ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್ ನ ಪದಾಧಿಕಾರಿಗಳ ಪದಗ್ರಹಣ

0

ಸಮಾಜಕ್ಕೆ ಹೊಸತನವನ್ನು ನೀಡುವ ಕೆಲಸವಾಗಬೇಕು: ಟಿ. ನಾರಾಯಣ ಭಟ್

ಕಾಂಪಿಟೀಶನ್ ಗಿಂತ ಕೋಪರೇಶನ್ ಶ್ರೇಷ್ಠವಾದುದು: ಆನಂದ್ ಎಸ್.ಕೆ.

ಪುತ್ತೂರು: ನಾವು ಜೀವನದಲ್ಲಿ ಮಾಡಿದ ಒಳ್ಳೆಯ ಕೆಲಸ ನಮ್ಮನ್ನು ಕಾಪಾಡುತ್ತದೆ. ಓರ್ವ ವ್ಯಕ್ತಿಯ ಸಂಪಾದನೆಗಿಂತ ಆತ ಸಮಾಜಕ್ಕೆ ನೀಡಿದ‌ ಕೊಡುಗೆಗಳೇ ಶ್ರೇಷ್ಠ. ವಿದ್ಯಾವಂತರಾದ ನಾವು ಸಮಾಜಕ್ಕೆ ಹೊಸತನವನ್ನು ನೀಡುವ ಕೆಲಸವಾಗಬೇಕು. ಆಗ ಮಾತ್ರ ಸಮಾಜದಲ್ಲಿ‌ ನಾವು ಬೆಳಗಲು‌ ಸಾಧ್ಯ. ಸಂಘಟನೆಗಿರುವ ಶಕ್ತಿ ಬೇರೆ ಕಡೆ ಸಿಗಲು ಸಾಧ್ಯವಿಲ್ಲ. ನಾವು ಯೋಚನೆ ಮಾಡಬೇಕಾದ ಕಾಲಘಟ್ಟದಲ್ಲಿದ್ದೇವೆ. ಈಗಿನ ಕಾಲಘಟ್ಟದಲ್ಲಿ ಹೊಂದಾಣಿಕೆ ಅತೀ ಅಗತ್ಯ. ನಮ್ಮೊಳಗಿನ ಆತ್ಮೀಯತೆಯ ಸಂಬಂಧ ನಮ್ಮ ಬೆಳವಣಿಗೆಗೆ ಸಹಕಾರಿಯಾಗಲಿದೆ. ನಮ್ಮಲ್ಲಿ ಸಂಘಟನೆಗಳು ಅನಿವಾರ್ಯ ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರಾದ ಟಿ. ನಾರಾಯಣ ಭಟ್ ರವರು ಹೇಳಿದರು.

ಅವರು ಅ.12ರಂದು ಪುತ್ತೂರಿನ ಮಾಸ್ಟರ್ ಪ್ಲಾನರಿಯ ಸರ್.ಎಂ.ವಿ.ಹಾಲ್ ನಲ್ಲಿ ನಡೆದ ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್‍ಸ್(ಪೇಸ್)ನ 2022-23 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಸ್ಪೂರ್ತಿದಾಯಕ ಕೆಲಸಗಳನ್ನು ಪುತ್ತೂರಿನ ಇಂಜಿನಿಯರ್ಸ್ ನಿಂದ ಆಗಲಿ.
ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿದ ತನ್ನ‌ ಮಕ್ಕಳನ್ನು‌ ಊರಿಗೆ ಕರೆತಂದು ಇಲ್ಲಿನ‌ ಜನರಿಗೆ ಸಹಕಾರವಾಗುವ ಉಧ್ಯಮವನ್ನು ಆರಂಭಿಸುವಂತೆ ಪ್ರೇರಣೆ ನೀಡಿದವರು ಎಸ್.ಕೆ. ಆನಂದರವರ ವ್ಯಕ್ತಿತ್ವ ಶ್ರೇಷ್ಠವಾದುದು. ಎಲ್ಲರೂ ಒಟ್ಟಾಗಿ ಸೇರಿ ಸಂಘಟನೆಯ ಬಲವನ್ನು ಹೆಚ್ಚಾಗಿಸಿದಾಗ ನಮ್ಮ ರಕ್ಷಣೆ ಸಾಧ್ಯ. ಮೂಲಭೂತ ವ್ಯವಸ್ಥೆಯ ಬದಲಾವಣೆಯಿಂದ ಸಮಾಜಕ್ಕೆ ಹೆಚ್ಚು ಉಪಕಾರಿಯಾಗಿದೆ. ನಮ್ಮೊಳಗಿನ ಬಿನ್ನಭಿಪ್ರಾಯವನ್ನು ತಿಳಿಗೊಳಿಸಲು ಸಂಘಟನೆಯ ಪಾತ್ರ ಮಹತ್ವದ್ದಾಗಿದೆ. ಸಂಘಟನೆಗಳು ಬುದುಕಿಗೆ ಅನಿವಾರ್ಯ. ಅದರಿಂದಾಗಿ ನಾವು ಮತ್ತಷ್ಟು ಉನ್ನತಿಗೆರಲು ಸಾಧ್ಯ. ಹಿರಿಯರ ಅನುಭವ ನಮ್ಮ ಬಾಳಿಗೆ ದಾರಿ ದೀವಿಗೆ. ಸಮಾಜದಲ್ಲಿ ಬಾಳಿ ಬದುಕಲು ಹಿರಿಯರ ಮಾರ್ಗದರ್ಶನ ಸಹಕಾರಿ. ಒಳ್ಳೆಯ ಅವಕಾಶಗಳನ್ನು ಸದುಪಯೋಗ ಪಡಿಸುವ ಗುಣ ನಿಮ್ಮದಾಗಲಿ. ತಳಮಟ್ಟದ ಜನರೊಂದಿಗೆ ಬೆರೆತಾಗ ನಾವು ಮತ್ತಷ್ಟು ಮೇಲಕ್ಕೇರಲು‌ ಸಾಧ್ಯ. ವಿದ್ಯಾವಂತರಲ್ಲಿ ಇಂತಹ ಜಾಯಮಾನ ಕಡಿಮೆಯಾಗುತ್ತಿದೆ. ಸಮಾಜದ ಋಣದಲ್ಲಿ ನಾವಿದ್ದೇವೆ. ಸಮಾಜದ ಏಳಿಗೆಗೆ ನಮ್ಮಿಂದಾದ ಸಹಕಾರವನ್ನು ನೀಡೋಣ ಎಂದರು.

ಪೇಸ್ ನ ಗೌರವಾಧ್ಯಕ್ಷರಾದ ಮಾಸ್ಟರ್ ಪ್ಲಾನರಿಯ ಆನಂದ್ ಕುಮಾರ್ ಎಸ್.ಕೆ. ಮಾತನಾಡಿ ಪ್ರತಿಯೊಂದು ಯಶಸ್ಸಿನ ಹಿಂದೆ ಕಷ್ಟ ಇದ್ದೇ ಇದೆ. ಕಾಂಪಿಟೀಶನ್ ಮನುಷ್ಯನ ಬಾಳಿಗೆ ಮಾರಕ. ಕಾಂಪಿಟೀಶನ್ ಗಿಂತ ಕೋಪರೇಶನ್ ಶ್ರೇಷ್ಠವಾದುದು. ನಮ್ಮಲ್ಲಿ ಹೃದಯವಂತಿಕೆ ಅಗತ್ಯ. ಸಮಾಜದಲ್ಲಿ ಮೇಲು ಕೀಳೆಂಬ ಭಾವವಿರದೆ ಎಲ್ಲರೂ ಒಂದೇ ಎನ್ನುವ ಭಾವದಲಿ ಮುಂದುವರಿಯಬೇಕು.
ಸಮಾಜದಲ್ಲಿ ಪ್ರತಿಯೋರ್ವರಿಗೂ ಗೌರವ ಕೊಡುವ ಮನಸ್ಸು ನಮ್ಮದಾಗಬೇಕು. ಸಮಾಜದಲ್ಲಿ ಸಮಾನತೆಯನ್ನು ಕಾಯ್ದುಕೊಳ್ಳಬೇಕು. ಎಲ್ಲರೂ ಒಂದಾಗಿ ಕೆಲಸ ಮಾಡೋಣ, ಗೆಲುವನ್ನು ನಮ್ಮದಾಗಿಸೋಣ ಎಂದರು.

ಇಂಜಿನಿಯರ್ ವಸಂತ ಭಟ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸದುದ್ದೇಶಗಳನ್ನು ಇಟ್ಟುಕೊಂಡು ಆರಂಭಿಸಿದ ನಮ್ಮ ಈ ಒಂದು ಸಂಸ್ಥೆ ಸಮಾಜಕ್ಕೆ ಹಲವಾರು ಕೊಡುಗೆಗಳನ್ನು ನೀಡಿದೆ. ಇಂಜಿನಿಯರ್ ಮಿತ್ರರನ್ನು ಪ್ರೇರೇಪಿಸುವ ಹಲವಾರು ಕಾರ್ಯಾಗಾರವನ್ನು ಪೇಸ್ ನಡೆಸಿದೆ. ಕಳೆದ ಹದಿನೇಳು ವರುಷಗಳ ಹಿಂದೆ ಆರಂಭವಾದ ಈ ಸಂಸ್ಥೆ ಹಲವಾರು ಬದಲಾವಣೆಗಳೊಂದಿದೆ ಮುಂದುವರೆಯುತ್ತಿದೆ ಎಂದರು.

ಎರಡನೇ ಬಾರಿಗೆ ಪುನರಾಯ್ಕೆಯಾಗಿರುವ ಪೇಸ್ ನ ಅಧ್ಯಕ್ಷರಾದ ಮಾಸ್ಟರ್ ಪ್ಲಾನರಿಯ ಅಕ್ಷಯ್ ಎಸ್.ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ನಿಕಟಪೂರ್ವ ಅಧ್ಯಕ್ಷರಾದ ನೆಹರುನಗರ ಮಿತ್ತೂರು ಕನ್‌ಸ್ಟ್ರಕ್ಷನ್‌ನ ರಮೇಶ್ ಭಟ್ ಎಂ.ಹೆಚ್, ನಿರ್ಗಮಿತ ಉಪಾಧ್ಯಕ್ಷರಾದ ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರಾದ ಶಿವರಾಮ್ ಎಂ.ಎಸ್., ಕಾರ್ಯದರ್ಶಿ ನೆಹರೂನಗರ ಅಜರ ಕನ್ಸಲ್ಟೆನ್ಸಿಯ ರವೀಶ್ ಎಲ್.ಆರ್. ನೂತನ ಉಪಾಧ್ಯಕ್ಷರಾದ ವಿಟ್ಲ ಶ್ರೀಮಾತಾ ಕನ್ಸ್ ಸ್ಟ್ರೆಕ್ಷನ್ ಸತ್ಯಗಣೇಶ್ ಎಂ., ಕಾರ್ಯದರ್ಶಿ ಪರಿಕಲ್ಪನಾ ಆರ್ಕಿಟೆಕ್ಟ್ ನ ರಾಮ್ ಪ್ರಕಾಶ್ ಟಿ.ಎಸ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಧ್ಯಕ್ಷರಾದ ಮಾಸ್ಟರ್ ಪ್ಲಾನರಿಯ ಅಕ್ಷಯ್ ಎಸ್.ಕೆ.ರವರು ನಿರ್ಗಮಿತ ಜೊತೆಕಾರ್ಯದರ್ಶಿ ನೆಹರೂನಗರ ಸೃಷ್ಠಿ ಕನ್ ಸ್ಟ್ರಕ್ಷನ್ ನ ಶಿವಪ್ರಸಾದ್ ಟಿ., ಕೋಶಾಧಿಕಾರಿ ಪುತ್ತೂರು ಆಶ್ರಯ ಕನ್‌ಸ್ಟ್ರಕ್ಷನ್ಸ್‌ನ ಜಯಪ್ರಕಾಶ್ ಎ.ಎಲ್., ನಿರ್ದೇಶಕರಾದ ರಾಜಶೇಖರ್, ಪ್ರಶಾಂತ್, ಎ.ಆರ್. ರಾಮ್ ಪ್ರಕಾಶ್, ದಿನೇಶ್ ಭಟ್, ಜಯಗುರು ಆಚಾರ್ ಹೆಚ್.ರವರನ್ನು ಹೂ ನೀಡಿ ಬೀಳ್ಕೊಟ್ಟರು.

ನೂತನ ಜೊತೆಕಾರ್ಯದರ್ಶಿ ಶ್ರೀದುರ್ಗಾ ಸ್ಟ್ರೆಚ್ಚರಲ್ ಕನ್ಸೆಲ್ಟೆನ್ಸಿಯ ಆಕರ್ಷ್ ಬಿ.ಎಸ್., ಕೋಶಾಧಿಕಾರಿ ಪುತ್ತೂರು ಆಶ್ರಯ ಕನ್‌ಸ್ಟ್ರಕ್ಷನ್ಸ್‌ನ ಜಯಪ್ರಕಾಶ್ ಎ.ಎಲ್., ನಿರ್ದೇಶಕರಾದ ರಾಜಶೇಖರ್, ಆಕಾಶ್ ಎಸ್.ಕೆ., ಶಿವಪ್ರಸಾದ್ ಟಿ., ಪ್ರಶಾಂತ್ ಆಚಾರ್ಯ
ಪ್ರತೀಕ್ ಪಿ.ಜಿ.ರವರು ರವರನ್ನು ಹೂ ನೀಡಿ‌ ಬರಮಾಡಿಕೊಂಡರು.
ಇದೇ ಸಂದರ್ಭದಲ್ಲಿ ಪೇಸ್ ನ ಗೌರವಾಧ್ಯಕ್ಷರಾದ ಮಾಸ್ಟರ್ ಪ್ಲಾನರಿಯ ಆನಂದ್ ಕುಮಾರ್ ಎಸ್.ಕೆ. ಹಾಗೂ ಅವರ ಪತ್ನಿ ರೇಖಾ ಆನಂದ್ ರವರನ್ನು ಪೇಸ್ ನ ಅಧ್ಯಕ್ಷರಾದ ಅಕ್ಷಯ್ ಎಸ್.ಕೆ. ಹಾಗೂ ಅತಿಥಿಗಳು ಸನ್ಮಾನಿಸಿದರು.

ಅಧ್ಯಕ್ಷರಾದ ಅಕ್ಷಯ್ ಎಸ್ .ಕೆ. ಹಾಗೂ ಕೇಶವ ಭಟ್ ರವರು ಹಾರ ಹಾಕಿ ಅತಿಥಿಗಳನ್ನು ಸ್ವಾಗತಿಸಿದರು.

ಹೊಸ ಸದಸ್ಯರಾಗಿ ಸೇರ್ಪಡೆಗೊಂಡ ಸುದರ್ಶನ್ ರವರನ್ನು ಹೂ ನೀಡಿ ಸ್ವಾಗತಿಸಲಾಯಿತು.
ಪೇಸ್ ನ ಮಾಜಿ ಅಧ್ಯಕ್ಷರಾದ ಹರೀಶ್ ಪುತ್ತೂರಾಯರವರು ಮುಖ್ಯ ಅತಿಥಿಯ ಪರಿಚಯ ಮಾಡಿದರು.

ವಸಂತ ಭಟ್ ಪ್ರಾರ್ಥಿಸಿದರು. ಪೇಸ್ ನ ಅಧ್ಯಕ್ಷರಾದ ಮಾಸ್ಟರ್ ಪ್ಲಾನರಿಯ ಅಕ್ಷಯ್ ಎಸ್.ಕೆ. ಸ್ವಾಗತಿಸಿದರು. ಕಾರ್ಯದರ್ಶಿ ಪರಿಕಲ್ಪನಾ ಆರ್ಕಿಟೆಕ್ಟ್ ನ ರಾಮ್ ಪ್ರಕಾಶ್ ಟಿ.ಎಸ್. ವಂದಿಸಿದರು.
ಸತ್ಯನಾರಾಯಣ ಭಟ್ ಹಾಗೂ ಮಾಸ್ಟರ್ ಪ್ಲಾನರಿಯ ಅರ್ಜುನ್ ಎಸ್.ಕೆ. ಕಾರ್ಯಕ್ರಮ ನಿರೂಪಿಸಿದರು.

ಪೇಸ್ ನಿಂದ ಹಲವಾರು ಸಮಾಜಮುಖಿ ಕೆಲಸಗಳಾಗಿವೆ

ಪೇಸ್ ನಿಂದ ಹಲವಾರು ಸಮಾಜಮುಖಿ ಕೆಲಸಗಳು ನಿರಂತರವಾಗಿ ನಡೆಯುತ್ತಿದೆ‌. ಇದೀಗಾಗಲೇ ನಾವೆಲ್ಲರೂ ಒಟ್ಟು ಸೇರಿ ಕೆಲವೊಂದು ಹೊಸ ಯೋಜನೆ, ಯೋಚನೆಯನ್ನು ಹಾಕಿಕೊಂಡಿದ್ದೇವೆ. ಅದನ್ನು ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ತರಲಿದ್ದೇವೆ. ಕಳೆದ ಅವಧಿಯಲ್ಲಿ ನನ್ನನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿ ಸಮಾಜಮುಖಿ ಕೆಲಸಗಳಿಗೆ ನನ್ನೊಂದಿಗೆ ಕೈಜೋಡಿಸಿದ ಎಲ್ಲರಿಗೂ ನಾನು ಅಭಾರಿಯಗಿದ್ದೇನೆ. ಇದೀಗ ಮುಂದಿನ ಅವಧಿಗೂ ನನ್ನನ್ನೇ ಅಧ್ಯಕ್ಷನನ್ನಾಗಿ ಮಾಡಿ ನನ್ನ ಜವಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದ್ದೀರಿ. ಮುಂದಿನ ಅವಧಿಯಲ್ಲಿಯೂ ನನ್ನಿಂದಾದಷ್ಟು ಸಾಮಾಜಿಕ ಕಳಕಳಿಯ ಕೆಲಸವನ್ನು ಮಾಡುತ್ತೇನೆ.

ಅಕ್ಷಯ್ ಎಸ್.ಕೆ.
ಅಧ್ಯಕ್ಷರು
ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್(ಪೇಸ್)

LEAVE A REPLY

Please enter your comment!
Please enter your name here