ವೈಟ್ ಲಿಫ್ಟಿಂಗ್: ಫಿಲೋಮೀನಾ ಪ್ರೌಢಶಾಲಾ ವಿದ್ಯಾರ್ಥಿ ಸುಹಾನ್ ರೈ ಜೆ. ರಾಷ್ಟ್ರಮಟ್ಟಕ್ಕೆ ಆಯ್ಕೆ

0

ಪುತ್ತೂರು: ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯಾ (SGFI) ಇವರ ವತಿಯಿಂದ ಆಯೋಜಿಸಲ್ಪಡುವ ರಾಷ್ಟ್ರಮಟ್ಟದ ವೈಟ್ ಲಿಫ್ಟಿಂಗ್ ಸ್ಪರ್ಧೆಗೆ ಸಂತ ಫಿಲೋಮಿನಾ ಪ್ರೌಢಶಾಲಾ ವಿದ್ಯಾರ್ಥಿ ಸುಹಾನ್ ರೈ ಜೆ ನ.21 ರಿಂದ ಡಿ.3ರವರೆಗೆ ಅರುಣಾಚಲ್ ಪ್ರದೇಶದ ಇಟ ನಗರದಲ್ಲಿ ನಡೆಯುವ ರಾಷ್ಟ್ರಮಟ್ಟದ ವೈಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಇವರು ಬೆಟ್ಟಂಪಾಡಿ ಚೆಲ್ಲಡ್ಕ ನಿವಾಸಿ ಜಯಪ್ರಸಾದ್ ರೈ (ಶಾಲಾ ಹಿರಿಯ ವಿದ್ಯಾರ್ಥಿ, ರಾಷ್ಟ್ರಮಟ್ಟದ ವೈಟ್ ಲಿಫ್ಟರ್ ಹಾಗೂ ತರಬೇತುದಾರರು) ಹಾಗೂ ಸುಪ್ರಿಯ ರೈ ಇವರ ಪುತ್ರ. ಇವರು ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ನರೇಶ್ ಲೋಬೊ ಹಾಗೂ ಧನ್ಯಶ್ರೀ ಇವರಿಂದ ತರಬೇತಿಯನ್ನು ಪಡೆದಿರುತ್ತಾರೆ. ಇವರನ್ನು ಶಾಲಾ ಸಂಚಾಲಕರು, ಆಡಳಿತ ಮಂಡಳಿ, ಮುಖ್ಯ ಗುರುಗಳು, ರಕ್ಷಕ ಶಿಕ್ಷಕ ಸಂಘ, ಹಿರಿಯ ವಿದ್ಯಾರ್ಥಿ ಸಂಘ, ಶಿಕ್ಷಕ ಶಿಕ್ಷಕೇತರ ವೃಂದ ಹಾಗು ವಿದ್ಯಾರ್ಥಿಗಳು ಅಭಿನಂದಿಸಿರುತ್ತಾರೆ.

LEAVE A REPLY

Please enter your comment!
Please enter your name here