ ವಿಭಾಗದಲ್ಲಿ ಸಮಸ್ತ ಚಾಂಪಿಯನ್ಶಿಪ್ ತಂಡ ಪ್ರಶಸ್ತಿ ಪಡೆದುಕೊಂಡರು. ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಗಗನ್ ಬಾಲಕರ ವಿಭಾಗದಲ್ಲಿ ವೈಯಕ್ತಿಕಚಾಂಪಿಯನ್ ಪಡೆದರು.ಈ ಮೂಲಕ ಬಳ್ಳಾರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸ್ಫರ್ಧೆಗೆ ಆಯ್ಕೆಗೊಂಡಿದ್ದಾರೆ.
ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಪ್ರಮಥ್ರೈ 1500ಮೀಟರ್ ಓಟದ ಸ್ಫರ್ಧೆಯಲ್ಲಿ ದ್ವಿತೀಯ ಸ್ಥಾನ ಹಾಗೂ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಜೈಶೀಲ್ ರೈ ತೃತೀಯ ಸ್ಥಾನ, ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ರಜತ್ ಆರ್ ಭಟ್ 100 ಮೀಟರ್ ಓಟದ ಸ್ಫರ್ಧೆಯಲ್ಲಿ ಪ್ರಥಮ ಹಾಗೂ ಲಾಂಗ್ಜಂಪ್ ನಲ್ಲಿ ತೃತೀಯ, ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಬ್ರಿಜೇಶ್ ಜಿ ರೈ 200 ಮೀಟರ್ ಓಟದ ಸ್ಫರ್ಧೆಯಲ್ಲಿ ತೃತೀಯ ಹಾಗೂ 800 ಮೀಟರ್ ಓಟದ ಸ್ಫರ್ಧೆಯಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಜೈಶೀಲ್ ರೈ ದ್ವಿತೀಯ, ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಗಗನ್ ಗುಂಡುಎಸೆತ ಸ್ಫರ್ಧೆಯಲ್ಲಿ ದ್ವಿತೀಯ ಸ್ಥಾನ, ಡಿಸ್ಕಸ್ ಎಸೆತದಲ್ಲಿ ಪ್ರಥಮ ಮತ್ತು ಹ್ಯಾಮರ್ಥ್ರೋ ಸ್ಫರ್ಧೆಯಲ್ಲಿ ಪ್ರಥಮ, ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ನಿಹಾಲ್ರಾಜ್ ಲಾಂಗ್ಜಂಪ್ ಸ್ಫರ್ಧೆಯಲ್ಲಿ ದ್ವಿತೀಯ, ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಆಶ್ಲೇಷ್ ವರ್ಮ ಹ್ಯಾಮರ್ಥ್ರೋ ಸ್ಫರ್ಧೆಯಲ್ಲಿ ತೃತೀಯ, 200 ಮೀಟರ್ಓಟದ ಸ್ಫರ್ಧೆಯಲ್ಲಿದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಲೋಹಿತ್ ಕೆ. ಡಿ ಪ್ರಥಮ, 100 ಮೀಟರ್ ಓಟದ ಸ್ಫರ್ಧೆಯಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಪವನ್ಕುಮಾರ್ ಪ್ರಥಮ, 4×100 ಮೀಟರ್ ರೀಲೆ ಸ್ಫರ್ಧೆಯಲ್ಲಿ ರಜತ್, ಪವನ್, ಲೋಹಿತ್ ಮತ್ತು ಬ್ರಿಜೇಶ್ ಒಳಗೊಂಡ ತಂಡ ಪ್ರಥಮ, ಜಾವೆಲಿನ್ ಎಸೆತ ಸ್ಫರ್ಧೆಯಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಧನುಷ್ ಕೆ ಪ್ರಥಮ ಮತ್ತು ಬ್ರಿಜೇಶ್ರೈ ತೃತೀಯ, ಟ್ರಿಪಲ್ಜಂಪ್ ಸ್ಫರ್ಧೆಯಲ್ಲಿ ನಿಹಾಲ್ ಪ್ರಥಮ, 400 ಮೀಟರ್ ಓಟದ ಸ್ಫರ್ಧೆಯಲ್ಲಿ ರಜತ್ ಭಟ್ ಪ್ರಥಮ ಹಾಗೂ ಧನುಷ್ ಎಲ್ ದ್ವಿತೀಯ, ಹರ್ಡಲ್ಸ್ಆಟದಲ್ಲಿ ಪ್ರಮಥ್ರೈ ಪ್ರಥಮ ಮತ್ತು ಧನುಷ್ಎಲ್ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಬಾಲಕಿಯರ ವಿಭಾಗದಲ್ಲಿ 400 ಮೀಟರ್ ಓಟದ ಸ್ಫರ್ಧೆಯಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿನೀತ ದ್ವಿತೀಯ ಸ್ಥಾನ ಪಡೆದಿದ್ದಾರೆ.ಈ ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.