ಪುತ್ತೂರು: ವಿದ್ಯಾಭಾರತಿ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಶಾರದಾ ವಿದ್ಯಾಲಯ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಅಕ್ಟೋಬರ್ 7 ಮತ್ತು 8 ರಂದು ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ, 240 ಅಂಕಗಳೊಂದಿಗೆ ಸಮಗ್ರ ತಂಡ ಪ್ರಶಸ್ತಿಯೊಂದಿಗೆ ಅಕ್ಟೋಬರ್ 11 ರಿಂದ ಬಳ್ಳಾರಿಯ ಬಾಲ ವಿದ್ಯಾಲಯದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.
ಶಿಶು ವರ್ಗದಲ್ಲಿ ವಂಶಿತಾ (ನೆಕ್ಕರಾಜೆ ವಸಂತ ಕುಮಾರ್, ಸುಜಾತ ದಂಪತಿ ಪುತ್ರಿ) ಉದ್ದ ಜಿಗಿತ (ಪ್ರಥಮ), 200 ಮೀಟರ್ (ದ್ವಿತೀಯ), 100 ಮೀಟರ್ (ತೃತೀಯ), 4×100 ಮೀಟರ್ ರಿಲೇ (ಪ್ರಥಮ), ಆತ್ಮಿ.ಕೆ.ಎಲ್ (ಕಂಬಳದಡ್ಡ ಲಕ್ಷ್ಮಣ ಗೌಡ, ಹೇಮಲತಾ ದಂಪತಿ ಪುತ್ರಿ), 200 ಮೀಟರ್ (ಪ್ರಥಮ ), 100 ಮೀಟರ್ (ದ್ವಿತೀಯ), 4×100 ಮೀಟರ್ ರಿಲೇ (ಪ್ರಥಮ), ಸಾನ್ವಿ ಆನಂದ್ (ನೆರಿಗೇರಿ ಆನಂದ್, ವಾಣಿಶ್ರೀ ದಂಪತಿ ಪುತ್ರಿ) ಎತ್ತರ ಜಿಗಿತ (ಪ್ರಥಮ), ಉದ್ದ ಜಿಗಿತ (ದ್ವಿತೀಯ), 4×100 ಮೀಟರ್ ರಿಲೇ (ಪ್ರಥಮ), ಅಕ್ಷರಾ.ಪಿ.ಶೆಟ್ಟಿ (ಕೊಡಂಗೆಮಾರ್ ಪ್ರದೀಪ್ ಶೆಟ್ಟಿ, ಮಮತಾ ಶೆಟ್ಟಿ ದಂಪತಿ ಪುತ್ರಿ) ಶಾಟ್ ಪುಟ್ (ಪ್ರಥಮ), ಸ್ನಿಗ್ಧಾ.ಎನ್.ಎಸ್ (ಸಾಲ್ತಾಡಿ ನಾರಾಯಣ.ಕೆ, ಸುಹಾಸಿನಿ ದಂಪತಿ ಪುತ್ರಿ) ಶಾಟ್ ಪುಟ್ (ತೃತೀಯ) , ಪೃಥ್ವಿಕಾ ಆಚಾರ್ಯ (ಪರ್ಲಡ್ಕ ಚಿದಾನಂದ , ವೀಣಾ ದಂಪತಿ ಪುತ್ರಿ) 4×100 ಮೀಟರ್ ರಿಲೇ (ಪ್ರಥಮ), ಬಾಲಕರ ವಿಭಾಗದಲ್ಲಿ ಸಾಕ್ಷಿನ್.ಆರ್.ರೈ (ಎಣ್ಮೂರುಗುತ್ತು ರವೀಂದ್ರನಾಥ್ ರೈ, ಜ್ಯೋತಿಲಕ್ಷ್ಮೀ ದಂಪತಿ ಪುತ್ರ) ಎತ್ತರ ಜಿಗಿತದಲ್ಲಿ ತೃತೀಯ ಬಹುಮಾನ ಗಳಿಸಿದ್ದಾರೆ.
ಬಾಲ ವರ್ಗದ ಬಾಲಕಿಯರ ವಿಭಾಗದಲ್ಲಿ ಶ್ರೀವರ್ಣಾ (ಪಾಲೆತ್ತಡಿ ಧರ್ಣಪ್ಪ ಗೌಡ, ಮಮತಾ.ಪಿ. ದಂಪತಿ ಪುತ್ರಿ) ಎತ್ತರ ಜಿಗಿತ (ಪ್ರಥಮ), ಉದ್ದ ಜಿಗಿತ (ಪ್ರಥಮ), 80 ಮೀಟರ್ ಹರ್ಡಲ್ಸ್ (ಪ್ರಥಮ), 4×100 ಮೀಟರ್ ರಿಲೇ (ಪ್ರಥಮ), ಕೃತಿ,ಕೆ (ಬನ್ನೂರು ಕೊರಗಪ್ಪ ಗೌಡ, ವನಿತಾ.ಎ ದಂಪತಿ ಪುತ್ರಿ) 600 ಮೀಟರ್ (ಪ್ರಥಮ), 400 ಮೀಟರ್ (ದ್ವಿತೀಯ), 4×100 ಮೀಟರ್ ರಿಲೇ (ಪ್ರಥಮ), ಡಿಂಪಲ್ ಶೆಟ್ಟಿ(ಮೆರ್ಲ ನಿವಾಸಿ ಉದಯ ಶೆಟ್ಟಿ ಮತ್ತು ಸುನೀತಾ ಶೆಟ್ಟಿ ದಂಪತಿ ಪುತ್ರಿ) 200 ಮೀಟರ್ (ದ್ವಿತೀಯ), 100 ಮೀಟರ್ (ದ್ವಿತೀಯ), ಉದ್ದ ಜಿಗಿತ (ದ್ವಿತೀಯ), 4×100 ಮೀಟರ್ ರಿಲೇ (ಪ್ರಥಮ), ಅಮೃತಾ.ಬಿ.ಎ (ಬನ್ನೂರು ಪಟ್ಟೆ ಅಮರನಾಥ್, ಲತಾ ಕುಮಾರಿ ದಂಪತಿ ಪುತ್ರಿ) 600 ಮೀಟರ್ (ದ್ವಿತೀಯ), 400 ಮೀಟರ್ (ತೃತೀಯ), 4×100 ಮೀಟರ್ ರಿಲೇ (ಪ್ರಥಮ), ದಿವಿಜ್ಞಾ (ಕುರಿಯ ಶಿವಪ್ರಸಾದ್, ಪವಿತ್ರಾ ದಂಪತಿ ಪುತ್ರಿ) 200 ಮೀಟರ್ (ತೃತೀಯ), 100 ಮೀಟರ್ (ತೃತೀಯ), ಜೀವಿಕಾ (ಹಲಂಗ ವಿಶ್ವನಾಥ ಗೌಡ, ಯಶೋದಾ ದಂಪತಿ ಪುತ್ರಿ) ಎತ್ತರ ಜಿಗಿತ (ತೃತೀಯ), ಮಾನ್ಯ ಲಕ್ಷ್ಮೀ (ಲಕ್ಷ್ಮೀಬೆಟ್ಟ ಕೃಷ್ಣಪ್ರಸಾದ್, ಮಂಜುಳಾ ದಂಪತಿ ಪುತ್ರಿ) ಚಕ್ರ ಎಸೆತ (ತೃತೀಯ) ಬಹುಮಾನ ಗಳಿಸಿದ್ದಾರೆ. ಬಾಲಕರ ವಿಭಾಗದಲ್ಲಿ ಕೃಪಾಲ್.ಪಿ.ಕೆ (ಕೆಮ್ಮಾಯಿಯ ಪ್ರಕಾಶ್.ಬಿ, ಸುನೀತಾ ಸಿ.ಎಚ್ ದಂಪತಿ ಪುತ್ರ) 600 ಮೀಟರ್ (ಪ್ರಥಮ), 400 ಮೀಟರ್ (ದ್ವಿತೀಯ), 200 ಮೀಟರ್ (ತೃತೀಯ), 4×100 ಮೀಟರ್ ರಿಲೇ (ದ್ವಿತೀಯ), ಅಭಿಶ್ಯಾಮ (ಪರ್ಲಡ್ಕ ಮುರಳೀಧರ್, ರಾಜೇಶ್ವರಿ ದಂಪತಿ ಪುತ್ರ) ಎತ್ತರ ಜಿಗಿತ (ಪ್ರಥಮ), ಮನ್ವಿತ್ ನೆಕ್ಕರೆ (ನೆಕ್ಕರೆ ಉಮೇಶ್.ಎನ್ , ಕವಿತಾ ದಂಪತಿ ಪುತ್ರ) ಉದ್ದ ಜಿಗಿತ (ತೃತೀಯ), 4×100 ಮೀಟರ್ ರಿಲೇ (ದ್ವಿತೀಯ), ಮನ್ವಿತ್.ಎಂ. ರೈ (ದರ್ಬೆ ಮಂಜುನಾಥ್ ರೈ, ಪ್ರವೀಣಾ ರೈ ದಂಪತಿ ಪುತ್ರ) ಚಕ್ರ ಎಸೆತ (ತೃತೀಯ), 4×100 ಮೀಟರ್ ರಿಲೇ (ದ್ವಿತೀಯ), ಲಕ್ಷ್ಮೀ ನಮನ್ (ಲಕ್ಷ್ಮೀ ಬೆಟ್ಟ ಜನಾರ್ದನ, ವೀಣಾ ಜನಾರ್ದನ್ ದಂಪತಿ ಪುತ್ರ) 4×100 ಮೀಟರ್ ರಿಲೇ (ದ್ವಿತೀಯ) ಬಹುಮಾನ ಗಳಿಸಿರುತ್ತಾರೆ.
ಕಿಶೋರ ವರ್ಗದ ಬಾಲಕಿಯರ ವಿಭಾಗದಲ್ಲಿ ವಂಶಿ.ಬಿ.ಕೆ (ಬಪ್ಪಳಿಗೆ ಕಮಲಾಕ್ಷ, ಜಯಲತಾ ದಂಪತಿ ಪುತ್ರಿ) 100 ಮೀಟರ್ (ಪ್ರಥಮ), 200 ಮೀಟರ್ (ಪ್ರಥಮ), 110 ಮೀಟರ್ ಹರ್ಡಲ್ಸ್ (ಪ್ರಥಮ), 4×100 ಮೀಟರ್ ರಿಲೇ (ಪ್ರಥಮ), 4×400 ಮೀಟರ್ ರಿಲೇ (ಪ್ರಥಮ), ಅನ್ನಿಕಾ.ಎಂ (ಚಾರ್ವಾಕ ಎ.ಎಸ್.ಐ ಕೃಷ್ಣಪ್ಪ.ಎಂ, ಶಿಕ್ಷಕಿ ವಾಣಿಶ್ರೀ ದಂಪತಿ ಪುತ್ರಿ) 3000 ಮೀಟರ್ (ಪ್ರಥಮ), 1500 ಮೀಟರ್ (ಪ್ರಥಮ), 4×400 ಮೀಟರ್ ರಿಲೇ (ಪ್ರಥಮ), ಬಿ.ಲಿಖಿತಾ ರೈ (ಚಣಿಲ ಬಿ.ಜಗನ್ನಾಥ್ ರೈ, ಗೀತಾ.ಜೆ.ರೈ ದಂಪತಿ ಪುತ್ರಿ) 4×100 ಮೀಟರ್ ರಿಲೇ (ಪ್ರಥಮ), 4×400 ಮೀಟರ್ ರಿಲೇ (ಪ್ರಥಮ), 400 ಮೀಟರ್ (ದ್ವಿತೀಯ), ರಿದ್ಧಿ.ಸಿ.ಶೆಟ್ಟಿ ( ಪುಂಡಿಕಾಯಿ ಚಿದಾನಂದ ಶೆಟ್ಟಿ, ಸತ್ಯವತಿ.ಸಿ.ಶೆಟ್ಟಿ ದಂಪತಿ ಪುತ್ರಿ) 400 ಮೀಟರ್ (ದ್ವಿತೀಯ), 800 ಮೀಟರ್ (ದ್ವಿತೀಯ) 4×100 ಮೀಟರ್ ರಿಲೇ (ಪ್ರಥಮ), ಸಾನ್ವಿ.ಎಸ್.ಪಿ. (ಪಳಂಬೆ ನಿವೃತ್ತ ಯೋಧ ಡಿ.ಸುಂದರ ಪೂಜಾರಿ, ಶಿಕ್ಷಕಿ ಭವಿತಾ.ಕೆ ದಂಪತಿ ಪುತ್ರಿ) 100 ಮೀಟರ್ (ದ್ವಿತೀಯ), 200 ಮೀಟರ್ (ತೃತೀಯ), 4×100 ಮೀಟರ್ ರಿಲೇ (ಪ್ರಥಮ), ಸಮೃದ್ಧಿ.ಜೆ.ಶೆಟ್ಟಿ (ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಹರಿಣಾಕ್ಷಿ.ಜೆ.ಶೆಟ್ಟಿ ದಂಪತಿ ಪುತ್ರಿ) ಎತ್ತರ ಜಿಗಿತ (ಪ್ರಥಮ), ಉದ್ದ ಜಿಗಿತ (ದ್ವಿತೀಯ), ಶ್ರದ್ಧಾ ಲಕ್ಷ್ಮೀ (ತಾರಿಗುಡ್ಡೆ ರವಿಶಂಕರ್, ಅನುಪಮಾ ದಂಪತಿ ಪುತ್ರಿ) ಉದ್ದ ಜಿಗಿತ (ಪ್ರಥಮ), ಧನ್ಯಶ್ರೀ (ಬಲ್ನಾಡು ಪ್ರಸನ್ನ.ಬಿ, ಮನೋರಮಾ.ಪಿ ದಂಪತಿ ಪುತ್ರಿ) ಹ್ಯಾಮರ್ ಎಸೆತ (ದ್ವಿತೀಯ), ಚಕ್ರ ಎಸೆತ (ದ್ವಿತೀಯ), ಪವಿತ್ರಾ (ಮೀನಾವು ಕೇಶವದಾಸ್, ಸುಭಾಷಿಣಿ ದಂಪತಿ ಪುತ್ರಿ) ಈಟಿ ಎಸೆತ (ದ್ವಿತೀಯ), ಹ್ಯಾಮರ್ ಎಸೆತ (ತೃತೀಯ) ಬಹುಮಾನ ಗಳಿಸಿರುತ್ತಾರೆ. ಬಾಲಕರ ವಿಭಾಗದಲ್ಲಿ ಚರಣ್ ಕುಮಾರ್ (ಅಳಿಕೆ ದೇವಳಗುಳಿ ಕೃಷ್ಣ ಕುಮಾರ್, ಪ್ರೇಮಾ ದಂಪತಿ ಪುತ್ರ) 3000 ಮೀಟರ್ (ಪ್ರಥಮ), 5 ಕಿಲೋಮೀಟರ್ ನಡಿಗೆ (ಪ್ರಥಮ), 4×400 ಮೀಟರ್ ರಿಲೇ (ದ್ವಿತೀಯ), ಸಚಿತ್.ಪಿ.ಕೆ (ಕೆಮ್ಮಾಯಿಯ ಪ್ರಕಾಶ್.ಬಿ, ಸುನೀತಾ ಸಿ.ಎಚ್ ದಂಪತಿ ಪುತ್ರ) 800 ಮೀಟರ್ (ಪ್ರಥಮ), 400 ಮೀಟರ್ (ಪ್ರಥಮ), 4×400 ಮೀಟರ್ ರಿಲೇ (ದ್ವಿತೀಯ), 4×100 ಮೀಟರ್ ರಿಲೇ (ತೃತೀಯ), ಪ್ರಥಮ್.ಎಂ.ಪಿ (ಪಡ್ನೂರು ಪದ್ಮಪ್ಪ ಪೂಜಾರಿ, ಮಾಲತಿ.ಬಿ. ದಂಪತಿ ಪುತ್ರ) ಹ್ಯಾಮರ್ ಎಸೆತ (ಪ್ರಥಮ), ಚಕ್ರ ಎಸೆತ (ದ್ವಿತೀಯ), ಆಶ್ರಯ್.ಎನ್ ( ಕೆಮ್ಮಿಂಜೆ ಶಶಿಧರ್.ಎನ್, ರಾಜೀವಿ ದಂಪತಿ ಪುತ್ರ) 800 ಮೀಟರ್ (ದ್ವಿತೀಯ), ಸಾತ್ವಿಕ್.ಆರ್ (ರೆಂಜ ಆರ್.ಸಿ. ನಾರಾಯಣ್, ಸುಮಾ ದಂಪತಿ ಪುತ್ರ) ಟ್ರಿಪಲ್ ಜಂಪ್ ( ದ್ವಿತೀಯ), 110 ಮೀಟರ್ ಹರ್ಡಲ್ಸ್ (ತೃತೀಯ), 4×100 ಮೀಟರ್ ರಿಲೇ (ತೃತೀಯ), ಅಮಿತ್ ಬೋರ್ಕರ್ (ದರ್ಬೆ ಮೋಹನ್ ಚಂದ್ರ ಬೋರ್ಕರ್, ನಳಿನಿ ದಂಪತಿ ಪುತ್ರ) 4×400 ಮೀಟರ್ ರಿಲೇ (ದ್ವಿತೀಯ), 4×100 ಮೀಟರ್ ರಿಲೇ (ತೃತೀಯ), ಧನ್ ರಾಜ್ (ಹಲಂಗ ವಿಶ್ವನಾಥ ಗೌಡ, ಯಶೋದಾ ದಂಪತಿ ಪುತ್ರ) 4×400 ಮೀಟರ್ ರಿಲೇ (ದ್ವಿತೀಯ), ಪ್ರಖ್ಯಾತ್ (ಕೆಮ್ಮಿಂಜೆ ಹರಿಯ ನಾಯಕ್.ಸಿ.ಎಚ್ , ವಾರಿಜ ದಂಪತಿ ಪುತ್ರ) ಎತ್ತರ ಜಿಗಿತ (ತೃತೀಯ), ಹಾರ್ದಿಕ್.ಪಿ.ಕೆ (ಕೋಡಿಂಬಾಡಿ ಪುರುಷೋತ್ತಮ್, ಶಿಕ್ಷಕಿ ಪುಷ್ಪಲತಾ ದಂಪತಿ ಪುತ್ರ) 3000 ಮೀಟರ್ (ತೃತೀಯ) ಬಹುಮಾನ ಗಳಿಸಿರುತ್ತಾರೆ.
ವೈಯಕ್ತಿಕ ಚಾಂಪಿಯನ್ ಶಿಶುವರ್ಗದ ಬಾಲಕಿಯರ ವಿಭಾಗದಲ್ಲಿ ವಂಶಿತಾ, ಬಾಲವರ್ಗದ ಬಾಲಕಿಯರ ವಿಭಾಗದಲ್ಲಿ ಶ್ರೀವರ್ಣಾ, ಕಿಶೋರ ವರ್ಗದ ಬಾಲಕಿಯರ ವಿಭಾಗದಲ್ಲಿ ವಂಶಿ.ಬಿ.ಕೆ, ಬಾಲಕರ ವಿಭಾಗದಲ್ಲಿ ಚರಣ್ ಕುಮಾರ್ ಹಾಗೂ ಸಚಿತ್.ಪಿ.ಕೆ ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿರುತ್ತಾರೆ. ಶಿಶು ವರ್ಗ, ಬಾಲ ವರ್ಗ ಮತ್ತು ಕಿಶೋರ ವರ್ಗದ ಬಾಲಕಿಯರ ವಿಭಾಗದ ಮೂರೂ ಸಮಗ್ರ ಪ್ರಶಸ್ತಿಗಳನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತನ್ನ ಮುಡಿಗೇರಿಸಿಕೊಂಡಿದೆ. ಮಾತ್ರವಲ್ಲದೇ ಒಟ್ಟಾರೆಯಾಗಿ 240 ಅಂಕಗಳೊಂದಿಗೆ “ಸಮಗ್ರ ತಂಡ ಪ್ರಶಸ್ತಿ”ಯನ್ನೂ ಕೂಡ ಜಯಿಸಿಕೊಂಡು ರಾಜ್ಯಮಟ್ಟದಲ್ಲಿ ಭಾಗವಹಿಸುವ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ದೈಹಿಕ ಶಿಕ್ಷಣ ವಿಭಾಗ ಮುಖ್ಯಸ್ಥರಾದ ಶ್ರೀ ಭಾಸ್ಕರ ಗೌಡ ಮುಂಗ್ಲಿಮನೆ ಇವರ ಮಾರ್ಗದರ್ಶನದಲ್ಲಿ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಆಶಾಲತಾ ಹಾಗೂ ಶ್ರೀಮತಿ ನಮಿತಾ.ಕೆ.ಕೆ, ಶ್ರೀ ದೀಪಕ್, ಶ್ರೀಮತಿ ರಶ್ಮಿ.ಎಚ್.ಕೆ ಮತ್ತು ಶ್ರೀ ಪವನ್ ಕುಮಾರ್ ಸಹಕಾರದೊಂದಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಗಿರೀಶ್ ಕಣಿಯಾರು ಮತ್ತು ಶ್ರೀಮತಿ ವಾಣಿಶ್ರೀ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ತರಬೇತುಗೊಳಿಸಿರುತ್ತಾರೆ.
ತಂಡದ ಪ್ರಧಾನ ವ್ಯವಸ್ಥಾಪಕರಾಗಿ ಸಹಶಿಕ್ಷಕ ವೆಂಕಟೇಶ್ ಪ್ರಸಾದ್ ಮತ್ತು ಸಹಾಯಕ ವ್ಯವಸ್ಥಾಪಕರಾಗಿ ಸಹಶಿಕ್ಷಕಿಯರಾದ ಲತಾ ಕುಮಾರಿ ಹಾಗೂ ಅಶ್ವಿನಿ ರಾವ್ ಭಾಗವಹಿಸಿರುತ್ತಾರೆ ಎಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.